ಜಗನ್ನಾಥದಾಸರು
ರಾಮಾರ್ಯ ನಿಮ್ಮಂಘ್ರಿ ಕಮಲಗಳಿಗೆ
ಕರವ ಕರುಣದಿ ನೋಡು ವೆಂಕಟ ಪ.
ಬಾಹ್ಯ ಕರ್ಮವ ತೊರೆದು ಸರ್ವಗತನಾದ ನರ
ಸಿಂಹನ ಪ್ರೀತಿಗಳಿಸುವ ಸ್ನೇಹದಿ
ಮಹ್ಯಮರರಿಗೆ ವಿದ್ಯೆ ವಸ್ತ್ರಾನ್ನ ಪ್ರತಿ ದಿವಸ
ಸಹ್ಯವಿಲ್ಲದೆ ಕೊಟ್ಟು ಮೋದಿಸುವ ವೆಂಕಟ1
ವಾಸುದೇವ ವಿಠಲನಂಘ್ರಿಗಳ ರಾ
ಜೀವ ಮಧುಕರ ಮಧ್ವ ಶಾಸ್ತ್ರಜ್ಞನೇ
ಅವ ದೇಶದೊಳಿದ್ದರೇನ್ಮರೆಯದೆ ನಿಮ್ಮ
ಸೇವ ಸೇವಕರೊಳಗೆ ಎಣಿಸುವುದು ವೆಂಕಟ2
ಬಾಲಕನ ಬಿನ್ನಪ ಲಾಲಿಸಿ ಕರುಣದಿ ಗೋ
ಪಾಲ ವಿಠಲನ ದಾಸರ ಮಗನೆಂದು
ಪಾಲಿಪುದು ಪರಮ ಕರುಣಾಳು ಜಗನ್ನಾಥ ವಿಠಲ
ಗಾಳೆನಿಪ ಪವಮಾನ ಗಾಯನನೆ ವೆಂಕಟ 3
********
ರಾಮಾರ್ಯ ನಿಮ್ಮಂಘ್ರಿ ಕಮಲಗಳಿಗೆ
ಕರವ ಕರುಣದಿ ನೋಡು ವೆಂಕಟ ಪ.
ಬಾಹ್ಯ ಕರ್ಮವ ತೊರೆದು ಸರ್ವಗತನಾದ ನರ
ಸಿಂಹನ ಪ್ರೀತಿಗಳಿಸುವ ಸ್ನೇಹದಿ
ಮಹ್ಯಮರರಿಗೆ ವಿದ್ಯೆ ವಸ್ತ್ರಾನ್ನ ಪ್ರತಿ ದಿವಸ
ಸಹ್ಯವಿಲ್ಲದೆ ಕೊಟ್ಟು ಮೋದಿಸುವ ವೆಂಕಟ1
ವಾಸುದೇವ ವಿಠಲನಂಘ್ರಿಗಳ ರಾ
ಜೀವ ಮಧುಕರ ಮಧ್ವ ಶಾಸ್ತ್ರಜ್ಞನೇ
ಅವ ದೇಶದೊಳಿದ್ದರೇನ್ಮರೆಯದೆ ನಿಮ್ಮ
ಸೇವ ಸೇವಕರೊಳಗೆ ಎಣಿಸುವುದು ವೆಂಕಟ2
ಬಾಲಕನ ಬಿನ್ನಪ ಲಾಲಿಸಿ ಕರುಣದಿ ಗೋ
ಪಾಲ ವಿಠಲನ ದಾಸರ ಮಗನೆಂದು
ಪಾಲಿಪುದು ಪರಮ ಕರುಣಾಳು ಜಗನ್ನಾಥ ವಿಠಲ
ಗಾಳೆನಿಪ ಪವಮಾನ ಗಾಯನನೆ ವೆಂಕಟ 3
********