" ಶ್ರೀ ವರದವಿಠ್ಠಲರು "....
ಉದಯರಾಗ ತಾಳ : ಝ೦ಪೆ
ಏಳಯ್ಯ ಗುರುವೇ ಬೆಳಗಾಯಿತು ।
ಏಳು ಶ್ರೀ ಗುರು ಜಗನ್ನಾಥದಾಸಾರ್ಯ ।। ಪಲ್ಲವಿ ।।
ಪರಮ ಭಾಗವತವನು ಅತಿ ।
ವಿರಳದಲಿ ತಿಳಿಸಬೇಕು ।
ಶಾಸ್ತ್ರಾರ್ಥಗಳ ನಿಜ ಮರ್ಮವ । ವಿಶದೀ ।
ಕರಿಸಲೀಬೇಕು ।।
ಹರಿಕಥಾಮೃತಸಾರಕೆ ।
ಪರಿಮಳ ರಚಿಸಬೇಕು ।
ಪರತರ ಪದ್ಯ ಸುಳಾದಿಗಳ ।
ವಿರಚಿಸಲಿಬೇಕು ।। ಚರಣ ।।
ಗುರುಗುಣಸ್ತವನವನು ರಚಿಸಿ ಪಾಡಲುಬೇಕು ।
ವರ ಅಪ್ಪಣ್ಣಾರ್ಯರಾಗಿ ।
ಗುರುಗಳೊಂದಿಗೆ ಮಾತನಾಡಲುಬೇಕು ಬೆನಕಪ್ಪರಾಗಿ ।
ಹರಿಕಥಾಮೃತಸಾರಕೆ । ಫಲಶ್ರುತಿ ।।
ಯ ರಚಿಸಬೇಕು ಶ್ರೀದವಿಠಲರಾಗಿ ।
ಗುರುಗಳ ಇರುವನ್ನು ತೋರಿಸಲಿಬೇಕು ।
ಗುರು ಜಗನ್ನಾಥದಾಸಾರ್ಯರಾಗಿ ।। ಚರಣ ।।
ಘೋರತರ ಸಂಸಾರ ಸಾಗರದಲಿ ।
ದಾರಿ ಕಾಣದೇ ಬಳಲಿ ಬೆಂಡಾಗಿ ನಿಂತಿಹನೋ ।
ಪರಮ ಕರುಣಾಕರನಾದ ವರದವಿಠ್ಠಲನ ದಾಸ ।
ಕೈಪಿಡಿದು ಉದ್ಧರಿಸಲು ಬೇಗನೇ ಏಳು ।। ಚರಣ ।।
*****