Showing posts with label ಬಾರೆ ದ್ರೌಪದಿ ಭಾಳ ಹರುಷದಿಂದ ಸುಂದರಿ ರಾಜ ಧರ್ಮರಾಯರಿದ್ದ ಹಸೆಗೆ ಒಯ್ಯಾರಿ bheemesha krishna. Show all posts
Showing posts with label ಬಾರೆ ದ್ರೌಪದಿ ಭಾಳ ಹರುಷದಿಂದ ಸುಂದರಿ ರಾಜ ಧರ್ಮರಾಯರಿದ್ದ ಹಸೆಗೆ ಒಯ್ಯಾರಿ bheemesha krishna. Show all posts

Wednesday, 1 September 2021

ಬಾರೆ ದ್ರೌಪದಿ ಭಾಳ ಹರುಷದಿಂದ ಸುಂದರಿ ರಾಜ ಧರ್ಮರಾಯರಿದ್ದ ಹಸೆಗೆ ಒಯ್ಯಾರಿ ankita bheemesha krishna

...

ಬಾರೆ ದ್ರೌಪದಿ ಭಾಳ ಹರುಷದಿಂದ ಸುಂದರಿ

ರಾಜ ಧರ್ಮರಾಯರಿದ್ದ ಹಸೆಗೆ ಒಯ್ಯಾರಿ ಪ


ಅರಸುಧರ್ಮಜ ಭೀಮ ಪಾರ್ಥ ನಕುಲ ಸಾದೇವ

ಸರಸವಾಡಿ ಕುಳಿತಾರೆ ಸಂತೋಷದಿಂದಲಿ 1


ಹೇಮ ಮಾಣಿಕ್ಯ ಪುತ್ಥಳಿ ಚಂದ್ರಹಾರ ಪದಕವು

ಆಣಿ ಮುತ್ತಿನ ಸರಗಳು ಕಟ್ಟಾಣಿ ಹೊಳೆಯುತ 2


ವಂಕಿ ನಾಗಮುರಿಗೆ ಸರಿಗೆ ಕಂಕಣ ದ್ವಾರ್ಯವು

ಕುಂಕುಮ ಗಂಧ ಪರಿಮಳ ಅಲಂಕಾರವಾಗಿ 3


ಹೆರಳುಬಂಗಾರ ಚೌರಿ ಚಂದ್ರ ಗೊಂಡ್ಯ ರಾಗಟೆಯು

ಅರಳು ಮಲ್ಲಿಗೆ ಪಾರಿಜಾತ ಮುಡಿಯಲ್ಲೊ ್ಹಳೆಯುತ 4


ಗೆಜ್ಜೆ ಅಡ್ಡಿಕೆ ವಜ್ರದೋಲೆ ಬುಗುಡಿ ಬುಲಾಕು

ಮುದ್ದು ಮೋರೆಗೆ ಮುತ್ತುಕೆಂಪಿನ ಮುಕುರ್ಯ ಜಾಣೆ 5


ಜರದನಿರಿಗ್ವಜ್ಜರದÀ ಪಟ್ಟಿ ಥಳಕೆಂದ್ಹೊಳೆಯುತ

ಚರಣದುಂಗುರ ಪೈಜಣ ರುಳಿಯು ಘಲುಘಲೆನ್ನುತ 6


ಕೋಮಲಾಂಗಿ ಬಂದು ಭೀಮೇಶಕೃಷ್ಣನ ತಂಗಿಭೀಮ ಧರ್ಮರ ಮುಂದೆ ಕುಳಿತಳು ಪಾರ್ಥನರ್ಧಾಂಗಿ7

******