Showing posts with label ಸಲಹು ಶ್ರೀ ಗುರುರಾಯ ಸಲಹು ಬುಧಜನಪ್ರಿಯ mahipati. Show all posts
Showing posts with label ಸಲಹು ಶ್ರೀ ಗುರುರಾಯ ಸಲಹು ಬುಧಜನಪ್ರಿಯ mahipati. Show all posts

Wednesday, 11 December 2019

ಸಲಹು ಶ್ರೀ ಗುರುರಾಯ ಸಲಹು ಬುಧಜನಪ್ರಿಯ ankita mahipati

by ಮಹಿಪತಿದಾಸರು
ರಾಗ - ಮಾಲಕಂಸ್ ತಾಳ - ಝಪ್

ಸಲಹು ಶ್ರೀ ಗುರುರಾಯ ಸಲಹು ಬುಧಜನಪ್ರಿಯ
ಸಲಹೆನ್ನ ಪರಮಗೇಹ್ಯ ||ಪ||

ಚಿಕ್ಕವನು ನಾ ಮೊದಲು ಸೊಕ್ಕಿ ಭವಸುಳಿಯೊಳಗೆ
ಸಿಕ್ಕಿ ಬಹು ನೊಂದೆನೆಂದು
ಹೊಕ್ಕೆ ಮೊರೆ ನಿನ್ನ ಹಿಂ-
ದಿಕ್ಕಿಕೋ ದಯದಿಂದ ಮಕ್ಕಳಂದದಲಿ ಚೆನ್ನಾಗೆನ್ನ ||೧||

ಪಿಂತಿನ ಬವಣೆಗಳು ಎಂತಾದರಾಗಲಿ
ಶಾಂತಮೂರುತಿಯೆ ಎನ್ನ
ಅಂತರಂಗದಲಿನ್ನು ನಿಂತು ನಿನ್ನಯ ರೂಪ
ಸಂತತವಾಗಿ ತೋರೋ ಬೀರೋ ||೨||

ಅನ್ಯಪಥಜಕೆಳಸಿದ ಘನ ತಪ್ಪನು ಕ್ಷಮಿಸಿ
ನಿನ್ನ ಪದಯುಗಳ ತೋರಿ
ಸನ್ನುತನೆ ಮಹಿಪತಿ ಚಿನ್ನಕೃಷ್ಣನ ಸ್ವಾಮಿ
ಇನ್ನಾರೆ ದಯವ ಮಾಡೋ ನೋಡೋ ||೩||
***

check kruti by ಕಾಖಂಡಕಿ ಶ್ರೀ ಕೃಷ್ಣದಾಸರು

ಸಲಹು ಶ್ರೀ ಗುರುರಾಯಾ | ಸಲಹು ಬುಧ ಜನಪ್ರೀಯಾ | ಸಲಹೆನ್ನ ಪರಮ ಗೇಹ್ಯಾ ಪ 


ಚಿಕ್ಕವನು ನಾ ಮೊದಲು | ಸೊಕ್ಕಿ ಭವಸುಳಿಯೊಳಗೆ | ಸಿಕ್ಕಿ ಬಹು ನೊಂದೆನೆಂದು | ಹೊಕ್ಕೆ ಮೊರೆ ನಿನ್ನ ಹಿಂದಿಕ್ಕಿಕೋ ದಯದಿಂದ | ಮಕ್ಕಳಂದದಲಿ ಚೆನ್ನಾಗೆನ್ನಾ 1 

ಪಿಂತಿನಾ ಭವಣೆಗಳು | ಎಂತಾದರಾಗಲೀ | ಶಾಂತ ಮೂರುತಿಯೇ ಎನ್ನಾ | ಅಂತರಂಗದಲಿನ್ನು ನಿಂತು ನಿನ್ನಯ ರೂಪ | ಸಂತತವಾಗಿ ದೋರೋ ಬೀರೋ 2 

ಅನ್ಯಪಥಕೆಳಿಸಿದಾ ಘನ್ನ ತಪ್ಪವ ಕ್ಷಮಿಸಿ | ನಿನ್ನ ಪದಯುಗಳ ದೋರಿ | ಸನ್ನುತವೆ ಮಹಿಪತಿ ಚಿನ್ನ ಕೃಷ್ಣನ ಸ್ವಾಮಿ | ಇನ್ನಾರೆ ದಯಮಾಡೋ ನೋಡೋ 3

****