Showing posts with label ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ guruvijaya vittala NAMBIDE NINNA PRANA GURU MUKHYAPRANA. Show all posts
Showing posts with label ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ guruvijaya vittala NAMBIDE NINNA PRANA GURU MUKHYAPRANA. Show all posts

Saturday 28 December 2019

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ ankita guruvijaya vittala NAMBIDE NINNA PRANA GURU MUKHYAPRANA

 ರಾಗ ಕಲ್ಯಾಣಿ      ಆದಿತಾಳ 
1st Audio by Mrs. Nandini Sripad




Krishna Mutt Udupi October 2019 (last para only)


 .kruti by modalakallu sheshadasaru
ಶ್ರೀ ಮೊದಲಕಲ್ಲು ಶೇಷದಾಸರು ಅಂಕಿತ ಗುರುವಿಜಯವಿಠ್ಠಲ

 ರಾಗ ಕಲ್ಯಾಣಿ      ಆದಿತಾಳ 

ನಂಬಿದೆ ನಿನ್ನಯ ಪಾದ ಮುಖ್ಯಪ್ರಾಣ
ನಂಬಿದೆ ನಿನ್ನಯ ಪಾದ ॥ ಪ ॥
ನಂಬಿದೆ ನಿನ್ನಯ ಪಾದಾಂಡಬರ ತೊಲಗಿಸಿ
ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೋ ॥ ಅ ಪ ॥ 

ಇಪ್ಪತ್ತು ಒಂದು ಸಾವಿರ ಐದೊಂದು ನೂರು
ಅಪ್ರತಿ ಹಂಸಮಂತ್ರ ।
ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿ
ತಪ್ಪಿಸೊ ಭವವ ಸಮ್ಮಿಪ್ಪದ ಜೀವರಿಗೆ ॥
ಅಪ್ಪನಂದದಿ ಪುಣ್ಯವಪ್ಪಂತೆ ಕರುಣಿಸೊ
ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೊ ॥ 1 ॥ 

ಹತ್ತೇಳು ಎರಡು ಯುತ ಸಾವಿರ ನಾಡಿ
ಸುತ್ತಿ ಸೂತ್ರಮಾರುತ ।
ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ
ನೆತ್ತಿಯ ದ್ವಾರದಿಂದಲೆತ್ತ ಪೋಗಲೀಸದೆ ॥
ತತ್ತುವರೊಳು ಜೀವೋತ್ತಮನೆ ಸತ್ -
ಚಿತ್ತೆನಗೆ ಕೊಡು ಉತ್ತರ ಧರಿಸೋ ॥ 2 ॥ 

ಅಂತರಂಗದ ಉಸಿರ ಹೊರಗೆ ಬಿಟ್ಟು
ಅಂತರಂಗಕ್ಕೆ ಸೇದುವ ।
ಪಂಥದೊಳು ನೀನೆ ಕಂತುಜನಕನಲ್ಲಿ
ಮಂತ್ರಿಯೆನೆಸಿ ಸರ್ವರಂತರ್ಯಾಮಿ ಆಗಿ ॥
ನಿಂತು ನಾನಾಬಗೆ ತಂತು ನಡಿಸುವ
ಹೊಂತಕಾರಿ ಗುಣವಂತ ಬಲಾಢ್ಯ ॥ 3 ॥ 

ಪಂಚಪರಣರೂಪನೆ ಸತುವಕಾಯ
ಪಂಚಾದ್ರಿಗಳ ಲೋಪನೆ ।
ಮುಂಚಿನ ಪರಮೇಷ್ಠಿ ಸಂಚಿತಗಾಮಿ ಬಿಡಿಸಿ
ಕೊಂಚ ಮಾಡೊ ಪ್ರಾರಬ್ಧ ॥
ವಂಚನೆ ಗೈಸದೆ ಅಂಚಂಚಿಗೆ ಪರಪಂಚವೆ ಓಡಿಸಿ
ಪಂಚವಕ್ತ್ರಹರಿಮಂಚದ ಗುರುವೆ ॥ 4 ॥ 

ಯೋಗಾಸನದೊಳಿಪ್ಪ ಯಂತ್ರೋದ್ಧಾರ
ಭಾಗವತ - ರಪ್ಪ ।
ಯೋಗೀಗಳೀಶವ್ಯಾಸಯೋಗಿಗೊಲಿದ ನ್ಯಾಸ
ಶ್ರೀತುಂಗಭದ್ರಾವಾಸ ಬಾಗುವೆ ಕೊಡು ಲೇಸ ॥
 ಶ್ರೀಗುರುವಿಜಯವಿಟ್ಠಲನ ಪಾದಕೆ
ಬಾಗುವ ಭವದೂರ ಜಾಗರಮೂರುತಿ ॥ 5 ॥
***

pallavi

nambide ninna pAda guru mukhyaprANa

anupallavi

nambide ninna pAda Dambhava tolagisi DimbadoLage

caraNam 1

hariya bimba polevante mADO ippattuvondu sAvira I idondunUru apratima hamsa mantrava
tappade dina dina vappu vandadi japisi tappiso bhavava samIppadi jIvake appanandadi puNya bappante karuNisO
kappu varNana kUDa voppisi pAlisO hattelu eradAyuta nAdiyolu suttisuttuva mAruta uttara lAliso utkramanadalli
nittiya dvAradinda etta pogaLIsade tattuvarolu jIvOttamane sat citta enage koDututtara lAlisO

caraNam 2

antarangada usura horage biTTu antarangakke seDuva panthadAlu nIne kantu janakanalli
mantriyenisi sarvAntaryAmiyAgi nintu nAnA bage tantu naDesuva hontakAri guNavanta balAdya
panca prANarUpane satvakAyA pancEndriyagaLappane muncina paramESTi sancitAgAmi biDisi
konca mADO prArabdha vancane gaisade ancancige parapancagaLoDisi pancavaktra hari mancada guruve

caraNam 3

yOgAsanadolippa yantrOdhAra bhAgavatarappa yOgigaLigIsha vyasayOgi golidanyAsa
shrI tungabhadranivAsa bAguve kUDu lesa shrI guru vijayaviTTalana pAdake bAgida bhavadUra jAgara mUruti
***


VYAKHYANA

 ನಂಬಿದೆ ನಿನ್ನಯ ಪಾದ ಮುಖ್ಯಪ್ರಾಣ 
 ನಂಬಿದೆ ನಿನ್ನಯ ಪಾದ ॥ ಪ ॥ 
 ನಂಬಿದೆ ನಿನ್ನಯ ಪಾದಾಂಡಬರ ತೊಲಗಿಸಿ 
 ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೋ ॥ ಅ ಪ ॥ 

( ಶ್ರೀಗುರುವಿಜಯವಿಟ್ಠಲ ಎಂಬಲ್ಲಿ ' ಶ್ರೀ ' ಎಂದರೆ ಲಕ್ಷ್ಮೀದೇವಿಗೆ ' ಗುರು ' ಜ್ಞಾನಸ್ಫೂರ್ತಿದಾಯಕನಾದ, ವಿಜಯವಿಟ್ಠಲ ಎಂದು ಅರ್ಥ. ' 

ಶ್ರೀಯೋऽಪಿ ಚ ಜ್ಞಾನ ಸ್ಫೂರ್ತಿಸ್ಸದಾ ತಸ್ಮೈ ಹರಯೇ ಗುರುವೇ ನಮಃ' ಎಂಬ ಪ್ರಮಾಣವನ್ನು ಗಮನಿಸಿ ಶ್ರೀವಿಜಯದಾಸಾರ್ಯಕೃತವಿದೆಂದೇ ತಿಳಿದರೆ ಸರಿ. ಚಿಪ್ಪಗಿರಿಯ ಮೂಲಪ್ರತಿಯಲ್ಲಿ ಈ ಪದ ಶ್ರೀವಿಜಯದಾಸಾರ್ಯರ ಪದಗಳ ಜೊತೆಯಲ್ಲೇ ಇದೆ. ಗುರುವಿಜಯರಾಯರ ಅಂದರೆ ಶ್ರೀಮೊದಲಕಲ್ಲು ಶೇಷದಾಸರ ಕೃತಿಸಂಗ್ರಹದ ಮೂಲಪ್ರತಿಯಲ್ಲಿ ಈ ಪದವಿಲ್ಲ.)

ಆಡಂಬರ ತೊಲಗಿಸಿ = ಡಾಂಭಿಕ ನಡವಳಿಕೆಗಳನ್ನು ಬಿಡಿಸಿ; ಡಿಂಬದೊಳಗೆ = ದೇಹದಲ್ಲಿ (ಈ ಸಾಧನದೇಹದಲ್ಲಿಯೇ ಶ್ರೀಹರಿಯ ಅಪರೋಕ್ಷವಾಗುತ್ತದೆ - ಸಾಧನಪೂರ್ತಿಯ ನಂತರ, ಶ್ರೀಭಾರತೀಶನ ಅನುಗ್ರಹದಿಂದ); ಬಿಂಬ ಪೊಳೆವಂತೆ = ಬಿಂಬರೂಪಿ ಶ್ರೀಹರಿಯು ಪ್ರಕಾಶಿಸುವಂತೆ (ಪ್ರತ್ಯಕ್ಷತೋರುವಂತೆ).

 ಇಪ್ಪತ್ತು ಒಂದು ಸಾವಿರ ಐದೊಂದು ನೂರು 
 ಅಪ್ರತಿ ಹಂಸಮಂತ್ರ । 
 ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿ 
 ತಪ್ಪಿಸೊ ಭವವ ಸಮ್ಮಿಪ್ಪದ ಜೀವರಿಗೆ ॥ 
 ಅಪ್ಪನಂದದಿ ಪುಣ್ಯವಪ್ಪಂತೆ ಕರುಣಿಸೊ 
 ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೊ ॥ 1 ॥ 

 ಇಪ್ಪತ್ತು ಒಂದುಸಾವಿರ ಐದೊಂದು ನೂರು = ೨೧,೬೦೦; ಅಪ್ರತಿ ಹಂಸಮಂತ್ರ = ಅಸದೃಶವಾದ ಹಂಸಮಂತ್ರವನ್ನು (' ಹಂಸಃಸೋऽಹಂ ಸ್ವಾಹಾ '; ಹಂಸಃ = ನಿರ್ದೋಷಿಯಾದ ಶ್ರೀಹರಿಯೇ, ನನ್ನ ಅಂತರ್ಯಾಮಿಯು - ಆತನಿಗೇ ನನ್ನನ್ನು ಸಮರ್ಪಿಸಿದ್ದೇನೆ, ಎಂಬರ್ಥದ ಮಹಾಮಂತ್ರ;) ತಪ್ಪದೆ = ಯಾವ ಕಾರಣದಿಂದಲೂ, ಎಂದೂ ಬಿಡದೆ; ದಿನದಿನದಿ = ಪ್ರತಿದಿನವೂ; ಒಪ್ಪದಿಂದಲಿ = ಒಪ್ಪವಾಗಿ (ಶ್ರೀಹರಿಪ್ರೀತಿಯಾಗುವಂತೆ); ಸಮ್ಮಿಪ್ಪದ ಜೀವರಿಗೆ = ನಿನ್ನನ್ನು ಭಕ್ತಿಯಿಂದ ಸೇವಿಸುವವರಿಗೆ; ಅಪ್ಪನಂದದಿ = ತಂದೆಯಂತೆ (ಪುತ್ರವಾತ್ಸಲ್ಯದಿಂದ); ಪುಣ್ಯವಪ್ಪಂತೆ = ಪುಣ್ಯವೇ ದೊರೆಯುವಂತೆ (ಸತ್ಕರ್ಮಗಳೇ ಸಂಭವಿಸುವಂತೆ); ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ = ಶ್ರೀಕೃಷ್ಣನ ಸನ್ನಿಧಿಗೆ ಒಯ್ದು (ಕೃಷ್ಣಾನುಗ್ರಹಪಾತ್ರನಾಗುವಂತೆ ಮಾಡಿ) ಕಾಪಾಡು.

 ಹತ್ತೇಳು ಎರಡು ಯುತ ಸಾವಿರ ನಾಡಿ 
 ಸುತ್ತಿ ಸೂತ್ರಮಾರುತ । 
 ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ 
 ನೆತ್ತಿಯ ದ್ವಾರದಿಂದಲೆತ್ತ ಪೋಗಲೀಸದೆ ॥ 
 ತತ್ತುವರೊಳು ಜೀವೋತ್ತಮನೆ ಸತ್ - 
 ಚಿತ್ತೆನಗೆ ಕೊಡು ಉತ್ತರ ಧರಿಸೋ ॥ 2 ॥ 

 ಹತ್ತೇಳು ಎರಡು ಯುತ ಸಾವಿರ ನಾಡಿ = (10×7=70+2=72×1000=72000) ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ( ಯುತ = ಕೂಡಿಸಿದ); ಸುತ್ತಿ = ಸುತ್ತುತ್ತುಲೇ ಇದ್ದು; ಸೂತ್ರಮಾರುತ = ಸೂತ್ರನಾಮಕಪ್ರಾಣ; ಉತ್ತರ ಲಾಲಿಸು = ನನ್ನ ಮುಂದಿನದನ್ನು (ಮುಂದಿನ ಅಪೇಕ್ಷೆಯನ್ನು)ಕಿವಿಗೊಟ್ಟು ಕೇಳು; ಉತ್ಕ್ರಮಣದಲ್ಲಿ = ನಾನು ಈ ದೇಹವನ್ನು ಬಿಟ್ಟು ಹೋಗುವ ಸಮಯದಲ್ಲಿ; ನೆತ್ತಿಯ ದ್ವಾರದಿಂದಲೆ = ಬ್ರಹ್ಮರಂಧ್ರದಿಂದಲೇ; ಎತ್ತ ಪೋಗಲೀಸದೇ (ಅನ್ಯಮಾರ್ಗದಿಂದ) ಹೊರಡುವುದಕ್ಕೆ ಅವಕಾಶಕೊಡದೆ (ಬ್ರಹ್ಮರಂಧ್ರದಿಂದ ಹೊರಟವರೇ ತಿರುಗಿ ಸಂಸಾರಕ್ಕೆ ತರದ ಅರ್ಚಿರಾದಿಮಾರ್ಗದಲ್ಲಿ ಹೋಗುತ್ತಾರೆಂಬ ನಿಯಮವು ಸೂಚಿತವಾಗಿದೆ); ತತ್ತುವರೊಳು = ತತ್ವಾಭಿಮಾನಿ ಜೀವರಲ್ಲಿ (ದೇವತೆಗಳೂ ಜೀವರೇ); ಸತ್ ಚಿತ್ ಎನಗೆ ಕೊಡು = ಒಳ್ಳೆಯ ಜ್ಞಾನ ಕೊಡುತ್ತ (ಸುಖದುಃಖಗಳಿಗೆ ಒಳಗಾಗದ ಸಮಚಿತ್ತತ್ವವನ್ನು ನನಗೆ ಅನುಗ್ರಹಿಸು); ಉತ್ತರ ಧರಿಸೋ = ಶ್ರೇಷ್ಠವಾದುದನ್ನು ದೊರಕಿಸು.

 ಅಂತರಂಗದ ಉಸಿರ ಹೊರಗೆ ಬಿಟ್ಟು 
 ಅಂತರಂಗಕ್ಕೆ ಸೇದುವ । 
 ಪಂಥದೊಳು ನೀನೆ ಕಂತುಜನಕನಲ್ಲಿ 
 ಮಂತ್ರಿಯೆನೆಸಿ ಸರ್ವರಂತರ್ಯಾಮಿ ಆಗಿ ॥ 
 ನಿಂತು ನಾನಾಬಗೆ ತಂತು ನಡಿಸುವ 
 ಹೊಂತಕಾರಿ ಗುಣವಂತ ಬಲಾಢ್ಯ ॥ 3 ॥ 

 ಅಂತರಂಗದ ಉಸಿರ = ಒಳಗಿನ ಉಸಿರನ್ನು (ಶ್ವಾಸವಾಯುವನ್ನು); ಹೊರಗೆ ಬಿಟ್ಟು = ನಿಚ್ಛ್ವಾಸದಿಂದ ಹೊರಗೆ ಹಾಕಿ; ಅಂತರಂಗಕ್ಕೆ ಸೇದುವ = (ಪುನಃ)ಉಚ್ಛ್ವಾಸದಿಂದ ಉಸಿರನ್ನು (ವಾಯುವನ್ನು) ಒಳಗೆ ತೆಗೆದುಕೊಳ್ಳುವ; ಪಂಥದೊಳು = ಈ ಮಾರ್ಗದಲ್ಲಿ; ಕಂತುಜನಕನಲ್ಲಿ = ಮನ್ಮಥಪಿತನಲ್ಲಿ (ಶ್ರೀಕೃಷ್ಣನಲ್ಲಿ); ಮಂತ್ರಿ ಎನಿಸಿ = ಮುಖ್ಯಮಂತ್ರಿಪದದಲ್ಲಿದ್ದು; ಸರ್ವಾಂತರ್ಯಾಮಿಯಾಗಿ = ಸರ್ವರ ಒಳಗಿದ್ದು; ನಾನಾಬಗೆ ತಂತು ನಡಿಸುವ = ವಿವಿಧಕರ್ಮಸಂತತಿಯನ್ನು; ಹೊಂತಕಾರಿ = ಚತುರ.

 ಪಂಚಪರಣರೂಪನೆ ಸತುವಕಾಯ 
 ಪಂಚಾದ್ರಿಗಳ ಲೋಪನೆ । 
 ಮುಂಚಿನ ಪರಮೇಷ್ಠಿ ಸಂಚಿತಗಾಮಿ ಬಿಡಿಸಿ 
 ಕೊಂಚ ಮಾಡೊ ಪ್ರಾರಬ್ಧ ॥ 
 ವಂಚನೆ ಗೈಸದೆ ಅಂಚಂಚಿಗೆ ಪರಪಂಚವೆ ಓಡಿಸಿ 
 ಪಂಚವಕ್ತ್ರಹರಿಮಂಚದ ಗುರುವೆ ॥ 4 ॥ 

 ಪಂಚಪರಣರೂಪನೆ = (ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ) ಐದು ರೂಪಗಳಿಂದ (ಪಂಚ ತನ್ನಾಮಕ ದಾಸಪ್ರಾಣರಲ್ಲಿ) ಇರುವ ಪ್ರಾಣ (ಪರಣ = ಪ್ರಾಣ); ಸತ್ವಶರೀರ = (ಬ್ರಹ್ಮವಾಯುಗಳ ಪ್ರಾಕೃತಶರೀರವು) ಶುದ್ಧ ಸತ್ತ್ವಾತ್ಮಕವಾದುದು (' ಸತ್ವಸತ್ವಮಹಾಸತ್ವಸೂಕ್ಷ್ಮ ಸತ್ವಶ್ಚತುರ್ಮುಖಃ ' - ಇತ್ಯಾದಿ ಪ್ರಮಾಣದಂತೆ); ಪಂಚಾದ್ರಿಗಳ ಲೋಪನೆ = ತಮಸ್ಸು, ಮೋಹ, ಮಹಾಮೋಹ, ತಾಮಿಸ್ರ, ಅಂಧತಾಮಿಸ್ರ ಇವುಗಳಿಂದ ದೂರನೆ (ಇವುಗಳು ಬಹುದೊಡ್ಡ ಪರ್ವತಗಳ ಸದೃಶವಾದ ಅವಿದ್ಯಾ); ಮುಂಚಿನ ಪರಮೇಷ್ಠಿ = ಭಾವೀಬ್ರಹ್ಮದೇವ; (ಮುಂಚಿನ = ಮುಂದಿನ ಕಲ್ಪದ); ಸಂಚಿತಾಗಾಮಿ ಬಿಡಿಸಿ = ಸಂಚಿತ ಆಗಾಮಿಕರ್ಮಗಳು ಲೇಪಿಸದಂತೆ ಮಾಡಿ (ಅಪರೋಕ್ಷ ದರ್ಶನದಿಂದ ಸಂಚಿತಕರ್ಮ ಕ್ಷಯವೂ, ಆಗಾಮಿ (ಆ ಮುಂದಿನ) ಕರ್ಮಗಳ ನಿರ್ಲೇಪವೂ ಲಭಿಸುತ್ತದೆ); ಕೊಂಚ ಮಾಡೊ ಪ್ರಾರಬ್ಧ = ಭೋಗಿಸಲೇಬೇಕಾದ ಪ್ರಾರಬ್ಧಕರ್ಮವನ್ನು ಉಪಮರ್ದದಿಂದ ಕಡಿಮೆ ಮಾಡು; ವಂಚನೆಗೈಸದೆ = (ನನ್ನನ್ನು ಸಂಸಾರದಲ್ಲಿಯೇ ಇಟ್ಟು) ವಂಚಿಸದೇ; ಅಂಚಂಚಿಗೆ = ಕಡೆ ಕಡೆಗೆ (ಸಾಧನೆಯಲ್ಲಿ ಮುಂದೆ ಕರೆದೊಯ್ದಂತೆ); ಪರಪಂಚಗಳೋಡಿಸಿ = ಹರಿವಿಸ್ಮಾರಕವಾದ ಶಬ್ದ, ರೂಪ,ರಸ, ಗಂಧ, ಸ್ಪರ್ಶ ಎಂಬ ತನ್ಮಾತ್ರಗಳ ಸಂಬಂಧತೊಲಗಿಸಿ; ಪಂಚವಕ್ತ್ರ ಹರಿಮಂಚದ ಗುರುವೆ = ರುದ್ರದೇವ ಮತ್ತು ಶೇಷದೇವ ಇವರಿಗೆ ಗುರುವಾದ ಹೇ ಮುಖ್ಯಪ್ರಾಣ! (ಶೇಷದೇವನು ಹರಿಯ ಮಂಚ - ಶಯ್ಯಾರೂಪನು).

 ಯೋಗಾಸನದೊಳಿಪ್ಪ ಯಂತ್ರೋದ್ಧಾರ 
 ಭಾಗವತ - ರಪ್ಪ । 
 ಯೋಗಿಗಳೀಗೀಶವ್ಯಾಸಯೋಗಿಗೊಲಿದ ನ್ಯಾಸ 
 ಶ್ರೀತುಂಗಭದ್ರಾವಾಸ ಬಾಗುವೆ ಕೊಡು ಲೇಸ ॥ 
 ಶ್ರೀಗುರುವಿಜಯವಿಟ್ಠಲನ ಪಾದಕೆ 
 ಬಾಗುವ ಭವದೂರ ಜಾಗರಮೂರುತಿ ॥ 5 ॥ 

 ಯೋಗಾಸನದೊಳಿಪ್ಪ = ಯೋಗಾಸನದಲ್ಲಿ ಸ್ಥಿತನಾದ; ಯಂತ್ರೋದ್ಧಾರಕ ಭಾಗವತರಪ್ಪ = ಹರಿಭಕ್ತರ ತಂದೆಯಾದ ಹೇ ಯಂತ್ರೋದ್ಧಾರಕ ಮುಖ್ಯಪ್ರಾಣ! (ಪಂಪಾಕ್ಷೇತ್ರದಲ್ಲಿರುವ ಯಂತ್ರೋದ್ಧಾರಕ ಪ್ರಾಣದೇವರು); ವ್ಯಾಸಯೋಗಿಗೊಲಿದ = ಶ್ರೀವ್ಯಾಸತೀರ್ಥರಿಗೆ ಒಲಿದ (ಪ್ರಸನ್ನನಾದ); ನ್ಯಾಸ = (ಅವರಿಂದ) ಪ್ರತಿಷ್ಠಾಪಿತವಾದ ಸ್ಥಿತಿಯುಳ್ಳ; ಶ್ರೀತುಂಗಭದ್ರಾವಾಸ = ಪವಿತ್ರವಾದ ತುಂಗಭದ್ರಾತೀರದಲ್ಲಿರುವ; ಬಾಗುವೆ = (ನಿನ್ನ ಪಾದಗಳಲ್ಲಿ) ಶಿರಸಾನಮಿಸುವೆ; ಬಾಗುವ = (ಶ್ರೀಹರಿಯಲ್ಲಿ) ನಮ್ರನಾಗಿ ಅವನ ಪಾದದಲ್ಲಿ ಬಾಗಿದ ಶಿರವುಳ್ಳ; ಜಾಗರಮೂರುತಿ = ನಿತ್ಯಜಾಗ್ರತನಾದವ (ಶ್ರೀವಾಯುದೇವನು ನಿದ್ರಾರಹಿತನು).

 ವ್ಯಾಖ್ಯಾನ : 
 ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.
***

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ ಡಂಬವ ತೊಲಗಿಸಿ
ಡಿಂಭದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ||ಪಲ್ಲವಿ||

ಅಂತರಂಗದ ಉಸುರ ಹೊರಗೆ ನೂಕಿ ಅಂತರಂಗಕೆ ಸೇದುವ
ಪಂಥದಾಳು ನೀನೇ ಕಂತುಜನಕನಲ್ಲಿ ಮಂತ್ರಿಯೆನಿಸಿ
ಸರ್ವಾಂತರ್ಯಾಮಿಯಾಗಿ ನಿಂತು ನಾನಾಬಗೆ ತಂತು ನಡೆಸುವ
ಹೊಂತಕಾರಿ ಗುಣವಂತ ಬಲಾಢ್ಯ ||೧||

ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಮ ಹಂಸ ಮಂತರ
ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿ ತಪ್ಪಿಸಿ ಭವವ ಸಮೀಪದಿ ಜೀವರಿಗೆ
ಅಪ್ಪನಂದದಿ ಪುಣ್ಯ ಬಪ್ಪಂತೆ ಕರುಣಿಸು
ಕಪ್ಪುವರ್ಣನ ಕೂಡೊಪ್ಪಿಸಿ ಪಾಲಿಸು ||೨||

ಹತ್ತೇಳು ಎರಡಾಯತ ನಾಡಿಯೊಳು ಸುತ್ತಿಸುತ್ತುವ ಮಾರುತ
ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ
ನೆತ್ತಿಯ ದ್ವಾರದಿಂದ ಎತ್ತ ಪೋಗಲೀಸದೆ
ಠಕ್ಕು ಮರುಳ, ಜೀವೋತ್ತಮನೆ ಸಮಚಿತ್ತ ಎನಗೆ ಕೊಡುತ್ತ ಉದ್ಧರಿಸೊ ||೩||

ಯೋಗಾಸನದೊಳಿಪ್ಪ ಯಂತ್ರೋದ್ಧಾರಕ ಭಾಗವತ ಜನರಪ್ಪ
ಯೋಗಿಗಳಿಗೀಶ ವ್ಯಾಸ ಯೋಗಿಗೊಲಿದ ನ್ಯಾಸ
ಶ್ರೀ ತುಂಗಭದ್ರ ನಿವಾಸ ಬಾಗುವೆ ಕೊಡು ಲೇಸ

ಶ್ರೀ ಗುರು ವಿಜಯವಿಠಲನ ಪಾದಕೆ ಬಾಗಿದ ಭವದೂರ ಜಾಗರ ಮಾರುತಿ ||೪||
****

ಶ್ರೀಮುಖ್ಯ ಪ್ರಾಣದೇವರ ಸ್ತೋತ್ರ
ನಂಬಿದೆ ನಿನ್ನಯ ಪಾದ ಮುಖ್ಯ ಪ್ರಾಣ ನಂಬಿದೆ ನಿನ್ನಯ ಪಾದ* ಪ

ನಂಬಿದೆ ನಿನ್ನಯ ಪಾದಾಡಂಬರ ತೊಲಗಿಸಿಡಿಂಬದೊಳಗೆ ಹರಿಯ ಬಿಂಬ ಮೊಳೆವಂತೆ ಮಾಡೋ ಅ.ಪ.

ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿ ಹಂಸಮಂತರ ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿತಪ್ಪಿಸೋ ಭವವ ಸಮೀಪದ ಜೀವಗೆ ||ಅಪ್ಪನಂದದಿ ಪುಣ್ಯವಪ್ಪಂತೆ ಕರುಣಿಸೊಕಪ್ಪು ವರ್ಣನ ಕೂಡೊಪ್ಪಿಸಿ ಪಾಲಿಸೊ 1
ಹತ್ತೇಳು ಎರಡಾಯುತ ಸಾವಿರನಾಡಿಸುತ್ತಿ ಸುತ್ತುವ ಸೂತ್ರ ಮಾರುತಉತ್ತರ ಲಾಲಿಸೋ ಉತ್ಕøಮಣದಲ್ಲಿನೆತ್ತಿಯ ದ್ವಾರದಿಂದಲೆತ್ತ ಪೋಗಲೀಸದೆ ||ತತ್ತುವರೊಳು ಜೀವೋತ್ತಮನೆ ಸತ್-ಚಿತ್ತೆನಗೆ ಕೊಡು ಉತ್ತರ ಧರಿಸೊ (ಲಾಲಿಸೋ) 2
ಅಂತರಂಗದ ಉಸಿರ ಹೊರಗೆ ಬಿಟ್ಟು ಅಂತರಂಗಕ್ಕೆ ಸೇದುವ ಪಂಥದೊಳು ನೀನೆ ಕಂತು ಜನಕನಲ್ಲಿಮಂತ್ರಿಯೆನಿಸಿ ಸರ್ವರಂತರ್ಯಾಮಿ ಆಗಿ ||ನಿಂತು ನಾನಾ ಬಗೆ ತಂತು ನಡಿಸುವ ಹಂತಕಾರಿ ಗುಣವಂತ ಬಲಾಢ್ಯ 3
ಪಂಚ ಪ್ರಾಣರೂಪನೆ ಸತುವ ಕಾಯ ಪಂಚಾದ್ರಿಗಳ ಲೋಪನೆಮುಂಚಿನ ಪರಮೇಷ್ಠಿ ಸಂಚಿತಾಗಾಮಿ ಓಡಿಸಿಕೊಂಚ ಮಾಡೋ ಪ್ರಾರಬ್ಧ ವಂಚನೆಗೈಸದೆ ||ಅಂಚಂಚಿಗೆ ಪರಪಂಚವ ಓಡಿಸಿ ಪಂಚವಕ್ತ್ರ ಹರಿಮಂಚದ ಗುರುವೆ 4
ಯೋಗಾಸನದೊಳಿಪ್ಪ ಯಂತ್ರೋದ್ಧಾರ ಭಾಗವತರಪ್ಪಯೋಗಿಗಳೀಶ ವ್ಯಾಸಯೋಗಿಗೊಲಿದ ನ್ಯಾಸ ಶ್ರೀ ತುಂಗಭದ್ರಾವಾಸ ಬಾಗುವೆ ಕೊಡಲೇಸ ||ಶ್ರೀ ಗುರು ವಿಜಯ ವಿಠಲನ ಪಾದಕೆಬಾಗುವ ಭವದೂರ ಜಾಗರ ಮೂರುತಿ 5
****