Wednesday, 1 September 2021

ರಂಗವಲಿದ ದಾಸಾಗ್ರಣಿ ಮಾನವ ಶಿಂಗಾರ್ಯರ ಸುತನಮೋ ನಮೋ ankita shyamasundara

 ..

ರಂಗವಲಿದ ದಾಸಾಗ್ರಣಿ ಮಾನವ

ಶಿಂಗಾರ್ಯರ ಸುತನಮೋ ನಮೋ ಪ


ಮಂಗಳಕರ ಕುಲಿಶಾಂಗ ಮತಾಂಬುಧಿ

ತಿಂಗಳಸುಗುಣಿತ ನಮೊ ನಮೊ ಅ.ಪ


ತುಂಗಮಹಿಮ ದ್ವಿಜ ಪುಂಗವ ವಿಜಿತಾ

ನಂಗ ಶರ ದಯಾಪಾಂಗ ನಮೋ ||

ಡಿಂಗರೀಕ ಜನಪಾಲ ನಮೊ ಭವ

ಭಂಗ ವಿದಾರಣ ನಮೊ ನಮೊ 1


ಜಾತರೂಪ ಶಯ್ಯಾತ್ಮಜ್ಯಾತೆ ಹರಿ |

ದೂತ ಪ್ರಹ್ಲಾದರನುಜ ನಮೊ ||

ಪೂತುರೆ ಘನ ಸತ್ವಾತಿಶಯದ ಪ್ರ

ಖ್ಯಾತ ದಿನಪ ಪ್ರಸೂತ ನಮೊ 2


ಪಾತಕಾದ್ರಿಜೀಮೂತ ಭ್ರಾತ ಪಣಿ

ನಾತ ಪುರಂದರ ಪೋತನಮೊ

ಪೂತಗಾತ್ರ ಶುಭದಾತ್ರ ಭರಿಕ್ಷ

ಣ್ಮಾತಿರಿಷ್ಯಶ್ವ ಸುಪ್ರೀತ ನಮೊ 3


ಮೌನಿವರ್ಯ ವರದೇಂದ್ರ ಪಾದಾಂಬುಜ

ರೇಣು ವಿಭೂಷಿತ ಪಾಲಯಮಾಂ

ಧೇನು ನಿಧೆ ದೇವಾಂಶಜ ಪರಮತ

ಕಾನನ ಪಾವಕ ಪಾಲಯಮಾಂ 4


ಮಾನವಿ ಕ್ಷೇತ್ರನಿಕೇತನ ಸನ್ನುತ

ಮಾನಿತ ಗುರುವರ ಪಾಲಯ ಮಾಂ

ಧೇನುಪಲ ವಿಜಯರಾರ್ಯ ಕೃಪಾನ್ವಿತ

ಧೀನೋದ್ಧರಣ ಫಾಲಯಮಾಂ

ಮಾನದಿ ಕ್ಷೇತನಿಕೇತನ ಸನ್ನುತ

ಮಾನಿತ ಗುರುವರ ಪಾಲಯಮಾಂ

ಜ್ಞಾನನಿಧೆ ದೇವಾಂಶಜ ಪರಮತ

ಕಾನನ ಪಾವಕ ಪಾಲಯ ಮಾಂ 5


ಶೌರಿಕಥಾಮೃತ ಸಾರಗ್ರಂಥ ಕೃತ

ಸೂರಿ ಕುಲೋತ್ತುಮ ಜಯ ಜಯಭೋ

ಧಾರುಣಿ ಸುರಪರಿವಾರ ನಮಿತ ಪದ

ಚಾರುಸ್ತಂಭಾಲಯ ಜಯ ಜಯ ಭೀ 6


ಮಂದವೃಂದ ಮಂದಾರ ಭೂಜನತ

ಬಂಧೋ ಭಯಾಪಹ ಜಯ ಜಯ ಭೋ

ನಂದಜ ಶಾಮಸುಂದರಾಂಘ್ರಿ ಅರ

ವಿಂದ ಮರಂದುಣಿ ಜಯ ಜಯ ಭೋ 7

***


No comments:

Post a Comment