Wednesday, 1 September 2021

ಮನದಿಂದಲಿ ಮನನೋಡಿ ಮನವರಿತು ಘನ ಕೂಡಿ ankita mahipati

ಮನದಿಂದಲಿ ಮನನೋಡಿ ಮನವರಿತು ಘನ ಕೂಡಿ ಪ  


ಮನಸಿನಿಂದ ತಾ ನೋಡುವ ಖೂನ ಮನ ಮರೆಯಲದೆ ನಿಧಾನ ಮನವರಿಯದೆ ಇಹುದ್ಯಾತರ ಜ್ಞಾನ ಮನವೇ ಸ್ವಹಿತ ಕಾರಣ 1 

ಮನದ ಕೊನಿಯಲಿದೆ ಘನಸುಖದಾಟ ಅನುದಿನ ನೋಡುದು ನೀಟ ಸ್ವಾನುಭವದಲಿದು ನೋಡುವ ನೋಟ ಮುನಿಜನರ ಸುಖದೂಟ 2 

ಮನೋನ್ಮನದೊಳಗದೆ ಘನಸ್ಫೂರ್ತಿ ಜ್ಞಾನ  ಮನೆ ವಾರ್ತಿ ಮನದೊಳಗಿಹ್ಯ ಮಹಿಪತಿ ಗುರುಮೂರ್ತಿ ಮನಕಾಗಿಹ ತಾಂ ಸಾರ್ಥಿ 3

***


No comments:

Post a Comment