ರಾಗ - : ತಾಳ -
ಪುರಂದರರಾಯರ ಪುಣ್ಯನಾಮಸ್ಮರಣೆ ಇನ್ನು ಜಪಿಸಿರೊ ಸುಜನರು
ಅನಂತಜನುಮದಘವನ್ನು ಕಳೆದಮ್ಯಾಲೆ ಪುನರಾವರ್ತಿ ಬಾರದ ಲೋಕ ಪೊಂದಿಪುದು ll ಪ ll
ಆಗಮಾರ್ಥಗಳು ಅನುವಾಗಿ ಸಾರವ ತೆಗೆದು ರಾಗ ಪದ ಕಾವ್ಯದಿಂದ
ಶ್ರೀಗುರುಮಧ್ವಮುನಿಮತವ ಪೊಂದಿ ಬಲು ಭಾಗವತ ಧರ್ಮವಹಿಸಿ
ನಾಗಶಯನನ ಗುಣವ ಕೊಂಡಾಡಿ ಜಗದೊಳಗೆ ಯೋಗ್ಯಪ್ರಹ್ಯದಿಂದ ಮೆರೆದ
ಸಾಗರವು ದಕ್ಷಿಣೋತ್ತರ ಪೂರ್ವ ಪಶ್ಚಿಮ ಯೋಗದಲಿ ಚರಿಸಿ ಒಳಗಾಗದೆ ಕಲಿಯಗೆದ್ದ ll ೧ ll
ನೋಡಿದ ಮಾತ್ರಿವರ ನಯನಗಳ ದೋಷಗಳು ಓಡಿದವು ಲೇಶವಿರದೆ
ಆಡಿದ ಮಾತುರದಿ ಇವರ ವಾರ್ತೆಯು ವದನ ಬೇಡದಿನ್ನೊಂದು ವಿಷಯ
ಮಾಡಿದ ಮಾತ್ರಿವರ ಅರ್ಚನೆಯ ಕರಗಳು ಮಾಡುವವು ಅನ್ಯಕರ್ಮ
ಕೂಡಿ ಮನಬೆರದು ಜಪಿಸುತ ನಿತ್ಯ ಧ್ಯಾನವನು ಮಾಡಿದವನ ಪುಣ್ಯಕೀಡು ನಾ ಕಾಣೆ ll ೨ ll
ಪೂಯೆಂದು ಉಚ್ಚರಿಸೆ ಪುಣ್ಯ ಕರ್ಮಕೆ ಧರ್ಮ ಸಹಾಯವಾಗಿ ಒದಗುವುದು
ರಾಯೆನ್ನೆ ಜ್ಞಾನಾಖ್ಯವೆಂಬ ರತುನಾರ್ಥಗಳು ಆಯಾಸಿಲ್ಲದೆ ಬಪ್ಪುವು
ದಾಯೆಂದು ಉಚ್ಚರಿಸೆ ಸರ್ವಕಾಮಗಳು ದದಾತಿ ಎಂದಾಗುವುವು
ರಾಯೆನ್ನೆ ರಾಜ ಗೋಪಾಲವಿಟ್ಠಲ ತನ್ನ ಸಾಯುಜ್ಯವನು ಇತ್ತು ಸಲಹುವನು ಸರ್ವದಾ ll ೩ ll
***
No comments:
Post a Comment