ಮನದಿಂದಲಿ ಮನನೋಡಿ ಮನವರಿತು ಘನ ಕೂಡಿ ಪ
ಮನಸಿನಿಂದ ತಾ ನೋಡುವ ಖೂನ ಮನ ಮರೆಯಲದೆ ನಿಧಾನ ಮನವರಿಯದೆ ಇಹುದ್ಯಾತರ ಜ್ಞಾನ ಮನವೇ ಸ್ವಹಿತ ಕಾರಣ 1
ಮನದ ಕೊನಿಯಲಿದೆ ಘನಸುಖದಾಟ ಅನುದಿನ ನೋಡುದು ನೀಟ ಸ್ವಾನುಭವದಲಿದು ನೋಡುವ ನೋಟ ಮುನಿಜನರ ಸುಖದೂಟ 2
ಮನೋನ್ಮನದೊಳಗದೆ ಘನಸ್ಫೂರ್ತಿ ಜ್ಞಾನ ಮನೆ ವಾರ್ತಿ ಮನದೊಳಗಿಹ್ಯ ಮಹಿಪತಿ ಗುರುಮೂರ್ತಿ ಮನಕಾಗಿಹ ತಾಂ ಸಾರ್ಥಿ 3
***