Showing posts with label ಪುರಂದರರಾಯರ ಪುಣ್ಯನಾಮಸ್ಮರಣೆ ಇನ್ನು ಜಪಿಸಿರೊ gopala vittala. Show all posts
Showing posts with label ಪುರಂದರರಾಯರ ಪುಣ್ಯನಾಮಸ್ಮರಣೆ ಇನ್ನು ಜಪಿಸಿರೊ gopala vittala. Show all posts

Wednesday, 13 January 2021

ಪುರಂದರರಾಯರ ಪುಣ್ಯನಾಮಸ್ಮರಣೆ ಇನ್ನು ಜಪಿಸಿರೊ ankita gopala vittala

 ರಾಗ - : ತಾಳ -


ಪುರಂದರರಾಯರ ಪುಣ್ಯನಾಮಸ್ಮರಣೆ ಇನ್ನು ಜಪಿಸಿರೊ ಸುಜನರು

ಅನಂತಜನುಮದಘವನ್ನು ಕಳೆದಮ್ಯಾಲೆ ಪುನರಾವರ್ತಿ ಬಾರದ ಲೋಕ ಪೊಂದಿಪುದು ll ಪ ll 


ಆಗಮಾರ್ಥಗಳು ಅನುವಾಗಿ ಸಾರವ ತೆಗೆದು ರಾಗ ಪದ ಕಾವ್ಯದಿಂದ

ಶ್ರೀಗುರುಮಧ್ವಮುನಿಮತವ ಪೊಂದಿ ಬಲು ಭಾಗವತ ಧರ್ಮವಹಿಸಿ 

ನಾಗಶಯನನ ಗುಣವ ಕೊಂಡಾಡಿ ಜಗದೊಳಗೆ ಯೋಗ್ಯಪ್ರಹ್ಯದಿಂದ ಮೆರೆದ 

ಸಾಗರವು ದಕ್ಷಿಣೋತ್ತರ ಪೂರ್ವ ಪಶ್ಚಿಮ ಯೋಗದಲಿ ಚರಿಸಿ ಒಳಗಾಗದೆ ಕಲಿಯಗೆದ್ದ ll ೧ ll 


ನೋಡಿದ ಮಾತ್ರಿವರ ನಯನಗಳ ದೋಷಗಳು ಓಡಿದವು ಲೇಶವಿರದೆ

ಆಡಿದ ಮಾತುರದಿ ಇವರ ವಾರ್ತೆಯು ವದನ ಬೇಡದಿನ್ನೊಂದು ವಿಷಯ

ಮಾಡಿದ ಮಾತ್ರಿವರ ಅರ್ಚನೆಯ ಕರಗಳು ಮಾಡುವವು ಅನ್ಯಕರ್ಮ

ಕೂಡಿ ಮನಬೆರದು ಜಪಿಸುತ ನಿತ್ಯ ಧ್ಯಾನವನು ಮಾಡಿದವನ ಪುಣ್ಯಕೀಡು ನಾ ಕಾಣೆ ll ೨ ll


ಪೂಯೆಂದು ಉಚ್ಚರಿಸೆ ಪುಣ್ಯ ಕರ್ಮಕೆ ಧರ್ಮ ಸಹಾಯವಾಗಿ ಒದಗುವುದು

ರಾಯೆನ್ನೆ ಜ್ಞಾನಾಖ್ಯವೆಂಬ ರತುನಾರ್ಥಗಳು ಆಯಾಸಿಲ್ಲದೆ ಬಪ್ಪುವು 

ದಾಯೆಂದು ಉಚ್ಚರಿಸೆ ಸರ್ವಕಾಮಗಳು ದದಾತಿ ಎಂದಾಗುವುವು 

ರಾಯೆನ್ನೆ ರಾಜ ಗೋಪಾಲವಿಟ್ಠಲ ತನ್ನ ಸಾಯುಜ್ಯವನು ಇತ್ತು ಸಲಹುವನು ಸರ್ವದಾ ll ೩ ll

***