Showing posts with label ತಾರಮ್ಮಯ್ಯಾ ರಘುಕುಲ ರಾಮಚಂದಿರನ mohana vittala. Show all posts
Showing posts with label ತಾರಮ್ಮಯ್ಯಾ ರಘುಕುಲ ರಾಮಚಂದಿರನ mohana vittala. Show all posts

Sunday, 1 August 2021

ತಾರಮ್ಮಯ್ಯಾ ರಘುಕುಲ ರಾಮಚಂದಿರನ ankita mohana vittala

 ..

ತಾರಮ್ಮಯ್ಯಾ ರಘುಕುಲ ರಾಮಚಂದಿರನ ಪ


ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ ಅ.ಪ.


ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ 1

ಲಕ್ಷ್ಮಣ ಅಲ್ಲಿಂದ ಪೋಗಲುತಕ್ಷಣ ಖಳ ಬಂದ ||ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ 2

ಅಂಜನೆ ಸುತ ಬಂದ ಹರಿಪದಕಂಜಕೆರಗಿ ನಿಂದಾ ||ಕುಂಜರಗಮನೆಯ ಕುರುಹು ಪೇಳೆನೆ ನಿ-ರಂಜನ ಮೂರ್ತಿಗೆ ಅಂಜದೆ ಬೆಸಸಿದ 3

ಶರಧಿಯನೇ ಹಾರಿ ಉಂಗುರಧರಣಿಸುತೆಗೆ ತೋರೀ ||ತರು ಪುರ ಗೋಪುರ ಉರುಹಿ ಚೂಡಾಮಣಿಹರಿಗೆ ಸಮರ್ಪಿಸಿ ಹರುಷದಲಿಹನಂತೆ 4

ಸೇತುವಿಯನೆ ಕಟ್ಟಿ ಖಳಕುಲನಾಥನ ತರಿದೊಟ್ಟೀ ||ಸೀತೆ ಸಹಿತ ಮೋಹನ್ನ ವಿಠ್ಠಲ ಜಗ-ನ್ನಾಥ ಹೊರಟನಂತೇ ಕಾಂತೇ 5

***