..
kruti by ಲಕ್ಷ್ಮೀನಾರಯಣರಾಯರು Lakshminarayanaru
ಮಾಡುವುದೋ ಕೃಪೆ ದಾಸನೊಳು ರಾಮ
ಮಾಡುವುದೋ ಕೃಪೆ ದಾಸನೊಳು ಪ
ನೋಡ ನೋಡುತ ಕೈಯ್ಯ ಬಿಡುವರೆ
ಬೇಡ ಬೇಡಿಕೊಂಬೆನು
ರೂಢಿಯೊಳು ನಿನ್ನಂಥ ಕರುಣಿಯ
ನೊಡಲಿಲ್ಲವೋ ಎಲ್ಲಿಯು ಅ
ಬಂದೆನೋ ನಾನಾ ಜನ್ಮದಲೀ | ರಾಮ
ನೊಂದೆನೋ ನಾ ಬಹು ಭವಣೆಯಲೀ
ದ್ವಂದ್ವ ದುಃಖದಿ ಕಂದಿ ಕುಂದುತ ಮುಂದುಗಾಣದೆ ಕೆಟ್ಟೆನೋ
ಕಂದನೆನ್ನುತ ಬಂದು ಪೊರೆ ಪರಮಾತ್ಮ ನಂಬಿದೆ ನಿನ್ನನು 1
ದಾನ ಧರ್ಮಗಳ ನಾನರಿಯೆ | ರಾಮ
ಮೌನ ಮಂತ್ರಗಳ ನಾನರಿಯೆ
ಧ್ಯಾನ ಧಾರಣ ಜ್ಞಾನಸಾಧನವೇನೊಂದನು ಅರಿಯೆ
ಹಾನಿಯಿದ ನಾನೇನನೊರೆಯಲಿ ಮಾನನಿಧಿ ನಿನ್ನವನು ನಾ 2
ಕಾಮಿನಿ ಕಾಂಚನ ಭೂಮಿಗಳ | ರಾಮ
ಕಾಮಕೆÉ ಸಿಕ್ಕಿದೆನೋ ಬಹಳ
ನೇಮ ನಿಷ್ಠೆಗಳೇನೂ ಇಲ್ಲದೇ ತಾಪದಿ ನಾ ಕೆಟ್ಟೆನೋ
ನಾಮಸುಧೆಯ ಪಾನ ಕರುಣಿಸು ಪ್ರೇಮದಲಿ ಶ್ರೀಕಾಂತನೇ 3
***