ಕಾಖಂಡಕಿ ಶ್ರೀ ಕೃಷ್ಣದಾಸರು
ಬೋಧ ನುಡಿಗಳು | ಹೀನ ಮನುಜರಿಗ್ಯಾತಕೆ | ಪಾದ ಕಮಲಧ್ಯಾನವುಳ್ಳ ಸುಜನರಿಗಲ್ಲದೇ ಪ
ಕಾಣದವಗ ಕನ್ನಡಿ ಅದ್ಯಾತಕೆ | ರಾಣಿ ಯಾತಕೆ ಷಂಡಗೆ | ಗೋಣಿಗ್ಯಾತಕೆ ಗವಸಣಿಕೆ ಗೀ | ರ್ವಾಣಗಳೇಕೆ ಗೊರವಗ 1
ಶ್ವಾನಗ್ಯಾತಕ ಇಕ್ಷುದಂಡವು | ಈ ನರಿಗೆ ಊರ್ಯಾತಕೆ | ದೀನಗ್ಯಾತಕೆ ಧರ್ಮವಾರ್ತೆಯು | ವಾನರಕ ಸರ ಮುತ್ತು ಯಾತಕೆ 2
ಬುತ್ತಿಗಳ್ಳರಿಗ್ಯಾಕೆ ವೃತಗಳು | ಕತ್ತಿಗ್ಯಾತಕೆ ಕಸ್ತೂರಿ | ಕರ್ತ ಮಹಿಪತಿ ನಂದನುಸುರಿದ | ಚಿತ್ತ ಶುದ್ಧಿಯ ಪಡಿಯದವರಿಗೆ 3
***
No comments:
Post a Comment