Showing posts with label ಚಿಂತಿಪದೇನು ಮನವೆ vijaya vittala ankita suladi ಹರಿನಾಮ ಸುಳಾದಿ CHINTIPADENU MANVE HARINAMA SULADI. Show all posts
Showing posts with label ಚಿಂತಿಪದೇನು ಮನವೆ vijaya vittala ankita suladi ಹರಿನಾಮ ಸುಳಾದಿ CHINTIPADENU MANVE HARINAMA SULADI. Show all posts

Friday, 1 October 2021

ಚಿಂತಿಪದೇನು ಮನವೆ vijaya vittala ankita suladi ಹರಿನಾಮ ಸುಳಾದಿ CHINTIPADENU MANVE HARINAMA SULADI

Audio by Mrs. Nandini Sripad

 

ಶ್ರೀವಿಜಯದಾಸಾರ್ಯ ವಿರಚಿತ ಶ್ರೀಹರಿನಾಮ ಪ್ರಶಂಸನಾ ಸುಳಾದಿ 


 ರಾಗ ಕಲ್ಯಾಣಿ 


 ಧ್ರುವತಾಳ 


ಚಿಂತಿಪದೇನು ಮನವೆ ಸಂತತದಲ್ಲಿ ನೀನು

ಅಂತರಂಗದಲ್ಲಿ ಸಂತಾಪದ

ಕಿಂತು ಹಚ್ಚಿಕೊಂಡು ಮಂತ್ರಗಳಿಲ್ಲ ಎನ -

ಗೆಂತು ಸಾಧನವೆಂದು ಚಿಂತಿಸದಿರು

ಮಂತ್ರ ತಂತ್ರಾದಿಯ ಗ್ರಂಥಗಳಿಗೆ ಲಕುಮಿ -

ಕಾಂತನ ನಾಮವೆ ಸಂತತ

ಅಂತರಂಗದಲ್ಲಿ ಚಿಂತೆ ಮಾಡಲು

ಅಂತ್ಯಕಾಲಕ್ಕೆ ಬಂದು ಸಂತಾಪವಿಟ್ಟ

ಅಂತಿಜಗಾದರೂ ಅಂತಕನ ಉಪದ್ರ

ಶಾಂತಿಯ ಮಾಡುವ ಕಂತುಜನಕ

ಮಂತ್ರ ತಂತ್ರಾದಿಯ ಅಂತರಾತ್ಮಕ ಬಲು

ಶಾಂತ ವಿಜಯವಿಟ್ಠಲ ಅಂತರಗೊಳಿಸ ॥ 1 ॥ 


 ಅಟ್ಟತಾಳ 


ಜನನಿಯ ಗರ್ಭದಲಿ ತಂದಿಟ್ಟವನಾರು

ಜನನವಾಗುವಾಗ ಧರೆಗಿಳುಹಿದನಾರು

ಜನಿಸಿದ ತರುವಾಯ ಸಾಕುವ ಪಿತನಾರು

ಜನರೊಳಗೆ ನಡಿಸಿ ನುಡಿಸುವ ಪ್ರಿಯನಾರು

ಜನಕಸುತೆ ಪ್ರೀಯ ವಿಜಯವಿಟ್ಠಲರೇಯ 

ಕನಸಿನೊಳಾದರು ಪೊರೆವನು ಸ್ತುತಿಸಲು ॥ 2 ॥ 


 ತ್ರಿವಿಡಿತಾಳ 


ಕಾಮ ಕ್ರೋಧವ ಬಿಡಿಸಿ ಕಪಟ ಬುದ್ಧಿಯ ಕಳೆದು

ತಾಮಸ ಗುಣವೆಲ್ಲ ಕಡಿಗೆ ನೂಕಿ

ವ್ಯಾಮೋಹ ಲೋಭವ ದೂರದಲ್ಲಿ ನಿಲ್ಲಿಸಿ

ಹೇಮಾದಿಗಳ ಆಕಾಂಕ್ಷ ಪೋಗಾಡಿಸಿ

ನೇಮ ನಿತ್ಯವು ಸರ್ವ ನಿನ್ನ ಯೋಗ್ಯತೆವರಿತು

ರೋಮ ಡೊಂಕಾಗಗೊಡದೆ ನಡೆಸುತಿಪ್ಪ

ಈ ಮರಿಯಾದಿಗಳೆಲ್ಲ ಆವ ಮಂತ್ರಗಳಿಂದ

ಕಾಮಿಸಲು ವಶವಾದುದೆಂಬಿಯಾ

ಧಾ(ದಾ)ಮಕ್ಕೆ ಸಿಗಬಿದ್ದ ವಿಜಯವಿಟ್ಠಲನ್ನ 

ನಾಮಾ ಒಂದಿರಲೀಗ ನೀ ಮನೋರಥನಾದೆ ॥ 3 ॥ 


 ಅಟ್ಟತಾಳ 


ಹಿಂದೆ ನಾನಾಕ ಜನ್ಮಂಗಳಲಿ ಪುಟ್ಟಿ

ಬಂದತಿ ಕಠೋರ ಪಂಕವ ಮಾಡಿರೆ

ಮುಂದೆ ಹಲವು ಜನನದಲ್ಲಿ ಪೋಗಿ ದು -

ರ್ಗಂಧದೊಳಿದ್ದು ದುಷ್ಕರ್ಮವ ಮಾಡಲು

ಸಂದಿಗೊಂದಿಯ ನಿನ್ನಯ ಕುಲಕೋಟಿ ನೂ -

ರೊಂದು ಜನರು ಕಲ್ಪಕಲ್ಪದಲ್ಲಿ ಬಿಡದೆ

ಒಂದಕೆ ಅನಂತಮಡಿ ಪಾಪಾ ಮಾಡಿರೆ

ಒಂದೇ ಸಾರಿ ಕೃಷ್ಣ ನಾರಾಯಣ ಮು -

ಕುಂದ ಎಂದದಕೇವೆ ಆರಾರ ದುಷ್ಕರ್ಮ

ಬೆಂದು ಪೋಗುವದು ಸಾಲದು ದುರಿತವೊ

ಮಂದಮತಿ ಮನ ಸಂಶಯ ವಿಡಿಯದಲೆ

ತಂದೆ ವಿಜಯವಿಟ್ಠಲನ್ನ ನಂಬಲು ಒಬ್ಬ -

ನಿಂದಲವನ ಕುಲ ಸಂದೋದು ಗತಿಗೆ ॥ 4 ॥ 


 ಆದಿತಾಳ 


ಆವಾವ ಮಂತ್ರದಲ್ಲಿ ಆವಾವ ತಂತ್ರದಲ್ಲಿ

ಆವಾವ ಕಥೆಯಲ್ಲಿ ಆವಾವ ಬಗೆಯಲ್ಲಿ

ಪಾವನವೆ ಹರಿನಾಮಾ ಕಾವದು ಭಕ್ತರನೆಂದು

ದೇವಾದಿ ಗಣದೊಳು ಭಾವುಕೆಂದು ಪೇಳುತಿದೆ

ದೇವ ಮುನಿ ಭಕ್ತರಾದಿ ನೋವು ಬಂದ ಸಮಯದಲ್ಲಿ

ಕಾವನಯ್ಯನೆಂದು ಕೂಗಿ ಪಾವನವಾದರು ಕಾಣೊ

ಗುಹ್ವಧರ ವಿಜಯವಿಟ್ಠಲ ದೇವನ ನಾಮವ ನೆನಿಯೆ

ಈವನು ಬಯಸಿದ ಫಲ ತಾ ಒದಗಿ ಬಂದು ನಿನಗೆ ॥ 5 ॥ 


 ಜತೆ 


ನಾಮವೆ ಸಕಲ ಸಾಧನಕ್ಕೆ ಬಲು ಸಾಧನ

ನೀ ಮರಿಯದಿರು ವಿಜಯವಿಟ್ಠಲನ್ನ ॥

***