ತುಳಸೀರಾಮದಾಸರು
ಎಷ್ಟು ಆನಂದವೊ ಶ್ರೀಹರಿಯ ಭಜನೆ ಪದುಷ್ಟತರ ದೋಷಗಳು ಬಳಲುವಕಷ್ಟಗಳ ಪರಿಹರಿಸಿ ಸರ್ವೋತ್ಕøಷ್ಟ ಪದವಿಯ ಕೊಡುವ ಲಕ್ಷ್ಮೀಇಷ್ಟನಾರಾಯಣನ ಭಜನೆ 1
ಪದ್ಮದಳನಯನ ಪ್ರತಿಷ್ಠೆಯಪದ್ಮಶಾಲಿಯ ಭಕ್ತರೆಲ್ಲರುಪದ್ಮನಾಭನ ಪ್ರೀತಿಮಾಡಿ ಸುಭದ್ರಸಂಪದ್ಯುಕ್ತರಾದರು 2
ಮಂದಿರವು ಕಟ್ಟಿಸಿಯು ಪರಮಾನಂದದಿಂ ಉತ್ಸವವು ನಡಿಸಿದರೆಂದು ಕೇಳಿದ ಭಾಗ್ಯಶಾಲಿಗಳುಇಂದಿರೇಶನ ಕೃಪೆಯ ಪಡೆದರು 3
ಅಂಬುಜೋದರದಾಸರೆಲ್ಲರುತಂಬುರೆಯು ಕರತಾಳವಾದ್ಯವಿಜೃಂಭಿಸಿ ಹರಿಸ್ಮರಣೆಯ ಮಾಡುತಸಂಭ್ರಮದಿ ಬಂದವರು ನೋಡಲು 4
ವಾಸುಕೀನಗರೇಶ ದಾಸರದಾಸರಾಗಿಯು ತುಲಸಿರಾಮದಾಸ ಪರಮೋಲ್ಲಾಸದಿಂ ಶ್ರೀವಾಸುದೇವನ ಚರಣನಂಬಿದೆ 5
***