Showing posts with label ಹೊಡಿ ನಗಾರಿಮೇಲೆ ಕೈಯ್ಯ ಹೊಡಿ ನಗಾರಿಮೇಲೆ ಕೈಯ್ಯ kamalesha. Show all posts
Showing posts with label ಹೊಡಿ ನಗಾರಿಮೇಲೆ ಕೈಯ್ಯ ಹೊಡಿ ನಗಾರಿಮೇಲೆ ಕೈಯ್ಯ kamalesha. Show all posts

Monday, 6 September 2021

ಹೊಡಿ ನಗಾರಿಮೇಲೆ ಕೈಯ್ಯ ಹೊಡಿ ನಗಾರಿಮೇಲೆ ಕೈಯ್ಯ ankita kamalesha

 ರಾಗ: ಹಂಸಾನಂದಿ ತಾಳ: ಆದಿ

ಹೊಡಿ ನಗಾರಿಮೇಲೆ ಕೈಯ್ಯ ಹೊಡಿ ನಗಾರಿಮೇಲೆ ಕೈಯ್ಯ


ಪೊಡವಿಯೊಳಗೆ ನಮ್ಮೊಡೆಯ ಗುರುರಾಘ-

ವೇಂದ್ರಯತಿಗೆ ಸಮರಿಲ್ಲವಿಲ್ಲೆಂದು ಅ.ಪ


ಖಡುಗಸೆಳೆದು ಪಲ್ಗಡಿದು ಕಡು ಪಾಪಿ ನಿ-

ನ್ನೊಡೆಯನ ತೋರೆನೆ ಪೊಡಮಡಲಾಗಿ

ಒಡನೆ ಕಂಬದಿಂದೊಡೆದುಬಂದ ಜಗ-

ದೊಡೆಯನ ತೋರಿದ ಪ್ರಹ್ಲಾದನಿವನೆಂದು 1

ಕನ್ನಡರಾಯನ ಪಾಪವಕಳೆದು

ಮನ್ನಣೆಯಿಂದಾ ರಾಜ್ಯವನಾಳಿ

ಘನ್ನ ಕೃತಿತ್ರಯವ ಗೈದು ಮಧ್ವಮತ-

ವನ್ನು ಪೋಷಿಸಿದ ವ್ಯಾಸಾರ್ಯನಿವನೆಂದು 2

ಮಧ್ವಯತಿಯ ವರಭಾಷ್ಯಕೆ ಜಯಮುನಿ

ಪದ್ಧತಿಯಿಂದಲಿ ಟೀಕೆಯರಚಿಸೆ

ಶ್ರದ್ಧೆಯಿಂದದಕೆ ಟಿಪ್ಪಣಿಗೈದ ಜ-

ಗದ್ಗುರು ಹಂಸಾನಂದಕನೆಂದು 3

ಸುಖಮುನಿ ಪಾರಂಪರ್ಯದಿ ಬಂದ

ಸಕಲವಿದ್ಯೆಗಳಿಗಾಶ್ರಯನೀತ

ಶ್ರೀಕರ ಮಧ್ವಾಸ್ಥಾನ ಸಾಮ್ರಾಟ

ಲೋಕವಂದ್ಯ ಜಗದೇಕಗುರುವೆಂದು 4

ವರಮಂತ್ರಾಲಯ ಮಂದಿರನೀತ

ಪರಿಪರಿಮಹಿಮೆಯ ತೋರಿಸುವಾತ

ಪರಮಹಂಸ ಕುಲದೀಪಕ ದಿನಮಣಿ

ಶರಣಜನಾವನ ಮಂದಾರನಿವನೆಂದು 5

ಮೂಲರಾಮ ಕಮಲೇಶನ ದಯದಿಂದ- 

ನಿಲದೇವನಾವೇಶದಿ ಮೆರೆದು

ಒಲುಮೆಯಿಂದ ಪುರುಷಾರ್ಥಕೊಡುವ ಪ್ರಭು

ಇಳೆಯೊಳಿವಗೆ ಸಮರಿಲ್ಲವಿಲ್ಲೆಂದು 6

***

nadanamakriya - aadi


P: hoDI nagAri mEla kaiya ghaTa ghaTa hoDI nagARi mEla kaiya


A: mrDa vandyana pada biDade bhajiparagha biDisi poreva jagadoDeyane paranendu


C1: vEdagamya sakalArtinivAraka mOdavIva madhusUdana paranendu


2: niSTeyinda manamuTTi bhajipa janariSTava koDuva shrI krSNane paranendu


3: vandipa janaragha vrnda kaLedu mudadinda poreva mukundane paranendu


4: vAsudEva tanna dAsa janara hrdvAsanAgi iha shrIshane paranendu


5: indirEsha paranendu bhajisuvara bandu kAiva gOvindane paranendu


6: gAnalOla tanna dhyAnisuvaranella mAnadinda kAiva shrInidhi paranendu


7: I prithvIyoLu vyApakanAgiha shrIpati purandara viTTalane paranendu


 


Meaning: Beat your hand(kaiya) hard on the drum (NagAri is a big drum with leather top).


A: Saying that you will not leave the feet of the ‘vandya’ who is the owner of this world and who will protect you. .. Beat the drum.


C1: saying that he will remove all worries, and give all happiness ..beat the drum.


C6: Saying that the gAnalola will gracefully protect all those who pray to him ..beat the drum.


C7: Saying that shripati purandaravithala who is everywhere in this universe, is the supreme being

***