ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯಬೇಕೆನ್ನ ನೀನು ಶ್ರೀ ಗುರು ಎನ್ನ ಪ
ಪಕ್ಷ ಪಾಂಡವ ಪ್ರಿಯ ಅಕ್ಷಯಾಪದನಿಶ್ಚಯ ಲಕ್ಷುಮಿ ಸುಹೃದಯ ರಕ್ಷಿಸೊ ನೀ ಎನ್ನಯ್ಯ 1
ಪವಿತ್ರ ಪ್ರಣವರಿಸಿ ಸುವಿದ್ಯದೊಳು ಬೆರಸಿ ಭವ ಭಯವು ಹಿಂಗಿಸಿ 2
ಸೋಹ್ಯ ಸೊನ್ನೆಯದೋರಿ ದಯಮಾಡೊ ಮುರಾರಿ ಸಾಹ್ಯ ಮಾಡೊ ಸಹಕಾರಿ ಮಹಿಪತಿ ಸ್ವಾಮಿ ಶ್ರೀಹರಿ 3
***