RSS song
ಅರುಣ ಧ್ವಜವು ಕರೆಯುತಿಹುದು ಬಾ ಹಿಂದು ಬಾ ||ಪ||
ಮನವ ತೆರೆದು ಶಿರವ ಮಣಿದು ಓ ಎಂದು ಬಾ
ಬಂಧು ನಾವು ಎಂದು ಬಾ ಎಂದೆಂದಿಗೂ ಒಂದೆ ಬಾ ||೧||
ಹಳೆಯ ಕಹಿಯ ಮರೆತುಬಿಡು ದ್ವೇಷ ರೋಷ ದೂರ ಸುಡು
ಎಲ್ಲ ಹಗೆ ಎಲ್ಲ ಧಗೆ ಮೀರಿಬರಲಿ ಸ್ನೇಹ ನಗೆ ||೨||
ಸತ್ಯ ನ್ಯಾಯ ನೀತಿ ನಡೆ ದಿಟ್ಟ ನಿಲುವು ಬರದು ತಡೆ
ದರ್ಪ ದಮನಕಿರದು ಬೆಲೆ ಹರಿಯೆ ಪ್ರೀತಿ ಶಾಂತಿ ಸೆಲೆ ||೩||
ಸಂತವಾಣಿ ದಿನವು ನೆನೆ ಬಿತ್ತು ಮನದಿ ಬರಲಿ ತೆನೆ
ವೀರಗಾಥೆ ಕೇಳಿ ತನು ರೋಮಾಂಚಿತವಾಗದೇನು? ||೪||
ಧರ್ಮದರಿವು ಮೂಡಲಿ ಜನ ಜಾಗೃತಿಯಾಗಲಿ
ಓಂಕಾರದ ನಾದದಿ ವಿಜಯ ಭೇರಿ ಮೊಳಗಲಿ ||೫||
***
aruNa dhvajavu kareyutihudu bA hiMdu baa ||pa||
manava teredu Sirava maNidu O eMdu baa
baMdhu nAvu eMdu bA eMdeMdigU oMde bA ||1||
haLeya kahiya maretubiDu dvESha rOSha dUra suDu
ella hage ella dhage mIribarali snEha nage ||2||
satya nyAya nIti naDe diTTa niluvu baradu taDe
darpa damanakiradu bele hariye prIti SAMti sele ||3||
saMtavANi dinavu nene bittu manadi barali tene
vIragAthe kELi tanu rOmAMcitavAgadEnu? ||4||
dharmadarivu mUDali jana jAgRutiyAgali
OMkArada nAdadi vijaya BEri moLagali ||5||
***
ಅರುಣ ಧ್ವಜವು ಕರೆಯುತಿಹುದು
ಅರುಣ ಧ್ವಜವು ಕರೆಯುತಿಹುದು ಬಾ ಹಿಂದು ಬಾ || ಪ ||
ಮನವ ತೆರೆದು ಶಿರವ ಮಣಿದು ಓ ಎಂದು ಬಾ
ಬಂಧು ನಾವು ಎಂದು ಬಾ ಎಂದೆಂದಿಗೂ ಒಂದೆ ಬಾ || 1 ||
ಹಳೆಯ ಕಹಿಯ ಮರೆತುಬಿಡು ದ್ವೇಷ ರೋಷ ದೂರ ಸುಡು
ಎಲ್ಲ ಹಗೆ ಎಲ್ಲ ಧಗೆ ಮೀರಿಬರಲಿ ಸ್ನೇಹ ನಗೆ || 2 ||
ಸತ್ಯ ನ್ಯಾಯ ನೀತಿ ನಡೆ ದಿಟ್ಟ ನಿಲುವು ಬರದು ತಡೆ
ದರ್ಪ ದಮನಕಿರದು ಬೆಲೆ ಹರಿಯೆ ಪ್ರೀತಿ ಶಾಂತಿ ಸೆಲೆ || 3 ||
ಸಂತವಾಣಿ ದಿನವು ನೆನೆ ಬಿತ್ತು ಮನದಿ ಬರಲಿ ತೆನೆ
ವೀರಗಾಥೆ ಕೇಳಿ ತನು ರೋಮಾಂಚಿತವಾಗದೇನು? || 4 ||
ಧರ್ಮದರಿವು ಮೂಡಲಿ ಜನ ಜಾಗೃತಿಯಾಗಲಿ
ಓಂಕಾರದ ನಾದದಿ ವಿಜಯ ಭೇರಿ ಮೊಳಗಲಿ || 5 ||
***