Showing posts with label ರಂಗ ನಮ್ಮನೆಗೆ ಬಂದ ಮತ್ತೇನು ತಂದ indiresha RANGA NAMMANEGE BANDA MATTENU TANDA. Show all posts
Showing posts with label ರಂಗ ನಮ್ಮನೆಗೆ ಬಂದ ಮತ್ತೇನು ತಂದ indiresha RANGA NAMMANEGE BANDA MATTENU TANDA. Show all posts

Thursday, 2 December 2021

ರಂಗ ನಮ್ಮನೆಗೆ ಬಂದ ಮತ್ತೇನು ತಂದ ankita indiresha RANGA NAMMANEGE BANDA MATTENU TANDA



by huchchacharya, tirupati 

ರಂಗ ನಮ್ಮನೆಗೆ ಬಂದ ಮತ್ತೇನು ತಂದ                                     ।।ಪ॥
 
ಜಗದೋದ್ಧಾರನ ಸಭೆಗೆ ಬಂದ ನಗುವ ಪರಿಯ ಹೇಳಿದ್ದು ತಂದ
ಬಗೆ ಬಗೆ ವಸ್ತ್ರಕೊಳ್ಳಿರೆಂದ ಪಗಡಿ ಧರ್ಮಗೆ ತರಲಿಲ್ಲೆಂದ                 ।।೧।।

ವಾಣಿ ಮಾವ ಮನೆಗೆ ಬಂದ ಜಾಣತನವ ಹೇಳಿದ್ದು ತಂದ 
ಮಾಣಿಕ ಮುತ್ತುಕೊಳ್ಳಿರೆಂದ ಕ್ವಾಣವ ಧರ್ಮಗೆ ತರಲಿಲ್ಲಂದ            ।।೨।।

ಕೃಷ್ಣರಾಯ ಸಭೆಗೆ ಬಂದ ಎಷ್ಟು ಜಂಬ ಹೇಳಿದ್ದು ತಂದ 
ಪಟ್ಟಾವಳಿ ಕೊಳ್ಳಿರೆಂದ ಹುಟ್ಟು ಭೀಮಗೆ ತರಲಿಲ್ಲೆಂದ            ।।೩।।

ನಳಿನಾಕ್ಷಸಭೆಯೊಳು ಬಂದ ಹೊಳೆವೊ ಎಷ್ಟು ಹೇಳಿದ್ದು ತಂದ 
ಝಳಿಸೋ ವಸ್ತ್ರಕೊಳ್ಳಿರೆಂದ ಬಳೆ ಪಾರ್ಥಗೆ ತರಲಿಲ್ಲೆಂದ               ।।೪।।

ರಾಜ್ಯ ಲಕ್ಷ್ಮಣನಿಗಿಲ್ಲೆಂದ ಮಾಜುದಾ ಕುಲ ಧರ್ಮ ಕುಂದ 
ತೇಜ ಮುಂದೆ ಓಡಿದ್ದು ಚೆಂದ ಸೋಜಿಗವಲ್ಲ ನಕುಲನೆಂದ              ।।೫।।

ಸುಮನಸರು ನಗುವೊರೆಂದ ಭ್ರಮೆಯ ಕಳೆದ್ಯೋ ಸಹದೇವ ಎಂದ 
ಅಮಿತದನವ ಕಾಯ್ವೋಛಂದ  ರಮಿಯರಸು ನಗುವನೆಂದ            ।।೬।।

ಅಂದ ಮಾತಿಗೆ ಬಲರಾಮ ಹೀಗೆಂದ ಚಂದವಾಯಿತು ಕುಶಲವೆಂದ 
ನಿಂದ್ಯವ ನೀ ಮಾಡಿಕೊ ಎಂದ ಇಂದಿರೇಶಗೆ ತಿಳಿಸಿರೆಂದ              ।।೭।।
***


ರಂಗನಮ್ಮನೆಗೆ ತಾ ಬಂದಮತ್ತೇನು ತಂದ ಪ.

ಜಗದೋದ್ದಾರ ಸಭೆಗೆ ಬಂದನಗುವ ಪರಿಯ ಹೇಳಿದ್ದು ತಂದಬಗೆ ಬಗೆ ವಸ್ತ್ರ ಕೊಳ್ಳಿರೆಂದಪಗಡಿ ಧರ್ಮಗೆ ತರಲಿಲ್ಲೆಂದ 1

ವಾಣಿ ಮಾವ ಮನೆಗೆ ಬಂದಜಾಣತನವ ಹೇಳಿದ್ದು ತಂದಮಾಣಿಕ ಮುತ್ತು ಕೊಳ್ಳಿರೆಂದಕ್ವಾಣನ ಧರ್ಮಗೆ ತರಲಿಲ್ಲೆಂದ 2

ಕೃಷ್ಣರಾಯಸಭೆಗೆ ಬಂದಎಷ್ಟು ಜಂಬ ಹೇಳಿದ್ದು ತಂದಪಟ್ಟಾವಳಿಕೊಳ್ಳಿರೆಂದಹುಟ್ಟು ಭೀಮಗೆತರಲಿಲ್ಲೆಂದ 3

ನಳಿನಾಕ್ಷ ಸಭೆಯೊಳು ಬಂದಹೊಳೆವೊ ಎಷ್ಟು ಹೇಳಿದ್ದು ತಂದಝಳಿಸೋವಸ್ತ್ರ ಕೊಳ್ಳಿರೆಂದಬಳೆಯ ಪಾರ್ಥಗೆ ತರಲಿಲ್ಲೆಂದ 4

ರಾಜ್ಯ ಲಕ್ಷಣ ನಿನಗಿಲ್ಲೆಂದಮಾಜುದಾ ಕುಲ ಧರ್ಮಕುಂದತೇಜಿ ಮುಂದೆ ಓಡಿದ್ದು ಚಂದಸೋಜಿಗವಲ್ಲ ನಕುಲನೆಂದ 5

ಸುಮನಸರು ನಗುವೊರೆಂದಭ್ರಮೆಯ ಕಳೆದ್ಯೊ ಸಹದೇವ ಎಂದಅಮಿತ ದನವ ಕಾಯ್ದ್ಯೊಛಂದರಮಿಯ ಅರಸು ನಗುವ ನೆಂದ 6

ಅಂದ ಮಾತಿಗೆ ಬಲರಾಮ ಹೀಗೆಂದಚಂದ ವಾಯಿತು ಕುಶಲವೆಂದನಿಂದ್ಯವ ನೀ ಮಾಡಿಕೊ ಎಂದಇಂದಿರೇಶಗೆ ತಿಳಿಸಿರೆಂದ 7

*******