ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಾಕರನೀತ ಕರಿಭಯ ಹರಿದಾತ ಹರಿಪರಂದೈವೀತ ಗುರುನಾಥ ಪ
ಮೂರುಗುಣರಹಿತ ಮೂರುಲೋಕ ವಂದಿತ ಮುರಹರನಹುದೀತ ಗುರುನಾಥ 1
ಸುರಜನ ಪೂಜಿತ ಪರಮಾನಂದಭರಿತ ತಾರಕನಹುದೀತ ಗುರುನಾಥ 2
ಪತಿತಪಾವನೀತ ಪಿತಾಮಹನ ಪಿತ ದಾತನಹುದೀತ ಗುರುನಾಥ 3
ಅನುದಿನ ಸಾಕ್ಷಾತ ದೀನದಯಾಳುನೀತ ಗುರುನಾಥ 4
ಭಕ್ತವತ್ಸಲನೀತ ಶಕ್ತಸದ್ಗುರುನಾಥ ಮುಕ್ತಿದಾಯಕನೀತ ಗುರುನಾಥ 5
ಜನವನದೊಳಗೀತ ಮನೋಭಾವಪೂರಿತ ಆನಂದೋ ಬ್ರಹ್ಮನೀತ ಗುರುನಾಥ6
ಗುಹ್ಯಕೆ ಗುಹ್ಯನೀತ ಬಾಹ್ಯಂತ್ರ ಸದೋದಿತ ಮಹಾಮಹಿಮನೀತ ಗುರುನಾಥ 7
ಇಹಪರ ನಮಗೀತ ಮಹಿಪತಿ ಪ್ರಾಣನಾಥ ಸಹಾಕರನಹುದೀತ ಗುರುನಾಥ 8
****