...
ಬಾರೆ ದ್ರೌಪದಿ ಭಾಳ ಹರುಷದಿಂದ ಸುಂದರಿ
ರಾಜ ಧರ್ಮರಾಯರಿದ್ದ ಹಸೆಗೆ ಒಯ್ಯಾರಿ ಪ
ಅರಸುಧರ್ಮಜ ಭೀಮ ಪಾರ್ಥ ನಕುಲ ಸಾದೇವ
ಸರಸವಾಡಿ ಕುಳಿತಾರೆ ಸಂತೋಷದಿಂದಲಿ 1
ಹೇಮ ಮಾಣಿಕ್ಯ ಪುತ್ಥಳಿ ಚಂದ್ರಹಾರ ಪದಕವು
ಆಣಿ ಮುತ್ತಿನ ಸರಗಳು ಕಟ್ಟಾಣಿ ಹೊಳೆಯುತ 2
ವಂಕಿ ನಾಗಮುರಿಗೆ ಸರಿಗೆ ಕಂಕಣ ದ್ವಾರ್ಯವು
ಕುಂಕುಮ ಗಂಧ ಪರಿಮಳ ಅಲಂಕಾರವಾಗಿ 3
ಹೆರಳುಬಂಗಾರ ಚೌರಿ ಚಂದ್ರ ಗೊಂಡ್ಯ ರಾಗಟೆಯು
ಅರಳು ಮಲ್ಲಿಗೆ ಪಾರಿಜಾತ ಮುಡಿಯಲ್ಲೊ ್ಹಳೆಯುತ 4
ಗೆಜ್ಜೆ ಅಡ್ಡಿಕೆ ವಜ್ರದೋಲೆ ಬುಗುಡಿ ಬುಲಾಕು
ಮುದ್ದು ಮೋರೆಗೆ ಮುತ್ತುಕೆಂಪಿನ ಮುಕುರ್ಯ ಜಾಣೆ 5
ಜರದನಿರಿಗ್ವಜ್ಜರದÀ ಪಟ್ಟಿ ಥಳಕೆಂದ್ಹೊಳೆಯುತ
ಚರಣದುಂಗುರ ಪೈಜಣ ರುಳಿಯು ಘಲುಘಲೆನ್ನುತ 6
ಕೋಮಲಾಂಗಿ ಬಂದು ಭೀಮೇಶಕೃಷ್ಣನ ತಂಗಿಭೀಮ ಧರ್ಮರ ಮುಂದೆ ಕುಳಿತಳು ಪಾರ್ಥನರ್ಧಾಂಗಿ7
******
No comments:
Post a Comment