Showing posts with label ಶರಣು ಶರಣು ಲಿಂಗಾ ಶರಣು ಶ್ರೀ ಭಸಿತಾಂಗಾ vijaya vittala. Show all posts
Showing posts with label ಶರಣು ಶರಣು ಲಿಂಗಾ ಶರಣು ಶ್ರೀ ಭಸಿತಾಂಗಾ vijaya vittala. Show all posts

Thursday, 17 October 2019

ಶರಣು ಶರಣು ಲಿಂಗಾ ಶರಣು ಶ್ರೀ ಭಸಿತಾಂಗಾ ankita vijaya vittala

ವಿಜಯದಾಸ
ಶರಣು ಶರಣು ಲಿಂಗಾ | ಶರಣು ಶ್ರೀ ಭಸಿತಾಂಗಾ |
ಶರಣು ಗಗನ ಗಂಗಾಧರ ಗೋರಾಜ ತುರಂಗ |
ಗುರುಕುಲೋತ್ತುಂಗಾ ಪ

ಪುರಹರ | ಸಂತರ ಮನೋಹರ |
ಅಂತಕನ ಗೆದ್ದೆ | ದಂತಿ ಚರ್ಮವ ಪೊದ್ದೆ |
ಕಂತು ಮುನಿಯ ಗೆಲಿದೆ ಮಂತ್ರಿವಂದಿತ ಶೀಲ |
ಸಂತತಿಗಳ ಪಾಲ |
ಅಂತರಂಗದಲೆನ್ನ ಗ್ರಂಥಿಯ ಹರಿಸಿ ನಿರಂತರ ಸಂತರಿಸೋ 1

ಶುಕ ಯತಿಯೆ |
ವನದೊಳು ರಾಯನ | ವನುತಿಯ ಮಾಡಿದ |
ಘನ ಶೌರ್ಯನ ಶಿವನೆ ||
ಸನಕಾದಿಗಳ ಪರಿಯ | ಅನುದಿನದಲಿ ಗಿರಿಯ |
ಫಣಿಭೂಷಣ ಶಂಭೋ 2

ಅಹಂಕಾರಾತ್ಮನೆ ಶರ್ವ | ಮಹಾಕೇಶ ವಿಷಗ್ರೀವ |
ಬಹುದೂರ ಕೂಟ | ಮಹಿಧರ ನಿವಾಸನೆ |
ಮಹಿಧರ ತೀರದಿ ||
ಮಹಿಮೆಯ ಬೀರುತ್ತ | ರಹಸ್ಯದಲಿ ಮೆರೆವ |
ಶ್ರೀಹರಿ ವಿಜಯವಿಠ್ಠಲ ಸವೋತ್ತಮ | ನಹುದೆಂದು ಧೇನಿಪನೆ3
*********