..
Kruti by ಸಿರಿಗುರುತಂದೆವರದವಿಠಲರು sirigurutandevarada vittala
ಸುಪರ್ಣಾದೇವಿ
ಜಗವ ಪಾವನ ಮಾಳ್ಪ ವರದ ಮಾತೆ ಪ
ಖಗರಾಜನಿಗೆ ಅತಿ ಪ್ರೀತಿ ಪಾತ್ರಳೆ ದೇವಿ ಅ.ಪ.
ವರಹ ರೂಪದ ನಾಶಿಕದಿಂದ ಉದ್ಭವಿಸಿವಾಗ್ದೇವಿ ಸುತನಿಂ ಜಗದೊಳಗೆ ಪರಿದುವದನದಿಂದಲಿ ನಿಮ್ಮ ನಾಮಸ್ಮರಣೆಯ ಮಾಡೆವೇಗದಿ ಬರುವ ತಿಮಿರಗಳ ನಾಶಮಾಳ್ಪೇ 1
ನೀನಾಗಿ ಕರುಣವ ಮಾಡೆ ನಾ ಪಾವನನುನಿನ್ನ ಪಾದದ ಮಹಿಮೆ ತೋರೆ ಜಗದಿನಿನ್ನ ಪತಿಯ ಪಾದ ಕಮಲದ ಮಹಿಮೆಯನುಉನ್ನತವಾಗಿ ತೊರೆನ್ನ ಹೃದಯದಲಿ 2
ಎನ್ನ ಪಿತನ ತಾತಾ ಬಾಳಾರ್ಯ ಪ್ರಭುಗಳುನಿನ್ನ ಪಾದದ ಧ್ಯಾನ ಅನುದಿನ ಮಾಡೆಯದುಪತಿಯ ಮಹಿಮೆಯನು ಶಿಷ್ಯರಿಗೆ ತೋರುತಲಿ ಚನ್ನ ಶ್ರೀಗುರುತಂದೆಗೋಪಾಲವಿಠಲ-ಪುರವ ಪೊಂದಿಸಿದ ಮರಿಯೇ 3
***