Showing posts with label ಶ್ರೀರಮಣನ ಪಾದಸೇವನ ಮಾಡಿ ಬುಧರು prasannavenkata SRIRAMANANA PAADASEVANA MAADI BUDHARU. Show all posts
Showing posts with label ಶ್ರೀರಮಣನ ಪಾದಸೇವನ ಮಾಡಿ ಬುಧರು prasannavenkata SRIRAMANANA PAADASEVANA MAADI BUDHARU. Show all posts

Wednesday, 7 April 2021

ಶ್ರೀರಮಣನ ಪಾದಸೇವನ ಮಾಡಿ ಬುಧರು ankita prasannavenkata SRIRAMANANA PAADASEVANA MAADI BUDHARU

 

Audio by Vidwan Sumukh Moudgalya


ಶ್ರೀ ಪ್ರಸನ್ನವೆಂಕಟದಾಸರ ನವ ವಿಧ ಭಕ್ತಿ ಕೀರ್ತನೆಗಳು 


 ೪ . " ಪಾದಸೇವನ ಭಕ್ತಿ "


 ರಾಗ : ಅಠಾಣ     ಆದಿತಾಳ


ಶ್ರೀರಮಣನ ಪಾದಸೇವನ ಮಾಡಿ ಬುಧರು ॥ಪ॥


ಈರಮತದವರು ಅನುದಿನ ॥ಅ.ಪ॥


ಮಹಾಲಕುಮಿ ಪಾದಸರೋ-

ರುಹದ್ವಯವ ತೋಳಿಲಿಪ್ಪಿ

ಸ್ನೇಹವಾರ್ಧಿಯಲ್ಲಿ ಮುಳುಗಿ

ಗಹನದಿ ಭಜಿಸುತಿಪ್ಪ  ॥೧॥


ವಿಧಿಯು ನೈಜ ಭಕುತಿಭರಿತ

ಹೃದಯ ಸರೋವರದಲ್ಲಿಟ್ಟು

ಪದಸರೋಜಾವಧಿ ಇಲ್ಲದೆ

ಮುದದಿ ಭಜಿಸಿ ಸುಖಿಸುತಿಪ್ಪ ॥೨॥


ಮತ್ತೆ ತನ್ನ ಭಕುತಿಯಲ್ಲಿ

ಸತ್ಪಾದಾಬ್ಜಗಳನು ತೊಳೆದು

ಸತ್ತ್ರಿಪಥದಿ ಗಾಮನಿಯಳ

ಪೊತ್ತು ಪೂಜೆ ಮಾಡುತಿಪ್ಪ ॥೩॥


ಸಾಲಿಗ್ರಾಮವಾಗಿ ಭವನ

ಮೌಳಿತೀರ್ಥದಲ್ಲಿ ತೋಯಿಸಿ

ಮೇಲೆರಡೇಳ್ಜಗಗಳಘವ

ಪಾಳುಮಾಡಿ ಪೂಜೆಗೊಂಬ ॥೪॥


ಮುಕುತರಿಗೆ ವ್ಯಕ್ತವಾದ

ಭಕುತರಿಗೆ ಪೊಳೆವ ಪಾದ

ಶ್ರೀಕರ ಪ್ರಸನ್ವೆಂಕಟ ವಲ್ಲಭ

ಸುಖಮುನೀಶಗೆ ವಶನಾಗಿಪ್ಪ ॥೫॥

******