Showing posts with label ಏಳೇಳು ಶರಧಿಯು ಏಕವಾಗಿದೆ ಕಂಡ್ಯ ಹೇಗೆ ಬಂದೆ ಹೇಳೋ purandara vittala ELELU SHARADHIYU EKAVAAGIDE KANDYA HEGE BANDE HELO. Show all posts
Showing posts with label ಏಳೇಳು ಶರಧಿಯು ಏಕವಾಗಿದೆ ಕಂಡ್ಯ ಹೇಗೆ ಬಂದೆ ಹೇಳೋ purandara vittala ELELU SHARADHIYU EKAVAAGIDE KANDYA HEGE BANDE HELO. Show all posts

Wednesday 1 December 2021

ಏಳೇಳು ಶರಧಿಯು ಏಕವಾಗಿದೆ ಕಂಡ್ಯ ಹೇಗೆ ಬಂದೆ ಹೇಳೋ purandara vittala ELELU SHARADHIYU EKAVAAGIDE KANDYA HEGE BANDE HELO


 ರಾಗ ಸೌರಾಷ್ಟ್ರ    ತಿಶ್ರನಡೆ 
Audio by Vidwan Sumukh Moudgalya

ಶ್ರೀಪುರಂದರದಾಸಾರ್ಯ ವಿರಚಿತ 

 ರಾವಣ ಮತ್ತು ಹನುಮಂತದೇವರ ಸಂಭಾಷಣೀಯ ಕೃತಿ 


ಏಳೇಳು ಶರಧಿಯು ಏಕವಾಗಿದೆ ಕಂಡ್ಯ 
ಹೇಗೆ ಬಂದೆ ಹೇಳೋ ಕೋತಿ॥ಪ॥

ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ॥ಅ.ಪ॥

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹೇಗೆ ಬಿಟ್ಟರು ಹೇಳೋ ಕೋತಿ
ಏಳು ಸಮುದ್ರದ ಮಕರಿ ಮತ್ಸ್ಯ ಕೂಡೆ
ಮಾತಾಡಿ ಬಂದೆನೊ ಭೂತ॥೧॥

ಲಂಕಾದ್ವಾರದಳೊಬ್ಬ ಲಂಕಿಣೀ ಇರುವಳು
ಹೇಗೆ ಬಿಟ್ಟಳು ಹೇಳೋ ಕೋತಿ
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು
ಬಿಂಕದಿಂದಲಿ ಬಂದೆ ಕೋತಿ॥೨॥

ಕೊಂಬೆಕೊಂಬೆಗೆ ಕೋಟಿ ಮಂದಿ ರಾಕ್ಷಸರಿರೆ
ಹೇಗೆ ಬಿಟ್ಟರು ಪೇಳೊ ಕೋತಿ
ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರನ್ನು
ಕೊಂದ್ಹಾಕಿ ಬಂದೆನೊ ಭೂತ॥೩॥

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು
ಯಾಕೆ ಬಂದೆ ಹೇಳೊ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದಾಳೊ
ಅವಳ ನೋಡ ಬಂದೆ ಭೂತ॥೪॥

ದಕ್ಷಿಣಪುರಿ ಲಂಕಾದಾನವರಿಗಲ್ಲದೆ
 ತ್ರಕ್ಷಾದ್ಯರಿಗಳವಲ್ಲ ಕೋತಿ
ಪಕ್ಷಿಧ್ವಜ ರಾಮನ ಅಪ್ಪಣೆಯೆನಗಿಲ್ಲ
ಈಕ್ಷಣ ತಪ್ಪಿಸಿಕೊಂಡೆ ಭೂತ॥೫॥

ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ನೇತಕೋ ಕೋತಿ
ನಾ ತಾಳಿಕೊಂಡಿಹೆನೋ ಈ ಕ್ಷಣದಿ ಲಂಕೆ 
ನಿರ್ಧೂಮವನು ಮಾಳ್ಪೆ ಭೂತ॥೬॥

ನಿಮ್ಮಂಥ ದಾಸರ ನಿಮ್ಮರಸನ ಬಳಿ
ಎಷ್ಟು ಮಂದಿದ್ದಾರೆ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟ್ಯಾನುಕೋಟಿಯೋ ಭೂತ॥೭॥

ಎಲ್ಲಿಂದ ನೀ ಬಂದೆ ಏತಕೆಲ್ಲರ ಕೊಂದೆ
ಯಾವರಸಿನ ಬಂಟ ಕೋತಿ
ಚೆಲ್ವಯೋಧ್ಯಾಪುರದರಸು ಜಾನಕೀಪತಿ
ರಾಮಚಂದ್ರನ ಬಂಟ ಭೂತ॥೮॥

ಸಿರಿರಾಮಚಂದ್ರನು ನಿನ್ನರಸನಾದರೆ
ಆತ ಮುನ್ನ್ಹಾರೇಳೋ ಕೋತಿ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ ಶ್ರೀ
 ಪುರಂದರವಿಠಲನೊ ಭೂತ॥೯॥
****

ರಾಗ ಸೌರಾಷ್ಟ್ರ/ಅಟ್ಟ ತಾಳ

pallavi

ELELu sharadhiyu EkavAgide kaNDya hEgE bande hELo kOti

anupallavi

Elu sharadhiyu enage Elu kAluveyu tULi lankhisi bande bhUta

caraNam 1

Elu samudradoLiruva makari matsyavu hEge biTTaru hELo kOti
Elu samudrada makari matsyada kUde mAtADi bandeno bhUta

caraNam 2

lankA dvAradoLobba lankiNi iruvaLu hEge biTTaLu hELo kOti
lankinIyanu kondu shankeyillade nAnu binkadindali bande bhUta

caraNam 3

kombe kombege kOTi mandi rAkSasarire hege biTTaru pELu hELo koti
kombe kkombege kOTi mandi rAkSarannu kondahAgi bandeno bhUta

caraNam 4

yAvUro elO ninu yAva bhUmiyo nindu yAke bande hELo kOti
yAva vanadoLage jAnaki dEvi iddALe avaLe nODa banda bhUte

caraNam 5

dakSiNapuri lknAavarigallade drAkSAdyarigaLavalla kOti
pakSi dhvaja rAmana appaNeyenagillA I kSaNa tappisi koNDe bhUta

caraNam 6

dUtanAgihe enna kaiyoLu sikkihe kOpavinEtakko kOti
nA tALikoNDihenO I kSaNadi lanke nirdhUmavanu mALpe bhUta

caraNam 7

nimmanda dAsaru nimmarasana baLi eSTu mandiddArO kOyi
nannantha dAsaru ninnantha hEDigaLu kOTyAnu kOTiyo bhUta

caraNam 8

ellinda nI bande etakkellara konde yAvarasina baNTa kOti
celvayO-dhyApuradarasu jAnakIpati rAmacandrana baNTa bhUta

caraNam 9

siri rAmacandranu ninnarasanAdare Ata munnAr hELo kOti
hiraNyakananu sILi prahlAda golida shrI purandara viTTalano bhUta
*** 

ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ಹ್ಯಾಗೆ ಬಂದೆ ಹೇಳೊ ಕೋತಿ || ಪಲ್ಲವಿ ||

ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ || ಅನು ಪಲ್ಲವಿ ||

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹ್ಯಾಗೆ ಬಿಟ್ಟರು ಹೇಳೊ ಕೋತಿ
ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ
ಮಾತಾಡಿ ಬಂದೆನೊ ಭೂತ || ೧ ||

ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು
ಹ್ಯಾಗೆ ಬಿಟ್ಟಳು ಹೇಳೊ ಕೋತಿ
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು
ಬಿಂಕದಿಂದಲಿ ಬಂದೆ ಭೂತ || ೨ ||

ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರಿರೆ
ಹ್ಯಾಗೆ ಬಿಟ್ಟರು ಹೇಳೊ ಕೋತಿ
ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರನ್ನು
ಕೊಂದ್‍ಹಾಕಿ ಬಂದೆನೊ ಭೂತ || ೩ ||

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು
ಯಾಕೆ ಬಂದೆ ಹೇಳೊ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದಳೊ
ಅವಳ ನೋಡಬಂದೆ ಭೂತ || ೪ ||

ದಕ್ಷಿಣಪುರಿ ಲಂಕಾ ದಾನವರಿಗಲ್ಲದೆ
ತ್ರಕ್ಷಾದ್ಯರಿಗಳವಲ್ಲ ಕೋತಿ
ಪಕ್ಷಿಧ್ವಜ ರಾಮನ ಅಪ್ಪಣೆ ಎನಗಿಲ್ಲ
ಈ ಕ್ಷಣದಿ ತಪ್ಪಿಸಿಕೊಂಡೆ ಭೂತ || ೫ ||

ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ಯಾತಕೊ ಕೋತಿ
ನಾ ತಾಳಿಕೊಂಡಿಹೆನೊ ಈ ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ || ೬ ||

ನಿಮ್ಮಂಥ ದಾಸರು ನಿಮ್ಮರಸನ ಬಳಿ
ಎಷ್ಟುಮಂದಿಯಿದ್ದಾರೊ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟ್ಯಾನುಕೋಟಿಯೊ ಭೂತ || ೭ ||

ಎಲ್ಲಿಂದ ನೀ ಬಂದೆ ಏತಕೆಲ್ಲರ ಕೊಂದೆ
ಯಾವರಸಿನ ಭಂಟ ಕೋತಿ
ಚೆಲ್ವಯೋಧ್ಯಾಪುರದರಸು ಜಾನಕಿಪತಿ
ರಾಮಚಂದ್ರನ ಭಂಟ ಭೂತ || ೮ ||

ಸಿರಿ ರಾಮಚಂದ್ರನು ನಿನ್ನರಸನಾದರೆ
ಆತ ಮುನ್ನಾರು ಹೇಳೊ ಕೋತಿ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ
ಶ್ರೀ ಪುರಂದರವಿಠಲನೊ ಭೂತ || ೯ ||
*********