Wednesday, 1 September 2021

ಕಾಯಬೇಕೆನ್ನ ನೀನು ಶ್ರೀ ಗುರು ಎನ್ನ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕಾಯಬೇಕೆನ್ನ ನೀನು ಶ್ರೀ ಗುರು ಎನ್ನ ಪ  


ಪಕ್ಷ ಪಾಂಡವ ಪ್ರಿಯ ಅಕ್ಷಯಾಪದನಿಶ್ಚಯ ಲಕ್ಷುಮಿ ಸುಹೃದಯ ರಕ್ಷಿಸೊ ನೀ ಎನ್ನಯ್ಯ 1 

ಪವಿತ್ರ ಪ್ರಣವರಿಸಿ ಸುವಿದ್ಯದೊಳು ಬೆರಸಿ ಭವ ಭಯವು ಹಿಂಗಿಸಿ 2 

ಸೋಹ್ಯ ಸೊನ್ನೆಯದೋರಿ ದಯಮಾಡೊ ಮುರಾರಿ ಸಾಹ್ಯ ಮಾಡೊ ಸಹಕಾರಿ ಮಹಿಪತಿ ಸ್ವಾಮಿ ಶ್ರೀಹರಿ 3

***

No comments:

Post a Comment