kruti by ಬೇಲೂರು ವೈಕುಂಠ ದಾಸರು belur vaikunta dasaru
ಸಫಲವಾಯಿತು ಜನುಮ ಸಫಲವಾಯಿತು
ಸಫಲವಾಯಿತೆನ್ನ ಜನುಮ ವಿಭು ಶ್ರೀ ವೈಕುಂಠೇಶನ ಕಂಡೇ ಪ
ಚತುರವೇದ ಸ್ಮøತಿ ಪುರಾಣ
ತತಿಗಳೊಂದಾಗಿ ನೆರೆದು ತಮ್ಮ
ಮತಿಗಳಿಂದ ನುತಿಸಿ ಮಹಿಮೋ
ನ್ನತಿಯ ಕಾಣದ ಮಹಿಮನ ಕಂಡೇ 1
ಶಂಖ ಚಕ್ರ ಗದೆ ಪದುಮಾ
ಲಂಕೃತವಾದ ಹಾರ ಕೇಯೂರ
ಕಂಕಣಾಂಗದ ಕಟಕ ಮುಕುಟಾ
ಲಂಕೃತನಾದ ಹರಿಯ ಕಂಡೇ 2
ಒಂದು ಕರವ ಜಘನದ ಮೇಲೆ ಮ
ತ್ತೊಂದು ಕರವ ತಾನಿದ್ದಯಿರವೆ
ಸಂದೇಹವೇಕೆ ವೈಕುಂಠ
ವೆಂದು ಅಟ್ಟೈಸುವಂದದಿ ಹರಿಯ ಕಂಡೇ 3
ಲಕುಮಿಗುಣಗಳೆಣಿಪನೆಂದು ಪಿಡಿದು
ಅಕಳಂಕದುಂಗುಟದುಗುರುರೆ ಧ್ಯಾನಿಸಿ
ಪ್ರಕಟಿತವಾದ ಗುಣಗಳನಂತ
ನಿಕರವ ತೋರಿದ ಹರಿಯ ಕಂಡೇ 4
ತನ್ನ ನಂಬಿದವರನೆಂದು
ಮನ್ನಿಪೆನೆಂಬ ಬಿರಿದ ತೋರ್ಪ
ಚನ್ನ ಶ್ರೀ ರಂಗನಾಥ
ಘನ್ನ ವೈಕುಂಠೇಶನ ಕಂಡೇ 5
***
No comments:
Post a Comment