Showing posts with label ಹಗರಣ ಮಾಡದಿರು vijaya vittala suladi ಆಪತ್ತು ಪರಿಹಾರಕ ಸುಳಾದಿ HAGARANA MAADADIRU AAPATTU PARIHAARAKA SULADI. Show all posts
Showing posts with label ಹಗರಣ ಮಾಡದಿರು vijaya vittala suladi ಆಪತ್ತು ಪರಿಹಾರಕ ಸುಳಾದಿ HAGARANA MAADADIRU AAPATTU PARIHAARAKA SULADI. Show all posts

Monday 9 December 2019

ಹಗರಣ ಮಾಡದಿರು vijaya vittala suladi ಆಪತ್ತು ಪರಿಹಾರಕ ಸುಳಾದಿ HAGARANA MAADADIRU AAPATTU PARIHAARAKA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಅಪಮೃತ್ಯು ನಿವಾರಣಾ ಸುಳಾದಿ  

( ಶ್ರೀವಿಜಯದಾಸರು ತಮ್ಮ ಮಕ್ಕಳಾದ ಶ್ರೀಶೇಷಗಿರಿದಾಸರ ದೇಹ ಸ್ವಸ್ಥವಿಲ್ಲದಾಗ , ಅಪಮೃತ್ಯು ಪರಿಹಾರದ ಬಗೆಗೆ ಈ ಸುಳಾದಿಯನ್ನು ರಚಿಸಿ ಪ್ರಾರ್ಥನೆ ಮಾಡಿದ್ದು )

 ರಾಗ ಸಾವೇರಿ 

 ಧ್ರುವತಾಳ 

ಹಗರಣ ಮಾಡದಿರು ಹರಿಯೆ ನಿನಗೆ ಕರವ -
ಮುಗಿದು ಬೇಡಿಕೊಂಬೆ ಭಕ್ತಜನರ
ಬಗೆಬಗೆಯಿಂದ ಬಂದ ಕ್ಲೇಶವ ಕಳದು ನಂ -
ಬಿಗೆ ಇತ್ತು ಪಾಲಿಸುವ ಗುಣವಾರಿಧಿ
ಜಗದೊಳು ನಿನಗಿದೆ ವ್ಯಾಪಾರವಲ್ಲದೆ
ಮಿಗಿಲೇನೊ ಕಾಣೆ ಸರ್ವದ ನೋಡಲು
ಪಗೆವುಳ್ಳವನಾದರು ಬಂದು ನಿನ್ನ ಚರಣ -
ಯುಗಳ ನಂಬಲು ಕಾಯುವೆನೆಂಬೊ ಬಿರಿದು
ಅಗಣಿತವಾಗಿ ದಶದಿಕ್ಕಿಲಿ ಒಪ್ಪುತಿದೆ
ನಿಗಮವಿನುತ ನಿಷ್ಕಳಂಕ ಮಹಿಮ
ಸೊಗಸೋದೆ ಸರಿ ಸಜ್ಜನರ ಪ್ರತಿಪಾಲಿಪುದು
ಮಗುಳೆ ಉತ್ತರವುಂಟೆ ಎಲೊ ದೇವನೆ
ಖಗರಾಜಮಣಿಯಿರೆ ಪನ್ನಗ ಗರಳದ ಭಯವೇನು
ಹಗಲು ಇರಳು ಒಡನಿದ್ದರಾಗೆ
ಭಗವಂತ ಹಲವು ಮಾತಿನ ಫಲವೇನು ಭ -
ಕ್ತಗೆ ಬಂದಾಪತ್ತು ಪರಿಹರಿಸಿ ನೋಡು ಕರುಣಾದಲ್ಲಿ
ನಗೆಗೇಡಾಗಗೊಡದೆ ರಾಹುವಿನಿಂದಲಿ ಹೊರ -
ದೆಗೆದ ಇಂದುವಿನಂತೆ ಮಾಡು ಜೀಯಾ
ನೆಗಳಿಯ ಕತ್ತರಿಸಿ ಗಜವ ಕಾಯ್ದದದು ಮನ -
ಸಿಗೆ ಆಗುತಿದೆ ಸಿದ್ದವೆಂಬೋದಿಂದಲಾ
ತ್ರಿಗುಣಾತೀತ ಕೃಷ್ಣ ವಿಜಯವಿಠ್ಠಲ ನಿನ್ನ
ಪೊಗಳುವ ದಾಸನ್ನ ತಡಮಾಡದೆ ಕಾಯೊ ॥ 1 ॥

 ಮಟ್ಟತಾಳ 

ಹರಿಯೆ ನರಹರಿಯೆ ಕರುಣಾಸಾಗರ ಸಿರಿಯೆ
ಪರರ ಕುರುಹನರಿಯೆ ನಿರುತ ನಿನ್ನ ಮರಿಯೆ
ದುರಿತಕದಳಿ ಕರಿಯೆ ಸುರಗಣದ ಧೊರಿಯೆ
ಬರಿದೆ ಸೌಖ್ಯಕೆ ಕರೆಯೆ ದುರವಾರ್ತಿಯ ಬರಿಯೆ
ದುರುಳರಲ್ಲಿ ಬೆರೆಯೆ ಪರಮದಿಂದಲಿ ಜರಿಯೆ
ಸರಿಗಾಣೆನೀ ಪರಿಯೆ ಸ್ಮರಣೆಗೆಲ್ಲಿ ಸರಿಯೆ
ಪೊರೆವ ನೀನೆ ಮಂದರ ಗುಣವೆಣಿಸದೆ
ಧರೆಯೊಳು ಮತ್ತೊಬ್ಬರುಳ್ಳವರಾರು
ತುರುಗಳು ಕಾಯಿದ ಶ್ರೀವಿಜಯವಿಠ್ಠಲ ಕೃಷ್ಣ
ಎರವು ಮಾಡದೆ ಈ ಉತ್ತರವನು ಮನ್ನಿಸಬೇಕು ॥ 2 ॥

 ತ್ರಿವಿಡಿತಾಳ 

ನೀನೆ ಉಳಿಪೆನೆಂದು ನಿಂದರಾದಡೆ ಸುಪ –
ರ್ವಾಣರು ಆರೈಸಿ ನಿಲಲಾಪರೆ
ಏನೆಂಬೆನೊ ನಿನ್ನ ನಾಮದಾಚರಣೆಗೆ
ನಾನಾ ವಿಪತ್ತುಗಳು ನಿಲಬಲ್ಲವೆ
ಕಾಣೆನಿದಕೆ ಒಂದುಪಾಯವ ಆವಲ್ಲಿ
ಮೇಣು ಪೇಳುವುದೇನು ಪರಮಪುರುಷ
ನೀನಾಳಿದ ಬಂಟರಿಗೆ ಮಹಾತಾಪಗಳು ಬಂದು
ಬ್ಯಾನೆ ಬಡಿಸಲಾಪವೆ ಕ್ಷಣಮಾತುರ
ಜ್ಞಾನ ಸಂಪನ್ನರು ದಾಸರಂದೇ ನಮ್ಮ
ಪಾಣಿಗ್ರಹವ ಮಾಡಿಪ್ಪರಯ್ಯಾ
ಮಾಣಾದೆ ಈ ಸೊಲ್ಲು ಮನ್ನಿಸಿದರೆ ಕೀರ್ತಿ
ಕ್ಷೋಣಿಯೊಳಗೆ ನಿನಗೆ ಬರುತಲಿದೇ
ನೀನೆ ಪರದೈವ ಲೋಕಕ್ಕೆ ಗುರು ಮುಖ್ಯ -
ಪ್ರಾಣನೆ ನಿಜವೆಂಬೊದಾದರಿಂದು
ನಾನು ಬರೆದ ಬರಹ ಸತ್ಯವಾದರೆ ಖರಿಯಾ
ಮಾನಾಭಿಮಾನದೊಡಿಯಾ ಧನ್ವಂತ್ರಿ
ನೀನೊಲಿದದಕ್ಕೆ ಮಾಣಿಸು ಅಪವಾದ ನಿ -
ರ್ವಾಣಗಿಂತಧಿಕ ಎನಗಿತ್ತದಯ್ಯಾ
ಧ್ಯಾನಾದಿಗಳು ತಿಳಿಯೆ ಬಾಯಿಗೆ ಬಂದಂತೆ
ಗಾನರೂಪದಲಿ ಕೊಂಡಾಡಿದೆನೊ
ಹೀನವಾಗಗೊಡದೆ ಹಿತವ ಚಿಂತಿಸು ಕ -
ಲ್ಯಾಣವ ಕೊಡುತಲಿ ಸಹಯವಾಗಿ
ಪ್ರಾಣದಾಧಾರನೆ ವಿಜಯವಿಠ್ಠಲರೇಯ 
ದೀನಬಾಂಧವ ಸತತ ಸಾಧುನರನ ಕಾಯೊ ॥ 3 ॥

 ಅಟ್ಟತಾಳ 

ಉದ್ಧವನ್ನ ಶಾಪದಿಂದ ಮುಕ್ತನ ಮಾಡಿ
ಉದ್ಧರಿಸಿದೆ ತತ್ವವ ಉಪದೇಶಿಸಿ
ಶುದ್ಧವೈಷ್ಣವನಿವ ನಿರ್ಮತ್ಸರದವ
ಮಧ್ವರಾಯರ ಪಾದಪದ್ಮವೆ ಪೊಂದಿದ
ತದ್ದಾಸರ ದಾಸ ಭೃತ್ಯನೆನಿಪನಿವ
ಶ್ರದ್ಧೆಯುಳ್ಳವನಿವ ಸೌಮ್ಯ ಗುಣದವ
ಸಿದ್ಧಾಂತ ಪ್ರಮೇಯಗಳ ಪದ್ಧತಿ ಬಲ್ಲವ
ಉದ್ದಂಡನಲ್ಲವೊ ಕರ್ಮನಿಷ್ಠನಿವ
ಕ್ಷುದ್ರನಾದರೆ ನಾ ನಿನಗೆ ಪ್ರಾರ್ಥಿಸುವೆನೆ
ಹಾರ್ದವ ತಿಳಿದು ಪೇಳಿದೆ ಭವರೋಗದ -
ವೈದ್ಯ ವೈಕುಂಠರಮಣ ರಾಮಚಂದ್ರಾ
ವಿದ್ಯಾ ಕರ್ಮಾಲಂಬನದವ ನಾನಲ್ಲ
ಶುದ್ಧ ವೈಷ್ಣವರ ಚರಣರೇಣು ತಾನಾಗಿ
ಬಿದ್ದ ಪ್ರಯಕ್ತದಿ ಇನಿತು ತುತಿಸಿದೆನು
ಛಿದ್ರವಾಗಿದ್ದರು ಪೂರ್ಣವಾಗುವುದು ನೀ -
ನಿದ್ದ ಕಡೆಗೆ ಒಮ್ಮೆ ಶಿರಬಾಗಿ ನಮಿಸಲು
ಅದ್ರಿಧರ ನಿನ್ನ ನಂಬಿದ ದಾಸಗೆ
ಭದ್ರವಲ್ಲದೆ ಸರ್ವದಾ ಎನ್ನ ಸ್ವಾಮಿ
ಮುದ್ದು ಮೋಹನರಾಯ ವಿಜಯವಿಠ್ಠಲರೇಯ 
ಒದ್ದು ಕಳೆಯೊ ಬದ್ಧ ತಾಪಗಳ ತಡಿಯದೆ ॥ 4 ॥

 ಆದಿತಾಳ 

ಅಪಕೀರ್ತಿ ತಾರದಿರು ಎನ್ನ ಪಾಲಿಗೆ ದೇವ
ಅಪರಿಮಿತ ಮಹಿಮ ಅಂಬರೀಷವರದ
ಅಪಾರಗುಣನಿಲಯ ಅಭಯವನೀಯೊ ಇವಗೆ
ಸ್ವಪನಾವಸ್ಥಿಯಂತೆ ಕಡೆಗಾಗಲಿ ಕ್ಲೇಶ
ಉಪಚಾರ ನಿನಗೆ ನಾನು ಏನು ಪೇಳಲಸಾಧ್ಯ
ಅಪವಾದ ಬಂದಿದೆ ಅದನು ಪರಿಹರಿಸು
ಕೃಪೆಮಾಡು ಅರ್ಥಿಯಲ್ಲಿ ಅನನ್ಯ ಶರಣನೆಂದು
ಕೃಪಣನಾದರು ನಿನ್ನ ದಾಸನೆನಿಸಿ ಇಪ್ಪೆ
ಅಪಹಾಸಕಿಕ್ಕದಿರು ಅನಂತ ಜನುಮದ
ಉಪಕಾರ ಎನಗಿದೆ ಮತ್ತೊಂದಾವದು ಒಲ್ಲೆ
ಜಪತಪ ಸ್ವಾಧ್ಯಾಯ ಮತ್ತೆ ದಾನ ಧರ್ಮ
ಸಫಲವಿದ್ದರೆ ಇವಗೆ ಕೊಡಿಸಿ ಬಂದಟ್ಟಿದ
ಅಪಮೃತ್ಯು ತೊಲಗಿಸು ತವಕದಿಂದಲಿ ಒಲಿದು
ಗುಪುತಮಹಿಮ ನಮ್ಮ ವಿಜಯವಿಠ್ಠಲರೇಯ 
ವಿಪರೀತವಾಗಗೊಡದೆ ಬಲವಾಗಿ ರಕ್ಷಿಪದು ॥ 5 ॥

 ಜತೆ 

ಆರೋಗ್ಯವನೆ ಮಾಡು ಆಲಸ್ಯ ಗೈಸದೆ
ವೈರಾಗ್ಯನಿಧಿ ವಿಜಯವಿಠ್ಠಲ ಮಹವೈದ್ಯ ॥
*********



ಆಪತ್ತು ಪರಿಹಾರಕ ಸುಳಾದಿ  Appattu pariharaka Suladi

ಧ್ರುವತಾಳ
ಹಗರಣ ಮಾಡದಿರು ಹರಿಯೆ ನಿನಗೆ ಕರವ
ಮುಗಿದು ಬೇಡಿಕೊಂಬೆ ಭಕ್ತ ಜನರ
ಬಗೆಬಗೆಯಿಂದ ಬಂದ ಕ್ಲೇಶವ ಕಳದು ನಂ
ಬಿಗೆಯೆತ್ತು ಪಾಲಿಸುವ ಗುಣವಾರಿಧಿ
ಜಗದೊಳು ನಿನಗಿದೆ ವ್ಯಾಪಾರವಲ್ಲದೆ
ಮಿಗಿಲೇನೊ ಕಾಣೆ ಸರ್ವದ ನೋಡಲು
ಪಗೆವುಳ್ಳವನಾದರು ಬಂದು ನಿನ್ನ ಚರಣ
ಯುಗಳ ನಂಬಲು ಕಾಯುವೆನೆಂಬೊ ಬಿರಿದು
ಅಗಣಿತವಾಗಿ ದಶದಿಕ್ಕಿಲಿ ಒಪ್ಪುತಿದೆ
ನಿಗಮವಿನುತ ನಿಷ್ಕಳಂಕ ಮಹಿಮ
ಸೊಗಸೋದೆ ಸರಿ ಸಜ್ಜನರ ಪ್ರತಿಪಾಲಿಪುದು
ಮಗುಳೆ ಉತ್ತರವುಂಟೆ ಎಲೊ ದೇವನೆ
ಖಗರಾಜಮಣಿಯಿರೆ ಪನ್ನಗ ಗರಳದ ಭಯವೇನು
ಹಗಲು ಇರಳು ಒಡನಿದ್ದರಾಗೆ
ಭಗವಂತ ಹಲವು ಮಾತಿನ ಫಲವೇನು ಭ
ಕ್ತಗೆ ಬಂದಾಪತ್ತು ಪರಿಹರಿಸಿ ನೋಡು ಕರುಣಾದಲ್ಲಿ
ನಗೆಗೆಡೆಗಾಗಗೊಡದೆ ರಾಹುವಿನಿಂದಲಿ ಹೊರ
ದೆಗದ ಇಂದುವಿನಂತೆ ಮಾಡು ಜೀಯಾ
ನೆಗಳಿಯ ಕತ್ತರಿಸಿ ಗಜವ ಕಾಯ್ದದದು ಮನ
ಸಿಗೆ ಯಾಗುತಿದೆ ಸಿದ್ದವೆಂಬೋದಿಂದಲಾ
ತ್ರಿಗುಣಾತೀತ ಕೃಷ್ಣ ವಿಜಯ ವಿಠ್ಠಲ ನಿನ್ನ
ಪೊಗಳುವ ದಾಸನ್ನ ತಡಮಾಡದೆ ಕಾಯೊ ||1||

ಮಟ್ಟತಾಳ
ಹರಿಯೆ ನರಹರಿಯೆ ಕರುಣಾಸಾಗರ ಸಿರಿಯೆ
ಪರರ ಕುರುಹನರಿಯೆ ನಿರುತ ನಿನ್ನ ಮರಿಯೆ
ದುರಿತ ಕದಳಿ ಕರಿಯೆ ಸುರಗಣದಾ ಧೊರಿಯೆ
ಬರಿದೆ ಸೌಖ್ಯಕೆ ಕರಿಯೆ ದುರವಾರ್ತಿಯ ಬರಿಯೆ
ದುರುಳರಲ್ಲಿ ಬೆರೆಯೆ ಪರಮದಿಂದಲಿ ಬರಿಯೆ
ಸರಿಗಾಣೆನೀ ಪರಿಯೆ ಸ್ಮರಣೆಯಲ್ಲಿ ಸರಿಯೆ
ಪೊರೆವ ನೀನೆ ಮಂದರ ಗುಣವೆಣಿಸದೆ
ಧರೆಯೊಳು ಮತ್ತೊಬ್ಬರುಳ್ಳವರಾರು
ತುರುಗಳ ಕಾಯಿದಾ ಶ್ರೀ ವಿಜಯ ವಿಠ್ಠಲ ಕೃಷ್ಣ
ಎರವು ಮಾಡದೆ ಈ ಉತ್ತರವನು ಮನ್ನಿಸಬೇಕು ||2||

ತ್ರಿವಿಡಿತಾಳ
ನೀನೆ ಉಳಿಪೆನೆಂದು ನಿಂದರಾದಡೆ ಸು –
ಪ್ರಾಣರು ಆರೈಸಿ ನಿಲಲಾಪರೆ
ಏನೆಂಬೆನೊ ನಿನ್ನ ನಾಮದಾಚರಣಿಗೆ
ನಾನಾ ವಿಪತ್ತುಗಳು ನಿಲಬಲ್ಲವೆ
ಕಾಣೆನಿದಕೆ ಒಂದುಪಾಯವ ಆವಲ್ಲಿ
ಮೇಣು ಪೇಳುವುದೇನು ಪರಮಪುರುಷ
ನೀನಾಳಿದ ಬಂಟಂಗೆ ಮಹಾತಾಪಗಳು ಬಂದು
ಬ್ಯಾನೆ ಬಡಿಸಲಾಪವೆ ಕ್ಷಣಮಾತುರ
ಜ್ಞಾನ  ಸಂಪನ್ನರು ದಾಸರಂದೇ ನಮ್ಮ
ಪಾಣಿಗ್ರಹವ ಮಾಡಿಪ್ಪರಯ್ಯಾ
ಮಾಣಾದೆ ಈ ಸೊಲ್ಲು ಮನ್ನಿಸಿದರೆ ಕೀರ್ತಿ
ಕ್ಷೋಣಿಯೊಳಗೆ ನಿನಗೆ ಬರುತಲಿದೇ
ನೀನೆ ಪರದೈವ ಲೋಕಕ್ಕೆ ಗುರುಮುಖ್ಯ
ಪ್ರಾಣನೆ ನಿಜವೆಂಬೊದಾದರಿಂದು
ನಾನು ಬರೆದ ಬರಹ ಸತ್ಯವಾದರೆ ಖರಿಯಾ
ಮಾನಾಭಿಮಾನದೊಡಿಯಾ ಧನ್ವಂತ್ರಿ
ನೀನೊಲಿದದಕ್ಕೆ ಮಾಣಿಸು ಅಪವಾದಾ ನಿ-
ರ್ವಾಣಗಿಂತಧಿಕ ಎನಗಿತ್ತದಯ್ಯಾ
ಧ್ಯಾನಾದಿಗಳು ತಿಳಿಯೆ ಬಾಯಿಗೆ ಬಂದಂತೆ
ಗಾನ ರೂಪದಲಿ ಕೊಂಡಾಡಿದೆನೊ
ಹೀನವಾಗಗೊಡದೆ ಹಿತವ ಚಿಂತಿಸು ಕ-
ಲ್ಯಾಣವ ಕೊಡುತಲಿ ಸಹಾಯವಾಗಿ
ಪ್ರಾಣಧಾರನೆ ವಿಜಯ ವಿಠ್ಠಲರೇಯ
ದೀನ ಬಾಂಧವ ಸತತ ಸಾಧು ನರನ ಕಾಯೊ||3||

ಅಟ್ಟತಾಳ
ಉದ್ಧವನ್ನ ಶಾಪದಿಂದ ಮುಕ್ತನಮಾಡಿ
ಉದ್ಧರಿಸಿದೆ ತತ್ವವ ಉಪದೇಶಿಸಿ
ಶುದ್ಧ ವೈಷ್ಣವನಿವ ನಿರ್ಮತ್ಸರದವ
ಮಧ್ವರಾಯರ ಪಾದ ಪದ್ಮವ ಪೊಂದಿದ
ತದ್ದಾಸರ ದಾಸರ ಭೃತ್ಯನೆನಿಸು
ಶ್ರದ್ಧೆಯುಳ್ಳವನಿವ ಸೌಮ್ಯ ಗುಣದವ
ಸಿದ್ಧಾಂತ ಪ್ರಮೇಯಗಳ ಪದ್ಧತಿ ಬಲ್ಲವ
ಉದ್ದಂಡನಲ್ಲವೊ ಕರ್ಮನಿಷ್ಠನಿವ
ಕ್ಷುದ್ರನಾದರೆ ನಾ ನಿನಗೆ ಪ್ರಾರ್ಥಿಸುವೆನೆ
ಹಾರ್ದವ ತಿಳಿದು ಪೇಳಿದೆ ಭವರೋಗದ
ವೈದ್ಯ ವೈಕುಂಠ ರಮಣ ರಾಮಚಂದ್ರಾ
ವಿದ್ಯಾ ಕರ್ಮಾಲಂಬನದವ ನಾನಲ್ಲ
ಶುದ್ಧ ವೈಷ್ಣವರ ಚರಣರೇಣು ತಾನಾಗಿ
ಬದ್ಧ ಪ್ರಯಕ್ತದಿ ಇನಿತು ತುತಿಸಿದೆನು
ಛಿದ್ರವಾಗಿದ್ದರು ಪೂರ್ಣವಾಗುವುದು ನೀ-
ನಿದ್ದ ಕಡೆಗೆ ಒಮ್ಮೆ ಶಿರಬಾಗಿ ನಮಿಸಲು
ಅದ್ರಿಧರ ನಿನ್ನ ನಂಬಿದ ದಾಸಗೆ
ಭದ್ರವಲ್ಲದೆ ಸರ್ವದಾ ಎನ್ನಸ್ವಾಮಿ
ಮುದ್ದು ಮೋಹನರಾಯ ವಿಜಯ ವಿಠ್ಠಲರೇಯ
ಒದ್ದು ಕಳೆಯೊ ಬದ್ಧ ತಾಪಂಗಳ ತಡಿಯದೆ||4||

ಆದಿತಾಳ
ಅಪಕೀರ್ತಿ ತಾರದಿರು ಎನ್ನ ಪಾಲಿಗೆ
ಅಪರಿಮಿತ ಮಹಿಮ ಅಂಬರೀಷ ವರದ
ಅಪಾರಗುಣನಿಲಯ ಅಭಯವನೀಯೊ ಇವಗೆ
ಸ್ವಪನಾವಸ್ಥಿಯಂತೆ ಕಡೆಗಾಗಲಿ ಕ್ಲೇಶ
ಉಪಚಾರ ನಿನಗೆ ನಾನು ಏನು ಪೇಳಲಸಾಧ್ಯ
ಅಪವಾದ ಬಂದಿದೆ ಅದನು ಪರಿಹರಿಸು
ಕೃಪೆಮಾಡು ಅರ್ಥಿಯಲ್ಲಿ ಅನನ್ಯ ಶರಣನೆಂದು
ಕೃಪಣನಾದರು ನಿನ್ನ ದಾಸನೆನಿಸಿ ಇಪ್ಪೆ
ಅಪಹಾಸಕಿಕ್ಕದಿರು ಅನಂತ ಜನುಮದ
ಉಪಕಾರ ಎನಗಿದೆ ಮತ್ತೊಂದಾವುದು ಒಲ್ಲೆ
ಜಪತಪ ಸ್ವಾಧ್ಯಾಯ ಮತ್ತೆ ದಾನ ಧರ್ಮ
ಸಫಲವಿದ್ದರು ಅವಗೆ ಅಡಸಿ ಬಂದಟ್ಟಿದ
ಅಪಮೃತ್ಯು ತೊಲಗಿಸು ತವಕದಿಂದಲಿ ಒಲಿದು
ಗುಪುತಮಹಿಮೆ ನಮ್ಮ ವಿಜಯ ವಿಠ್ಠಲರೇಯ
ವಿಪರೀತವಾಗಗೊಡದೆ ಬಲವಾಗಿ ರಕ್ಷಿಪುದು ||5||

ಜತೆ
ಆರೋಗ್ಯವನೆ ಮಾಡು ಆಲಸ್ಯಗೈಸದೆ
ವೈರಾಗ್ಯನಿಧಿ ವಿಜಯ ವಿಠ್ಠಲ ಮಹವೈದ್ಯ ||6||
**********