Showing posts with label ಸುವೆನನುದಿನ ಮುದದಿಂದ ಈಧರಿಯ pranesha vittala. Show all posts
Showing posts with label ಸುವೆನನುದಿನ ಮುದದಿಂದ ಈಧರಿಯ pranesha vittala. Show all posts

Sunday, 3 November 2019

ಸುವೆನನುದಿನ ಮುದದಿಂದ ಈಧರಿಯ ankita pranesha vittala

Nadi Taratamya
ಸುವೆನನುದಿನ ಮುದದಿಂದ | ಈಧರಿಯ ಮ್ಯಾಲುಳ್ಳ ಮಹಾ ನದಿಗಳ

ಪಗೌತಮನಘ ಪರಿಹಾರ ಮಾಡಿದ ಗೋದಾ |ಮಾತೆ ಶ್ರೀ ಕೃಷ್ಣವೇಣೀ ಸರಸ್ವತೀ ||
ಆ ತರೂವಾಯ ಶ್ರೀ ಕಾವೇರಿ, ಸರಿಯು ಶ್ರೀ ಯಮುನಾ |ಧೌತ ಪಾತಕೆ ಶ್ರೀ ನರ್ಮದ ತುಂಗಾ ||1||

ಸಿಂಧೂ ಭವನಾಶಿನಿ ಕುಮದ್ವತಿ ಶ್ರೀ ವಂಝಾರ |ಸುಂದರ ಭೀಮಾ ತಾಮ್ರಪರಣೀ ಮಲಹಾ ||
ಮಿಂದರೆ ಪಾವನ ಮಾಡುವ ಬಹು ನದಿಗಳ |ಒಂದೇ ಮನಸಿಲಿಂದಾ ಪೊಗಳುವೆ ||2||

ವಾರಣೀ ಫಲ್ಗುಣೀ ಶ್ರೋಣ ಭದ್ರಾ ಗಂಡಕಿಹೇಮ|ಮೂರುವೇಣಿಗಾಯತ್ರಿ ವೇಗವತೀ ||
ಸೂರಿಗಮ್ಯ ಕೌಸಿಕ ಮಣಿಕರಣಿಕ ಗೌತಮಿ ಭಾ |ಗೀರಥಿ ಕಾಗಿನಿ ಶ್ರೀ ವೇತ್ರವತೀ||3||

ಹೇಮವತಿ ನೇತ್ರವತಿ ಪಾಪನಾಶಿ ಶ್ರೀ ಸೀತಾ |ಆ ಮಹಾಳಕನಂದಾ ಹಯಗ್ರೀವ ||
ಹೇಮಮುಖರ ತಾಪಿನಿ ಕಾಳಿ ಸೌಪರಣಿ ಪಿನಾಕೀ |ಶ್ರೀ ಮತ್ಕಪಿಲ ಜಮದಗ್ನಿಪ್ರಣವಸಿದ್ಧ||4||

ಮರುದ್ವತಿ ಮದಿರ ಮೇನುಕಾ ಸೂನಾಸಿ ಚಕ್ರವತಿ |ಗರುಡ ಶಂಖವತೀ ಕುಹು ಮಹೇಶ್ವರೀ ||
ಸರಯು ಜಯ ಮಂಗಳ ಯೋಗಕೃತು ಮಾಲಾ ಗದಾ |ಧರಿ ಮಾಲಿನೀ ಗಾರ್ಗಿಣೀ ದೇವವತಿ||5||

ಸಾವಿತ್ರಿ ಧನ್ಯಮಾಲಾ ಧರ್ಮ ಚಕ್ರತೀರ್ಥಹರಿ|ದ್ರಾವತಿ ಇಂದ್ರಾಣಿ ಪಾತಾಳಗಂಗಾ ||
ಶೈವಕುಂಡ ಕುಂಡಿನಿ ನೀರ ಕುಮಾರ ಧಾರೀ ಶು |ಶಾವರ್ತಿ ಮೌಳೀ ಲೋಕಪಾವನೀ ||6||

ಸ್ವಾಮಿ ಪುಷ್ಕರ್ಣಿ ಚಂದ್ರ ಪುಷ್ಕರ್ಣಿ ಮಾನಸ ಪುಷ್ಕರ್ಣಿ |ಶ್ರೀ ಮಧ್ವ ಸರೋವರ ಪದ್ಮ ಸರಾ ||
ಸೋಮಭಾಗಾ ವ್ಯಾಸಸಿಂಧುಶ್ರೀ ಪಂಪಾ ಸರೋವರ |ವಾಮನ ಶ್ರೀ ಮಯೂರ ಸರೋವರ ||7||

ರೋಮ ಹರ್ಷಣ ತೀರ್ಥ ಸೀತಾ ಸರೋವರ ಪುಣ್ಯ |ಧಾಮಾ ಶ್ರೀ ಕಪಿಲತೀರ್ಥ ಧವಳಗಂಗಾ ||
ಭೀಮಸೇನ ತಟಾಕಬ್ರಹ್ಮಜ್ಞಾನಕನ್ಯಹೃದಯ |ಶ್ರೀ ಮದ್ವಿಶಿಷ್ಟ ತೀರ್ಥ ತಾರಾ ತೀರ್ಥ ||8||

ಈ ತೀರ್ಥಗಳ ದಿವ್ಯನಾಮನಿತ್ಯಪಠಿಸಲು |ಯಾತಕ್ಕಾದರೂ ವಿಘ್ನ ಬಾರದು ||
ಮಾತರಿಶ್ವಪ್ರೀಯ ಪ್ರಾಣೇಶ ವಿಠಲನು ಬಹು |ಪ್ರೀತನಾಗಿ ಬಿಡದೆ ಪೊರೆವನು ||9||
********