Audio by Vidwan Sumukh Moudgalya
ಶ್ರೀ ತಿರುಮಲದಾಸಾರ್ಯ ವಿರಚಿತ ( ಜನಾರ್ದನವಿಠಲಾಂಕಿತ )
" ನವವೃಂದಾವನದ ಸ್ತೋತ್ರ "
ರಾಗ : ಕಾಂಬೋಧಿ ಆದಿತಾಳ
ರತ್ನಗಳ ನೋಡಿ ಕೃತಾರ್ಥನಾದೆ
ಉತ್ತಮೋತ್ತುಮಾನಂದ ತೀರ್ಥರಾಬ್ಧಿ ಜನಿತ ನವ॥ಪ॥
ಧರಿಯೊಳಗೆ ಗಜಕೋಣಪುರ ಸಮೀಪದಿ
ಮೆರೆವ ಸರಿತ ಶ್ರೇಷ್ಠಳೊ ತುಂಗ ಮಧ್ಯಸ್ಥಿತಾ
ಶಿರಿ ಮೂಲರಾಮಸೀತಾ ವೇಣುಧರರಿಪ್ಪಾ
ವರ ವಿಟ್ಠಲ ಸ್ವಚಿತ್ತ ಯತಿವರರೆಂಬಾ ಸುನವ॥೧॥
ಎರಡೇಳು ವೃಂದಾವನದಿ ಪದ್ಮನಾಭ
ತೀರ್ಥರೂ ಕವೀಂದ್ರರೂ ಸುವಾಗೀಶಯತಿಯೂ
ಗುರುವ್ಯಾಸಮುನಿ ಶ್ರೀನಿವಾಸ ಸುಧೀಯಿಂದ್ರ
ರಘುವರ್ಯರಾ ಶ್ರೀರಾಮತೀರ್ಥಾಖ್ಯ ನವ॥೨॥
ಮರಳೆ ವ್ಯಾಸೋತ್ತುಮಾಕರ್ನಾಟಕವೆಂಬ
ಎರಡೊಂದು ಮತದಲ್ಲಿ ಚತುರಾ ಚತುರರೂ
ಮೆರೆದರು ಜನಾರ್ದನವಿಠಲನ ಪದ ಸರ-
ಸಿರೋಹ ಭ್ರಮರಾರೆಂದೆನಿಸಿಕೊಂಬ ಸುನವ॥೩॥
****
" ನವವೃಂದಾವನದ ಸ್ತೋತ್ರ "
ಪದ್ಮನಾಭಂ ಕವೀಂದ್ರಂ ಚ ವಾಗೀಶಂ ವ್ಯಾಸರಾಜಕಂ
ರಘುವರ್ಯಂ ಶ್ರೀನಿವಾಸಂ ರಾಮತೀರ್ಥ ತಥೈವ ಚ।
ಶ್ರೀ ಸುಧೀಂದ್ರ ಚ ಗೋವಿಂದಂ
ನವವೃಂದಾವನಂ ಭಜೇ॥