ಯತಿವರ್ಯರ ಸ್ತುತಿ
ಪಾಲಿಸು ಬ್ರಹ್ಮಣ್ಯ ಗುರುವರಾ ಪಾಲಿಸು ಬ್ರಹ್ಮಣ್ಯ ಪ
ಬಾಲಕನಾದನ ಪೇಳುವ ಮೊರೆಯನು
ಲಾಲಿಸಬೇಕಯ್ಯಾ ಹೇ ಜೀಯಾ ಅ.ಪ.
ಅಂದು ಮೃತದೇಹ ಇಂದಿರೇಶನ ದಯದಿಂದದುದ್ಧರಿಸಿದ
ಮಂದಹಾಸದಿ ತವ
ಕಂದನೆಂದು ಎನ್ನ ಕುಂದುಗಳೆಣಿಸದೆ ಚೆಂದದಿ
ಕಾಪಾಡೊ ದಯಮಾಡೊ 1
ಪುರುಷೋತ್ತಮ ತೀರ್ಥಕರಸಂಜಾತನೆ
ಪುರುಷಯೋಜನಜನಹರಿಪಾದಭೃಂಗನೆ
ಹರುಷದಿ ಬಾಲಗೆ ಗುರುಪದವಿಯನಿತ್ತೆ ಸಿರಿಪಾದರ
ಅಗ್ರಜಾ ಗುರುರಾಜಾ 2
ಅನುದಿನ ಸ್ಮರಿಪೆನೋ ಅನಘ ನಿನ್ನಯ ಪಾದ ಘನಮಹಿಮೆಗಳೆಲ್ಲ
ಮನದಲಿ ನಿಲ್ಲಿಸೋ
ಘನಮಹಿಮನೆ ಎನ್ನ ಬಿನ್ನಪ ಲಾಲಿಸೊ
ಹನುಮನಯ್ಯನ ದಾಸಾ ಯತೇಶ3
****