Showing posts with label ನಾಮ ಧರಿಸಿಹೆಯಾ ಮೂರು ನಾಮ srinivasa1. Show all posts
Showing posts with label ನಾಮ ಧರಿಸಿಹೆಯಾ ಮೂರು ನಾಮ srinivasa1. Show all posts

Wednesday, 17 February 2021

ನಾಮ ಧರಿಸಿಹೆಯಾ ಮೂರು ನಾಮ ankita srinivasa1

ನೆಲಮಂಗಲದ ಶ್ರೀ ಸರಸ್ವತಿಬಾಯಿಯವರ ರಚನೆ 

ರಾಗ - : ತಾಳ -


ನಾಮ ಧರಿಸಿಹೆಯಾ ಮೂರು

ನಾಮ ಧರಿಸಿಹೆಯಾ ಶ್ರೀನಿವಾಸ ll ಪ ll


ನೀನೆ ಕರ್ತನೆಂದಾ ಮನುಜರಿಗೆಲ್ಲಾ

ನಾನೆ ಸಲಹುವೆನೆಂಬ ಬಿರುದಿನ ಮೂರು ll ಅ ಪ ll 


ಅಂಬೆಯ ವಕ್ಷದಿ ಇಂಬಿನೊಳಿಟ್ಟು 

ಸಂಭ್ರಮದೊಳು ಕುಡಿ ನೋಟದಿಂದಾ 

ಅಂಬುಜಾಕ್ಷ ಬಡವರ ಧನ ಸೆಳೆಯುತ್ತವರ

ಬೆಂಬಿಡದೆ ಕಾವೆನೆಂಬ ಬಿರುದ ll ೧ ll


ಸಿರಿ ಅರಸಾನೆಂಬೊ ಬಿರುದು ಥರವೇ ನಿನಗೆ

ಹೊರವೊಳಗಿದ್ದು ಜನವ ನಂಬಿಸಿ

ಥರಥರದಾಭರಣ ಸುಲಿಗೆಯಗೊಂಬ

ತಿರುಪತಿ ತಿರುಮಲರಾಯ ದೊರೆ ll ೨ ll


ನಿನ್ನ ಧ್ಯಾನ ಮಾಳ್ಪ ಭಕ್ತರು ಬಲೆಗೆ ಸಿಕ್ಕುವರೇನೊ

ನಿನ್ನ ಪಾದಧ್ಯಾನವನ್ನೆ ಬಯಸುತ್ತ 

ನಿನ್ನನೆ ಭಕ್ತಿಪಾಶದಿ ಕಟ್ಟಿ ll ೩ ll


ಚಾರು ಚರಿತನೆ ಚಾರು ಮುಖನೆ ವಂದ್ಯ ನಿನ್ನ

ಹಾರೈಸುವ ಭಕ್ತರ ವೃಂದ

ಸಾರಿ ಬಂದು ನಿನ್ನ ನಾಮದ ಸ್ಮರಣೆಯ

ಹಾರ ಹಾಕಿ ಮನ ಸೂರೆ ಕೊಟ್ಟ ll ೪ ll


ಭಕ್ತರ ಕಟ್ಟಿಗೆ ಸಿಕ್ಕಬೇಕಲ್ಲದೆ 

ಭಕ್ತವತ್ಸಲನೆಂಬೊ ಬಿರುದಿಟ್ಟ ಕಾರಣವೇಕೊ 

ಯುಕ್ತಿಲಿ ನಿನ್ನ ನೆನೆದು ಸಿಕ್ಕಿಸೀ ಭವ 

ಕಷ್ಟ ಕಳೆವರೊ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಷ್ಟಾ ll ೫ ll

***