Showing posts with label ಏನು ಧನ್ಯಳೊ ಗಿರಿಜೆ ಎಂಥ ಮಾನ್ಯಳೋ govinda. Show all posts
Showing posts with label ಏನು ಧನ್ಯಳೊ ಗಿರಿಜೆ ಎಂಥ ಮಾನ್ಯಳೋ govinda. Show all posts

Sunday, 10 November 2019

ಏನು ಧನ್ಯಳೊ ಗಿರಿಜೆ ಎಂಥ ಮಾನ್ಯಳೋ ankita govinda

by ಗೋವಿಂದದಾಸ
ಏನು ಧನ್ಯಳೊ ಗಿರಿಜೆ ಎಂಥ ಮಾನ್ಯಳೋ ಪ
ಸ್ಥಾಣುವಮೂರ್ತಿಪಾದಸೇವೆತಾನೆನಿರತಮಾಡುತಿಹಳೊ ಅ.ಪ

ಭೂತಗಣದ ಯೂಥವಿರಲು
ಸೂತಗಣನಾಥಾದ್ಯರಿರಲುಭೂತಪತಿಯ
ಚರಣತೊಳೆದುತೀರ್ಥಕೊಡುತ ಬರುವಳ್ ಸಭೆಗೆ 1

ನಾರದರು ದಿಕ್ಪಾಲರಿರಲುವಾರಿಜಾಸನ ವಿಷ್ಣುವಿರಲುಮಾರಹರನಿಗಾರತಿ ಎತ್ತಿತಾನೆ ಸಭೆಗೆ ತೋರಿಸುವಳು 2

ವಸುಗಳ್ ಸಪ್ತ ಋಷಿಗಳಿರಲುಅಸುರ ಶಿಕ್ಷರು ನುತಿಸುತಿರಲುಪಶುಪತಿಯ ಲೇಪಿಸಿದ ಭಸ್ಮಗೋವಿಂದಾದ್ಯರಿಗೆ ಪ್ರಸಾದ ಕೊಡುವಳ್ 3
*******