Showing posts with label ರಥವನೇರಿ ತಾ ಬಂದ ಆನಂದದಿಂದ lakumeesha. Show all posts
Showing posts with label ರಥವನೇರಿ ತಾ ಬಂದ ಆನಂದದಿಂದ lakumeesha. Show all posts

Wednesday 1 September 2021

ರಥವನೇರಿ ತಾ ಬಂದ ಆನಂದದಿಂದ ankita lakumeesha

 ವಾಯುದೇವರ ಅವತಾರ ಸ್ತೋತ್ರ.....

ರಾಗ : ಶಂಕರಾಭರಣ       ತಾಳ : ಆದಿ

ರಥವನೇರಿ ತಾ ಬಂದ ಆನಂದದಿಂದ ।। ಪಲ್ಲವಿ ।।

ಕ್ಷಿತಿಯೊಳು ಭಕುತರ ವ್ಯಥೆ ತತಿ ಕಳಿಯುತ ।

ಕ್ಷಿತಿಸುತೆ ಪತಿ ಧ್ಯಾನ ಸುಜನಕೆ ನೀಡುತ ।। ಅ ಪ ।।

ಬಾಲ ಪಂಚಾನನ ಕಾಳಿ ವದನಾಬ್ಜ ಇನ ।

ಖೂಳ ದೈತ್ಯನ ಪುರ ಬಾಲದಿ ಸುಟ್ಟಿದ ।

ಕೆಳಗೆ ಮಗನಿಗೆ ಶಿಲದಿ ನಿರ್ಮಿಸೆ ನಾ ।

ಪೇಳಿ ಸ್ವಪ್ನದಿ ನಮ್ಮ ಧಾಮದಿ ನಿಂತವನೇ ।। ಚರಣ ।।

ಬಂಡಿ ಅನ್ನವನುಂಡ ಬಕನ ಪ್ರಾಣವಗೊಂಡ ।

ಹಿಂಡು ದೈತ್ಯರ ಗಂಡ ಕೀಚಕನ್ಹಿಂಡ ಮುಂಡ ।

ಚಂಡ ತೇಜದಿ ಸತಿಗೆ ತೋರಿಸಿ ತಾ ಕಂಡ ।

ಭಂಡ ಕುರುಪರನೆಲ್ಲ ರುಂಡ ಮುರಿದುದ್ಧ೦ಡ ।। ಚರಣ ।।

ಪಾಜಕದಲಿ ಪುಟ್ಟಿ ಕುಜನ ಮತಗಳ ಮೆಟ್ಟಿ ।

ತೇಜ ನಿತ್ಯದ ಗ್ರಂಥ ರಾಜಗಳ್ಪರದೊಟ್ಟಿ ।

ಮೋಜಿಲಿ ಲಕುಮೀಶನ ಸ್ಥಾಪಿಸಿ ಉಡುಪಿಲಿಟ್ಟಿ ।

ಮಾಜದೆ ಭಕುತರ ಪೊರೆವ ಶ್ರೀ ಮಧ್ವ ದಿಟ್ಟ ।। ಚರಣ ।।

****