Wednesday, 1 December 2021

ಏಳೇಳು ಶರಧಿಯು ಏಕವಾಗಿದೆ ಕಂಡ್ಯ ಹೇಗೆ ಬಂದೆ ಹೇಳೋ purandara vittala ELELU SHARADHIYU EKAVAAGIDE KANDYA HEGE BANDE HELO


 ರಾಗ ಸೌರಾಷ್ಟ್ರ    ತಿಶ್ರನಡೆ 
Audio by Vidwan Sumukh Moudgalya

RESTART MOBILE IF AUDIO IS NOT PLAYING  CLICK-> HOME

or just scroll down for other devaranama 

ಶ್ರೀಪುರಂದರದಾಸಾರ್ಯ ವಿರಚಿತ 

 ರಾವಣ ಮತ್ತು ಹನುಮಂತದೇವರ ಸಂಭಾಷಣೀಯ ಕೃತಿ 


ಏಳೇಳು ಶರಧಿಯು ಏಕವಾಗಿದೆ ಕಂಡ್ಯ 
ಹೇಗೆ ಬಂದೆ ಹೇಳೋ ಕೋತಿ॥ಪ॥

ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ॥ಅ.ಪ॥

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹೇಗೆ ಬಿಟ್ಟರು ಹೇಳೋ ಕೋತಿ
ಏಳು ಸಮುದ್ರದ ಮಕರಿ ಮತ್ಸ್ಯ ಕೂಡೆ
ಮಾತಾಡಿ ಬಂದೆನೊ ಭೂತ॥೧॥

ಲಂಕಾದ್ವಾರದಳೊಬ್ಬ ಲಂಕಿಣೀ ಇರುವಳು
ಹೇಗೆ ಬಿಟ್ಟಳು ಹೇಳೋ ಕೋತಿ
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು
ಬಿಂಕದಿಂದಲಿ ಬಂದೆ ಕೋತಿ॥೨॥

ಕೊಂಬೆಕೊಂಬೆಗೆ ಕೋಟಿ ಮಂದಿ ರಾಕ್ಷಸರಿರೆ
ಹೇಗೆ ಬಿಟ್ಟರು ಪೇಳೊ ಕೋತಿ
ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರನ್ನು
ಕೊಂದ್ಹಾಕಿ ಬಂದೆನೊ ಭೂತ॥೩॥

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು
ಯಾಕೆ ಬಂದೆ ಹೇಳೊ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದಾಳೊ
ಅವಳ ನೋಡ ಬಂದೆ ಭೂತ॥೪॥

ದಕ್ಷಿಣಪುರಿ ಲಂಕಾದಾನವರಿಗಲ್ಲದೆ
 ತ್ರಕ್ಷಾದ್ಯರಿಗಳವಲ್ಲ ಕೋತಿ
ಪಕ್ಷಿಧ್ವಜ ರಾಮನ ಅಪ್ಪಣೆಯೆನಗಿಲ್ಲ
ಈಕ್ಷಣ ತಪ್ಪಿಸಿಕೊಂಡೆ ಭೂತ॥೫॥

ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ನೇತಕೋ ಕೋತಿ
ನಾ ತಾಳಿಕೊಂಡಿಹೆನೋ ಈ ಕ್ಷಣದಿ ಲಂಕೆ 
ನಿರ್ಧೂಮವನು ಮಾಳ್ಪೆ ಭೂತ॥೬॥

ನಿಮ್ಮಂಥ ದಾಸರ ನಿಮ್ಮರಸನ ಬಳಿ
ಎಷ್ಟು ಮಂದಿದ್ದಾರೆ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟ್ಯಾನುಕೋಟಿಯೋ ಭೂತ॥೭॥

ಎಲ್ಲಿಂದ ನೀ ಬಂದೆ ಏತಕೆಲ್ಲರ ಕೊಂದೆ
ಯಾವರಸಿನ ಬಂಟ ಕೋತಿ
ಚೆಲ್ವಯೋಧ್ಯಾಪುರದರಸು ಜಾನಕೀಪತಿ
ರಾಮಚಂದ್ರನ ಬಂಟ ಭೂತ॥೮॥

ಸಿರಿರಾಮಚಂದ್ರನು ನಿನ್ನರಸನಾದರೆ
ಆತ ಮುನ್ನ್ಹಾರೇಳೋ ಕೋತಿ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ ಶ್ರೀ
 ಪುರಂದರವಿಠಲನೊ ಭೂತ॥೯॥
***

Pallavi
Ēḷēḷu śaradhiyu ēkavāgide kaṇḍya
Hēge bande hēḷō kōti ||

Anupallavi
Ēḷu śaradhiyu enage ēḷu kāluveyu
Tūḷi laṅghisi bande bhūta ||

Stanza 1
Ēḷu samudradoḷiruva makari matsya
Hēge biṭṭaru hēḷō kōti
Ēḷu samudrada makari matsya kūḍe
Mātāḍi bandeno bhūta || 1 ||

Stanza 2
Laṅkādvāradaḷobba laṅkiṇī iruvaḷu
Hēge biṭṭaḷu hēḷō kōti
Laṅkiṇiyanu kondu śaṅkeyillade nānu
Biṅkadindali bande kōti || 2 ||

Stanza 3
Kombe-kombeye kōṭi mandi rākṣasarire
Hēge biṭṭaru pēḷō kōti
Kombe kombeye kōṭi mandi rākṣasarannu
Kondhāki bandeno bhūta || 3 ||

Stanza 4
Yāvūro elo nīnu yāva bhūmiyo nindu
Yāke bande hēḷo kōti
Yāva vanadoḷage jānakidēvi iddāḷo
Avaḷa nōḍa bande bhūta || 4 ||

Stanza 5
Dakṣiṇapuri laṅkādānavarigallade
Trakṣādyarigaḷavalla kōti
Pakṣidhvaja rāmana appaṇeyenagilla
Īkṣaṇa tappisikoṇḍe bhūta || 5 ||

Stanza 6
Dūtanāgihe enna kaiyoḷu sikkihe
Kōpavinnētako kōti
Nā tāḷikoṇḍihenō ī kṣaṇadi laṅke
Nirdhūmavanu māḷpe bhūta || 6 ||

Stanza 7
Nimmantha dāsara nimmarasana baḷi
Eṣṭu mandiddāre kōti
Nannantha dāsaru ninnantha hēḍigaḷu
Kōṭyānukōṭiyō bhūta || 7 ||

Stanza 8
Ellinda nī bande ētakellara konde
Yāvarasina baṇṭa kōti
Celvayōdhyāpuradarasu jānakīpati
Rāmacandrana baṇṭa bhūta || 8 ||

Stanza 9
Sirirāmacandranu ninnarasanādare
Āta munnhārēḷō kōti
Hiraṇyakananu sīḷi prahlādagonida śrī
Purandaraviṭhalano bhūta || 9 ||
***

Pronunciation Guide
Long Vowels: Letters with a bar (ā, ē, ī, ō, ū) should be held for two beats (e.g., kōti sounds like "ko-tee").
Retroflex Sounds: Letters with a dot below (ṭ, ḍ, ṇ, ḷ, ṣ) require you to curl the tongue back to touch the roof of the mouth.
Aspiration: Consonants followed by 'h' (like bh, dh, kh) should be pronounced with a soft puff of air.
The Nasal 'ṅ': The letter ṅ (as in laṅkā) is a nasal sound like the "ng" in "long."
Special Sibilants: Ś is a soft "sh" (as in śaradhi), and ṣ is a hard "sh" (as in rākṣasa).
***


ಶ್ರೀ ಪುರಂದರದಾಸರು ವಿರಚಿಸಿದ ಈ ಕೃತಿಯು ರಾಮಾಯಣದ ಸುಂದರಕಾಂಡದ ಒಂದು ಪ್ರಸಂಗವನ್ನು ಆಧರಿಸಿದೆ. ಇಲ್ಲಿ ರಾವಣ ಮತ್ತು ಹನುಮಂತನ ನಡುವೆ ನಡೆಯುವ ಚಕಮಕಿ ಅಥವಾ ಸಂಭಾಷಣೆಯನ್ನು ದಾಸರು ಅತ್ಯಂತ ನಾಟಕೀಯವಾಗಿ ಮತ್ತು ರೋಚಕವಾಗಿ ಚಿತ್ರಿಸಿದ್ದಾರೆ.

ಸಾರಾಂಶ (Summary)
ಈ ಕೀರ್ತನೆಯಲ್ಲಿ ರಾವಣನು ಹನುಮಂತನನ್ನು 'ಕೋತಿ' ಎಂದು ಹೀಯಾಳಿಸುತ್ತಾ ಪ್ರಶ್ನೆಗಳನ್ನು ಕೇಳುತ್ತಾನೆ, ಅದಕ್ಕೆ ಪ್ರತಿಯಾಗಿ ಹನುಮಂತನು ರಾವಣನನ್ನು 'ಭೂತ' (ಅಸುರ ಅಥವಾ ಅಜ್ಞಾನಿ) ಎಂದು ಕರೆಯುತ್ತಾ ಅತ್ಯಂತ ಧೈರ್ಯ ಮತ್ತು ತರ್ಕಬದ್ಧವಾಗಿ ಉತ್ತರ ನೀಡುತ್ತಾನೆ. ಸಮುದ್ರ ಲಂಘನ, ಲಂಕಿಣಿಯ ಸಂಹಾರ, ಅಶೋಕವನದ ನಾಶ ಮತ್ತು ಶ್ರೀರಾಮನ ಮಹಿಮೆಯನ್ನು ಹನುಮಂತನು ಇಲ್ಲಿ ಸಾರಿ ಹೇಳಿದ್ದಾನೆ. ಅಂತಿಮವಾಗಿ ತನ್ನ ಆರಾಧ್ಯ ದೈವ ಶ್ರೀರಾಮನೇ ಪುರಂದರವಿಠಲ ಎಂದು ದಾಸರು ಇಲ್ಲಿ ಸ್ಮರಿಸಿದ್ದಾರೆ.

 ಭಾವಾರ್ಥ (Kannada Meaning)
ಪಲ್ಲವಿ - ಅನುಪಲ್ಲವಿ:

ರಾವಣ: ಏಳೇಳು ಶರಧಿಯು ಏಕವಾಗಿದೆ ಕಂಡ್ಯ ಹೇಗೆ ಬಂದೆ ಹೇಳೋ ಕೋತಿ?
ಹನುಮಂತ: ಏಳು ಶರಧಿಯು ಎನಗೆ ಏಳು ಕಾಲುವೆಯು ತೂಳಿ ಲಂಘಿಸಿ ಬಂದೆ ಭೂತ.

ಭಾವಾರ್ಥ: "ಏಳು ಸಮುದ್ರಗಳು ಒಂದಾಗಿರುವಾಗ ಅವನ್ನು ದಾಟಿ ನೀನು ಇಲ್ಲಿಗೆ ಹೇಗೆ ಬಂದೆ?" ಎಂದು ರಾವಣನು ಕೇಳಿದಾಗ, ಹನುಮಂತನು "ಆ ಏಳು ಸಮುದ್ರಗಳು ನನಗೆ ಕೇವಲ ಏಳು ಸಣ್ಣ ಕಾಲುವೆಗಳಿದ್ದಂತೆ, ಅವುಗಳನ್ನು ಸುಲಭವಾಗಿ ಹಾರಿ ಬಂದಿದ್ದೇನೆ ಎಲೈ ಭೂತನೇ" ಎಂದು ಉತ್ತರಿಸುತ್ತಾನೆ.

ಪದ್ಯ ೧:
ಭಾವಾರ್ಥ: ಸಮುದ್ರದಲ್ಲಿರುವ ಮೊಸಳೆ, ಮೀನುಗಳು ನಿನ್ನನ್ನು ಹೇಗೆ ಬಿಟ್ಟವು ಎಂದು ರಾವಣ ಕೇಳಲು, "ಆ ಮಕರಿ ಮತ್ಸ್ಯಗಳ ಜೊತೆ ಮಾತನಾಡುತ್ತಾ (ಅವುಗಳನ್ನು ಗೆಲ್ಲುತ್ತಾ) ಬಂದಿದ್ದೇನೆ" ಎಂದು ಹನುಮಂತ ಹೇಳುತ್ತಾನೆ.

ಪದ್ಯ ೨:
ಭಾವಾರ್ಥ: ಲಂಕೆಯ ದ್ವಾರದಲ್ಲಿರುವ ಲಂಕಿಣಿಯು ನಿನ್ನನ್ನು ಹೇಗೆ ಒಳಗೆ ಬಿಟ್ಟಳು ಎಂಬ ಪ್ರಶ್ನೆಗೆ, "ಅವಳನ್ನು ಸಂಹರಿಸಿ, ಯಾವುದೇ ಅನುಮಾನವಿಲ್ಲದೆ ಹೆಮ್ಮೆಯಿಂದ ಒಳಗೆ ಬಂದಿದ್ದೇನೆ" ಎಂದು ಹನುಮಂತ ಗುಡುಗುತ್ತಾನೆ.

ಪದ್ಯ ೩:
ಭಾವಾರ್ಥ: ಅಶೋಕವನದ ಪ್ರತಿ ಕೊಂಬೆ ಕೊಂಬೆಯಲ್ಲಿ ಕೋಟಿ ಮಂದಿ ರಾಕ್ಷಸರಿದ್ದರೂ ಅವರು ನಿನಗೆ ಏನು ಮಾಡಲಿಲ್ಲವೇ ಎಂದು ರಾವಣ ಕೇಳಿದಾಗ, "ಅವರೆಲ್ಲರನ್ನೂ ಕೊಂದು ಹಾಕಿ ಬಂದಿದ್ದೇನೆ" ಎಂದು ಹನುಮಂತ ಉತ್ತರಿಸುತ್ತಾನೆ.

ಪದ್ಯ ೪:
ಭಾವಾರ್ಥ: "ನಿನ್ನ ಊರು ಯಾವುದು? ಯಾವ ದೇಶದವನು ನೀನು? ಇಲ್ಲಿಗೆ ಏಕೆ ಬಂದೆ?" ಎಂದು ರಾವಣ ಪ್ರಶ್ನಿಸಿದಾಗ, "ಜಾನಕೀದೇವಿ (ಸೀತೆ) ಎಲ್ಲಿದ್ದಾಳೋ ಅವಳನ್ನು ನೋಡಲು ಬಂದಿದ್ದೇನೆ" ಎಂದು ಹನುಮಂತ ತನ್ನ ಉದ್ದೇಶವನ್ನು ತಿಳಿಸುತ್ತಾನೆ.

ಪದ್ಯ ೫:
ಭಾವಾರ್ಥ: "ಈ ದಕ್ಷಿಣದ ಲಂಕಾಪುರಿ ದಾನವರಿಗೆ ಮೀಸಲು, ಇಲ್ಲಿಗೆ ದೇವತೆಗಳೂ ಬರಲು ಸಾಧ್ಯವಿಲ್ಲ" ಎಂದು ರಾವಣ ಎಚ್ಚರಿಸಿದಾಗ, ಹನುಮಂತನು "ಪಕ್ಷಿಧ್ವಜ ರಾಮನ ಅಪ್ಪಣೆ ಇಲ್ಲದೆ ಈಗಲೇ ನಿನ್ನನ್ನು ಏನೂ ಮಾಡುತ್ತಿಲ್ಲ, ಈಗ ನೀನು ತಪ್ಪಿಸಿಕೊಂಡಿದ್ದೀಯ ಅಷ್ಟೇ" ಎನ್ನುತ್ತಾನೆ.

ಪದ್ಯ ೬:
ಭಾವಾರ್ಥ: "ನೀನು ದೂತನಾಗಿ ನನ್ನ ಕೈಗೆ ಸಿಕ್ಕಿಬಿದ್ದಿದ್ದೀಯೆ, ನಿನಗೆ ಈ ಕೋಪ ಏಕೆ?" ಎಂದು ರಾವಣ ಗೇಲಿ ಮಾಡಿದಾಗ, ಹನುಮಂತನು "ನಾನು ಶಾಂತನಾಗಿ ಕಾಯುತ್ತಿದ್ದೇನೆ, ಮನಸ್ಸು ಮಾಡಿದರೆ ಈ ಕ್ಷಣವೇ ಲಂಕೆಯನ್ನು ಸುಟ್ಟು ನಿರ್ಧೂಮ ಮಾಡುತ್ತೇನೆ" ಎಂದು ಎಚ್ಚರಿಸುತ್ತಾನೆ.

ಪದ್ಯ ೭:
ಭಾವಾರ್ಥ: "ನಿನ್ನ ರಾಜನ ಬಳಿ ನಿನ್ನಂತ ದಾಸರು ಎಷ್ಟು ಮಂದಿ ಇದ್ದಾರೆ?" ಎಂದು ರಾವಣ ಕೇಳಲು, ಹನುಮಂತನು "ನನ್ನಂತಹ ದಾಸರು ಮತ್ತು ನಿನ್ನಂತಹ ಹೇಡಿಗಳು ನನ್ನ ರಘುರಾಮನ ಬಳಿ ಕೋಟ್ಯಾನುಕೋಟಿ ಇದ್ದಾರೆ" ಎಂದು ತಿರುಗೇಟು ನೀಡುತ್ತಾನೆ.

ಪದ್ಯ ೮:
ಭಾವಾರ್ಥ: "ನೀನು ಯಾರ ಬಂಟ?" ಎಂದು ರಾವಣ ಕೇಳಿದಾಗ, ಹನುಮಂತನು ಹೆಮ್ಮೆಯಿಂದ "ಅಯೋಧ್ಯಾಪುರದ ಅರಸ, ಜಾನಕೀಪತಿ ಶ್ರೀರಾಮಚಂದ್ರನ ಬಂಟ ನಾನು" ಎಂದು ಸಾರುತ್ತಾನೆ.

ಪದ್ಯ ೯:
ಭಾವಾರ್ಥ: "ಆ ಶ್ರೀರಾಮಚಂದ್ರನು ಯಾರು?" ಎಂದು ರಾವಣ ಕಡೆಗಣಿಸಿ ಕೇಳಿದಾಗ, ಹನುಮಂತನು "ಅವನು ಹಿರಣ್ಯಕಶಿಪುವನ್ನು ಸೀಳಿ ಪ್ರಹ್ಲಾದನಿಗೆ ಒಲಿದ ಶ್ರೀ ಪುರಂದರವಿಠಲನೇ ಆಗಿದ್ದಾನೆ" ಎಂದು ಭಗವಂತನ ಸರ್ವೋಚ್ಚತೆಯನ್ನು ತಿಳಿಸುತ್ತಾನೆ.
***

This interactive composition by Sri Purandara Dasa is based on an episode from the Sundara Kanda of the Ramayana. It dramatically captures the heated dialogue between Ravana and Hanuman in the court of Lanka.

Summary
In this kirtana, Ravana mockingly addresses Hanuman as a "monkey" (Koti), questioning his audacity to enter Lanka. Hanuman, undeterred, retorts by calling Ravana a "ghost" or "demon" (Bhuta), symbolizing Ravana's ignorance. Hanuman describes his leap across the ocean, the slaying of the guardian Lankini, the destruction of the Ashoka grove, and the unparalleled might of Sri Rama. The dialogue concludes with Hanuman identifying Sri Rama as the supreme Lord Purandara Vitthala.

Stanza-wise Meaning
Chorus (Pallavi & Anupallavi):

Ravana: You saw how the seven oceans have merged into one; tell me, O monkey, how did you get here?
Hanuman: To me, the seven oceans are like seven small irrigation channels; I leaped over them with ease, O ghost.

Stanza 1:
Meaning: Ravana asks how the crocodiles and giant fish of the seven seas allowed him to pass. Hanuman replies that he spoke with them (overpowered them) and made his way through, O ghost.

Stanza 2:
Meaning: Ravana asks how Lankini, the guardian of the gates, let him in. Hanuman declares that he killed Lankini without hesitation and entered with great pride.

Stanza 3:
Meaning: Ravana questions how he survived when there were millions of demons on every branch of the trees. Hanuman retorts that he slaughtered millions of those demons on every branch before coming here.

Stanza 4:
Meaning: Ravana asks, "Which is your town? To which land do you belong? Why did you come here?" Hanuman answers that he came specifically to find Janaki Devi (Sita) in whichever garden she was kept.

Stanza 5:
Meaning: Ravana warns that the southern city of Lanka is only for demons and is inaccessible even to the gods. Hanuman replies that if it weren't for the orders of Sri Rama (the one with the bird-eagle flag), he would have finished Ravana right then, but for now, Ravana has narrowly escaped.

Stanza 6:
Meaning: Ravana mocks, "You are just a messenger caught in my hands; why this anger?" Hanuman warns that he is only restraining himself; otherwise, he could turn all of Lanka into smoke and ash in an instant.

Stanza 7:
Meaning: Ravana asks how many servants like Hanuman are with his King. Hanuman strikes back, saying that servants like him—and cowards like Ravana—exist by the millions in Sri Rama's kingdom.

Stanza 8:
Meaning: When asked whose servant he is, Hanuman proudly declares that he is the servant of Sri Ramachandra, the Lord of Ayodhya and the husband of Janaki.

Stanza 9:
Meaning: Ravana dismissively asks who this Ramachandra is. Hanuman concludes by stating that He is the same Lord Purandara Vitthala who tore apart the demon Hiranyakasipu to protect his devotee Prahlada.
***


ರಾಗ ಸೌರಾಷ್ಟ್ರ/ಅಟ್ಟ ತಾಳ

pallavi

ELELu sharadhiyu EkavAgide kaNDya hEgE bande hELo kOti

anupallavi

Elu sharadhiyu enage Elu kAluveyu tULi lankhisi bande bhUta

caraNam 1

Elu samudradoLiruva makari matsyavu hEge biTTaru hELo kOti
Elu samudrada makari matsyada kUde mAtADi bandeno bhUta

caraNam 2

lankA dvAradoLobba lankiNi iruvaLu hEge biTTaLu hELo kOti
lankinIyanu kondu shankeyillade nAnu binkadindali bande bhUta

caraNam 3

kombe kombege kOTi mandi rAkSasarire hege biTTaru pELu hELo koti
kombe kkombege kOTi mandi rAkSarannu kondahAgi bandeno bhUta

caraNam 4

yAvUro elO ninu yAva bhUmiyo nindu yAke bande hELo kOti
yAva vanadoLage jAnaki dEvi iddALe avaLe nODa banda bhUte

caraNam 5

dakSiNapuri lknAavarigallade drAkSAdyarigaLavalla kOti
pakSi dhvaja rAmana appaNeyenagillA I kSaNa tappisi koNDe bhUta

caraNam 6

dUtanAgihe enna kaiyoLu sikkihe kOpavinEtakko kOti
nA tALikoNDihenO I kSaNadi lanke nirdhUmavanu mALpe bhUta

caraNam 7

nimmanda dAsaru nimmarasana baLi eSTu mandiddArO kOyi
nannantha dAsaru ninnantha hEDigaLu kOTyAnu kOTiyo bhUta

caraNam 8

ellinda nI bande etakkellara konde yAvarasina baNTa kOti
celvayO-dhyApuradarasu jAnakIpati rAmacandrana baNTa bhUta

caraNam 9

siri rAmacandranu ninnarasanAdare Ata munnAr hELo kOti
hiraNyakananu sILi prahlAda golida shrI purandara viTTalano bhUta
*** 

ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ಹ್ಯಾಗೆ ಬಂದೆ ಹೇಳೊ ಕೋತಿ || ಪಲ್ಲವಿ ||

ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ || ಅನು ಪಲ್ಲವಿ ||

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹ್ಯಾಗೆ ಬಿಟ್ಟರು ಹೇಳೊ ಕೋತಿ
ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ
ಮಾತಾಡಿ ಬಂದೆನೊ ಭೂತ || ೧ ||

ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು
ಹ್ಯಾಗೆ ಬಿಟ್ಟಳು ಹೇಳೊ ಕೋತಿ
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು
ಬಿಂಕದಿಂದಲಿ ಬಂದೆ ಭೂತ || ೨ ||

ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರಿರೆ
ಹ್ಯಾಗೆ ಬಿಟ್ಟರು ಹೇಳೊ ಕೋತಿ
ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರನ್ನು
ಕೊಂದ್‍ಹಾಕಿ ಬಂದೆನೊ ಭೂತ || ೩ ||

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು
ಯಾಕೆ ಬಂದೆ ಹೇಳೊ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದಳೊ
ಅವಳ ನೋಡಬಂದೆ ಭೂತ || ೪ ||

ದಕ್ಷಿಣಪುರಿ ಲಂಕಾ ದಾನವರಿಗಲ್ಲದೆ
ತ್ರಕ್ಷಾದ್ಯರಿಗಳವಲ್ಲ ಕೋತಿ
ಪಕ್ಷಿಧ್ವಜ ರಾಮನ ಅಪ್ಪಣೆ ಎನಗಿಲ್ಲ
ಈ ಕ್ಷಣದಿ ತಪ್ಪಿಸಿಕೊಂಡೆ ಭೂತ || ೫ ||

ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ಯಾತಕೊ ಕೋತಿ
ನಾ ತಾಳಿಕೊಂಡಿಹೆನೊ ಈ ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ || ೬ ||

ನಿಮ್ಮಂಥ ದಾಸರು ನಿಮ್ಮರಸನ ಬಳಿ
ಎಷ್ಟುಮಂದಿಯಿದ್ದಾರೊ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟ್ಯಾನುಕೋಟಿಯೊ ಭೂತ || ೭ ||

ಎಲ್ಲಿಂದ ನೀ ಬಂದೆ ಏತಕೆಲ್ಲರ ಕೊಂದೆ
ಯಾವರಸಿನ ಭಂಟ ಕೋತಿ
ಚೆಲ್ವಯೋಧ್ಯಾಪುರದರಸು ಜಾನಕಿಪತಿ
ರಾಮಚಂದ್ರನ ಭಂಟ ಭೂತ || ೮ ||

ಸಿರಿ ರಾಮಚಂದ್ರನು ನಿನ್ನರಸನಾದರೆ
ಆತ ಮುನ್ನಾರು ಹೇಳೊ ಕೋತಿ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ
ಶ್ರೀ ಪುರಂದರವಿಠಲನೊ ಭೂತ || ೯ ||
*********

No comments:

Post a Comment