Showing posts with label ಶ್ರೀವಿಷ್ಣು ಮಹಿಮೆ ಸಂಕೀರ್ತನೆ prasannavenkata SRI VISHNU MAHIME SANKEERTANE. Show all posts
Showing posts with label ಶ್ರೀವಿಷ್ಣು ಮಹಿಮೆ ಸಂಕೀರ್ತನೆ prasannavenkata SRI VISHNU MAHIME SANKEERTANE. Show all posts

Monday, 5 April 2021

ಶ್ರೀವಿಷ್ಣು ಮಹಿಮೆ ಸಂಕೀರ್ತನೆ ankita prasannavenkata SRI VISHNU MAHIME SANKEERTANE

 

ಶ್ರೀ ಪ್ರಸನ್ನವೆಂಕಟದಾಸರ ನವ ವಿಧ ಭಕ್ತಿ ಕೀರ್ತನೆಗಳು 


 ೨ . " ಕೀರ್ತನಾ ಭಕ್ತಿ " 


 ರಾಗ : ಖಮಾಚ್     ಆದಿತಾಳ & ತಿಶ್ರನಡೆ

ಶ್ರೀ ವಿಷ್ಣು ಮಹಿಮೆ ಸಂಕೀರ್ತನೆ

ಸರ್ವದಾ ವಿಸ್ಮೃತಿಯ ನೀಗಿ ಮಾಡಿ ವೈಷ್ಣವರು ॥ಪ॥


ಪುಣ್ಯಮಾರ್ಗವನರಿಯದ ಮೂಡರಿಗೆ

ಉನ್ನತ ಕುಟಿಲ ಪಾಮರ ಮನುಜರಿಗೆ

ಘನ್ನ ಸಾಧನವಿದೆ ಮತ್ತೊಂದು ಕಾಣೆ

ಪುಣ್ಯಶ್ಲೋಕನ ವಾರ್ತೆಕೀರ್ತನೆಯ ಪಠನೆ ॥೧॥


ಜನ್ಮ ಮರಣವಿಲ್ಲ ಅವ ಜೀವನ್ಮುಕ್ತಾ

ಧನ್ಯ ವಿಶುದ್ಧಾತ್ಮ ನಿಜಹರಿಭಕ್ತಾ

ಚಿನ್ಮಯಾಚ್ಯುತನ ಚಾರಿತ್ರ್ಯ ವಿಸ್ತರವ

ವರ್ಣವರ್ಣಂಗಳಿಂದ ಪಾಡಿ ನಲಿಯುವ ॥೨॥


ಧರ್ಮಸುಮಾರ್ಗವರ್ಜಿತ ಕಲಿಯುಗದಿ

ನಿರ್ಮಲ ಮನ ಹೊಂದಲೀಸದ ಭವದಿ

ಧರ್ಮಪ್ರಭು ಶ್ರೀಹರಿಗುಣ ಕೀರ್ತನೆ

ಉಮ್ಮಯದಲಿ ಮಾಡುವದು ಹರಿ ಪ್ರಾರ್ಥನೆ  ॥೩॥


ನಿರುತ ವಿಶುದ್ಧಾಂತರಾತ್ಮ ಶ್ರೀಹರಿಗೆ

ಗುರುಸುಖತೀರ್ಥರ ತೀರ್ಥಜೀವರಿಗೆ

ಮರಳೊಂದು ಸಾಧನವೇಕಿನ್ನವರಿಗೆ

ಹರಿಹರಿಹರಿಯೆಂದು ಕೂಗಿ ಬಾಳ್ವರಿಗೆ ॥೪॥


ಶ್ರೀಮದ್ಗರುಡಧ್ವಜ ನಾರಾಯಣಾಪವರ್ಗಾ

ರಾಮರಾಮರಾಮರಾಮರಾಮನೆಂಬ

ನಾಮಪಾಠಕರಿಗೆ ಸ್ವಪ್ನಾದಿ ವರ್ಜಾ

ಯಮ ಮಾರ್ಗ ಆಘೋರ ನರಕಾ ॥೫॥


ಹೃದಯದಿ ಹರಿರೂಪ ಮುಖದಿ ಸದ್ಗಾನಾ

ಉದರದಿ ನೈವೇದ್ಯ ಶಿರದಿ ನಿರ್ಮಾಲ್ಯ

ಸುದುರಶನ ಶಂಖಾಂಕಿತ ಭುಜದವರಿಗೆ

ಪದುಮನಾಭನ ನಾಮಕೀರ್ತನೆ ಕೈವಲ್ಯ ॥೬॥


ಶತಕೋಟಿ ರಾಮಾಯಣಕೀರ್ತನೆ ಹನುಮಂತ

ಯತಿ ಶುಕ್ರಾಚಾರ್ಯ ಭಾಗವತ ಶಾಸ್ತ್ರಾ

ಸತತ ನಾರದ ದೇವ ಮುನಿತತಿ ನೃಪರೆಲ್ಲ

ರತಿಪತಿಪಿತನ ಪೊಗಳಿ ಮುಕ್ತಾಗಿಹರು ॥೭॥


ಕಲಿಕಾಲದಲಿ ಕೇಶವಗೆ ಪ್ರಿಯಕೀರ್ತನೆ

ಲಲಿತಸಾಧನವೆನಿಪುದೀ ಕೀರ್ತನೆ

ಬಲುಶ್ರುತಿಮಥಿತಾರ್ಥ ಸಾರವೇ ಕೀರ್ತನೆ

ಹುಲುಮಾನವರಿಗೆ ದೂರವು ಹರಿಕೀರ್ತನೆ ॥೮॥


ಭವರೋಗಭೇಷಜ ಹರಿನಾಮ ಕೀರ್ತನೆ

ಭವವಾರ್ಧಿಪೋತ ಭವಟಾಗ್ನಿ

ಭವವಿಧಿಕೀರ್ತಪದ ಪ್ರಸನ್ವೆಂಕಟ 

ಭವನನ ದಾಸರು ಸವಿದುಂಬಾಮೃತವು ॥೯॥

*******