Showing posts with label ಸಫಲವಾಯಿತು ಜನುಮ ಸಫಲವಾಯಿತು ಸಫಲವಾಯಿತೆನ್ನ ಜನುಮ ವಿಭು vaikunta vittala. Show all posts
Showing posts with label ಸಫಲವಾಯಿತು ಜನುಮ ಸಫಲವಾಯಿತು ಸಫಲವಾಯಿತೆನ್ನ ಜನುಮ ವಿಭು vaikunta vittala. Show all posts

Sunday, 1 August 2021

ಸಫಲವಾಯಿತು ಜನುಮ ಸಫಲವಾಯಿತು ಸಫಲವಾಯಿತೆನ್ನ ಜನುಮ ವಿಭು ankita vaikunta vittala

 

kruti by ಬೇಲೂರು ವೈಕುಂಠ ದಾಸರು belur vaikunta dasaru


ಸಫಲವಾಯಿತು ಜನುಮ ಸಫಲವಾಯಿತು

ಸಫಲವಾಯಿತೆನ್ನ ಜನುಮ ವಿಭು ಶ್ರೀ ವೈಕುಂಠೇಶನ ಕಂಡೇ ಪ


ಚತುರವೇದ ಸ್ಮøತಿ ಪುರಾಣ

ತತಿಗಳೊಂದಾಗಿ ನೆರೆದು ತಮ್ಮ

ಮತಿಗಳಿಂದ ನುತಿಸಿ ಮಹಿಮೋ

ನ್ನತಿಯ ಕಾಣದ ಮಹಿಮನ ಕಂಡೇ 1


ಶಂಖ ಚಕ್ರ ಗದೆ ಪದುಮಾ

ಲಂಕೃತವಾದ ಹಾರ ಕೇಯೂರ

ಕಂಕಣಾಂಗದ ಕಟಕ ಮುಕುಟಾ

ಲಂಕೃತನಾದ ಹರಿಯ ಕಂಡೇ 2


ಒಂದು ಕರವ ಜಘನದ ಮೇಲೆ ಮ

ತ್ತೊಂದು ಕರವ ತಾನಿದ್ದಯಿರವೆ

ಸಂದೇಹವೇಕೆ ವೈಕುಂಠ

ವೆಂದು ಅಟ್ಟೈಸುವಂದದಿ ಹರಿಯ ಕಂಡೇ 3


ಲಕುಮಿಗುಣಗಳೆಣಿಪನೆಂದು ಪಿಡಿದು

ಅಕಳಂಕದುಂಗುಟದುಗುರುರೆ ಧ್ಯಾನಿಸಿ

ಪ್ರಕಟಿತವಾದ ಗುಣಗಳನಂತ

ನಿಕರವ ತೋರಿದ ಹರಿಯ ಕಂಡೇ 4


ತನ್ನ ನಂಬಿದವರನೆಂದು

ಮನ್ನಿಪೆನೆಂಬ ಬಿರಿದ ತೋರ್ಪ

ಚನ್ನ ಶ್ರೀ ರಂಗನಾಥ

ಘನ್ನ ವೈಕುಂಠೇಶನ ಕಂಡೇ 5

***