Showing posts with label ಮುನಿರಾಯರ ಸ್ಮರಣೆ ಮಾಡಿರೊ ಮಧ್ವ ಮುನಿರಾಯರ ಸ್ಮರಣೆ namagiri madhwacharya stutih. Show all posts
Showing posts with label ಮುನಿರಾಯರ ಸ್ಮರಣೆ ಮಾಡಿರೊ ಮಧ್ವ ಮುನಿರಾಯರ ಸ್ಮರಣೆ namagiri madhwacharya stutih. Show all posts

Thursday, 5 August 2021

ಮುನಿರಾಯರ ಸ್ಮರಣೆ ಮಾಡಿರೊ ಮಧ್ವ ಮುನಿರಾಯರ ಸ್ಮರಣೆ ankita namagiri madhwacharya stutih

 ..

kruti by ವಿದ್ಯಾರತ್ನಾಕರತೀರ್ಥರು vidyaratnakara teertharu 


ಮುನಿರಾಯರ ಸ್ಮರಣೆ ಮಾಡಿರೊ ಮಧ್ವ

ಮುನಿರಾಯರ ಸ್ಮರಣೆ ಪ


ಚರಣಕಮಲವ ಭರದಿ ಭಜಿಸುವ

ಧರಣಿ ಸುರರಾದರದಿ ಪೊರೆಯುವ

ತರಣಿ ಮಂಡಲಗಣವ ಗೆಲಿಯುವ

ಹರಿಣವಾಹನನಂಶನಾದ ಅ.ಪ


ಕಪಿರೂಪವÀ ಧರಿಸಿ

ರಾಮನ ಆಜ್ಞೆಯನು ಶಿರದಲಿ ವಹಿಸಿ

ವಾರಿಧಿಯನು ನಿಮಿಷ ಮಾತ್ರದಿ ಲಂಘಿಸಿ

ದಶವದನನ ಅಶೋಕವನದಲಿ

ಶಶಿಮುಖಿಯ ತಾ ಕಂಡು ವಂದಿಸಿ

ದಶರಥ ಸುತನ ವಾರ್ತೆ ಪೇಳಿ

ನಿಶಿಚರೇಶನ ಪುರವ ವಹಿಸಿದ 1


ಕುರುಕುಲದೊಳಗೆ ಪುಟ್ಟಿ

ಮತ್ಸಾಧಿಪನ

ನಗರದೊಳಗೆ ತಾ ಜಟ್ಟಿ

ಕಾಳಗದಲ್ಲಿ ಮಲ್ಲರ ತಲೆಯ ಮೆಟ್ಟಿ

ದುರುಳ ದುರ್ಯೋಧನನ ಸೇನೆಯು

ಬರಲು ಪಶುಗಳ ಕದಿಬೇಕೆಂದು

ತರಳ ಪಾರ್ಥನ ಕಳುಹಿ ತಕ್ಷಣ

ತಿರುಗಿ ಓಡಿಸುವಂತೆ ಮಾಡಿದ 2


ಪರಬ್ರಹ್ಮ ಅಗುಣನೆಂದು

ಜೀವೇಶರಿಗೆ ಬೇಧವೇ ಇಲ್ಲವೆಂದು

ಪ್ರಪಂಚಕ್ಕೆ ಸತ್ಯತ್ವ ಯಾವುದೆಂದು

ಜಗನ್ಮಿಥ್ಯಾವಾದಿ ಜನಗಳ

ನಿಗಮ ಯುಕುತಿಗಳಿಂದ ಖಂಡಿಸಿ

ಖಗವಾಹನ ನಾಮಗಿರಿ ಸಿರಿ

ನೃಹರಿ ಮೂರುತಿಗರ್ಪಿಸಿದ 3

***