Showing posts with label ಸಕಲ ಸಾಧನವೆನಗೆ ಕೈಸೇರಿತು ಮುಕುತಿಯ hayavadana. Show all posts
Showing posts with label ಸಕಲ ಸಾಧನವೆನಗೆ ಕೈಸೇರಿತು ಮುಕುತಿಯ hayavadana. Show all posts

Saturday, 14 December 2019

ಸಕಲ ಸಾಧನವೆನಗೆ ಕೈಸೇರಿತು ಮುಕುತಿಯ ankita hayavadana

ರಾಗ ಮುಖಾರಿ ಝಂಪೆತಾಳ

ಸಕಲ ಸಾಧನವೆನಗೆ ಕೈಸೇರಿತು
ಮುಕುತಿಯ ಮಾತಿಗೆ ಬಾರದಾ ಧನವು ||ಪ||

ಸಂಸಾರದಲಿ ಜ್ಞಾನ ಸತಿಸುತರಲಿ ಭಕ್ತಿ
ಕಂಸಾರಿ ಪೂಜೆಯಲಿ ವೈರಾಗ್ಯವು
ಸಂಶಯದ ಜನರಲ್ಲಿ ಸಖತನವ ಮಾಡುವೆನು
ಹಿಂಸೆಪಡಿಸುವೆನು ಜನಸಂಗ ಹರಿಸಂಗ ||೧||

ವಿಷಯಂಗಳಲಿ ಧ್ಯಾನ ಲೌಕಿಕದಲಿ ಮನನ
ವಶವಲ್ಲದಾ ಕಥೆಗಳಲ್ಲಿ ಮನವು
ಹಸನಾಗಿ ಎಣಿಸುವ ಆ ಹಣ ಹೊನ್ನಿನಾ ಜಪವು
ಬಿಸಿಲೊಳಗೆ ಚರಿಸುವುದೆ ಅದೆ ಮಹಾ ತಪವು ||೨||

ಪೀಠ ಪೂಜೆಂಬುವುದು ಲಾಜ ಚೂರಣ ಮೈಯ
ಮಾಟದ ಪಯೋಧರವೆ ಕಳಶ ಪೂಜೆ
ಚೂಟಿಯಲಿ ಉದರದ ಯಾತ್ರೆಯೇ ಮಹಾಯಾತ್ರೆ
ಬೂಟಕದಿ ಅನೃತವನು ಪೇಳುವುದೆ ಮಂತ್ರ ||೩||

ಹೆಂಡತಿಯ ಕೊಂಡೆಯದ ಮಾತುಗಳೆ ಉಪದೇಶ
ಚಂಡಕೋಪವು ಎಂಬ ಅಗ್ನಿಹೋತ್ರ
ಪಂಡಿತನು ನಾನಾಗಿ ಅವಿಧೇಯರನು ಸೇರಿ
ಕಂಡಕಡೆ ವಾದಿಸುವುದು ಅತಿತರ್ಕವಯ್ಯ ||೪||

ಓದಿದೆ ಎಲ್ಲಣ್ಣ ಕಲ್ಲಣ್ಣ ಎನುತಲಿ
ವೇದವೆಂಬುದು ಎನಗೆ ಪಗಡೆ ಪಂಚಿ
ಸಾದಿಸಿ ಈ ಪರಿಯ ಧನವನ್ನು ಕೂಡ್ಹಾಕಿ
ಮೋದಿ ಹಯವದನ ವಿಠ್ಠಲ ನಿನ್ನ ಮರೆತು ||೫||
*********