Showing posts with label ಕಾಲಕಾಲಕ್ಕೆ ಗುರುಗಳ ಕಾಲಿಗೆ ಎರಗುವೆ ಕೋಲೆನ್ನಿ ಕೆಲದೆಯರು ಕೋಲೆನ್ನಿರೆ ramesha. Show all posts
Showing posts with label ಕಾಲಕಾಲಕ್ಕೆ ಗುರುಗಳ ಕಾಲಿಗೆ ಎರಗುವೆ ಕೋಲೆನ್ನಿ ಕೆಲದೆಯರು ಕೋಲೆನ್ನಿರೆ ramesha. Show all posts

Wednesday, 4 August 2021

ಕಾಲಕಾಲಕ್ಕೆ ಗುರುಗಳ ಕಾಲಿಗೆ ಎರಗುವೆ ಕೋಲೆನ್ನಿ ಕೆಲದೆಯರು ಕೋಲೆನ್ನಿರೆ ankita ramesha

 ..ಮುಯ್ಯಾ ತಿರುಗಿಸಿದ ಹಾಡು


ಕಾಲಕಾಲಕ್ಕೆ ಗುರುಗಳ ಕಾಲಿಗೆ ಎರಗುವೆ ಕೋಲೆನ್ನಿ ಕೆಲದೆಯರು ಕೋಲೆನ್ನಿರೆ ಪ.


ಫುಲ್ಲನಾಭನೆಂಬೊ ಮಲ್ಲಿಗೆ ಸರಮುಡಿದು ಉಲ್ಲಾಸ ಬಡವೊ ಗುರುಗಳ ಸೊಲ್ಲು ಸೊಲ್ಲಿಗೆ ನಮಿಸಿ 1

ವೀತ ದೋಷನೆಂಬೊ ನೂತನ ಪುಷ್ಪ ಮುಡಿದು ಪ್ರೀತಿ ಬಡುವಗುರುಗಳ ಮಾತು ಮಾತಿಗೆ ನಮಿಸಿ2

ಬಾಲೆ ಗುರುಗಳ ಹೃದಯ ಆಲಯ ವಶವಾದ ಬಾಲಗೋಪಾಲನೆಂಬೊನೀಲ ಮಾಣಿಕವೆ ಬಿಗಿದು 3

ಮತ್ತೆ ನಮ್ಮ ಗುರುಗಳ ಚಿತ್ತದಲಿ ವಶವಾದ ನಿತ್ಯ ಮೂರುತಿ ಎಂಬೊಮುತ್ತು ಮಾಣಿಕವೆ ಬಿಗಿದು4

ಗುರುಗಳ ಹೃದಯವೆಂಬೊಅರಮನೆ ವಶವಾದ ಸಿರಿ ರಮೆಯರಸನೆÉಂಬೊ ಬರಿಯ ಮಾಣಿಕವೆ ಬಿಗಿದು5

****