ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ಯಾಕೆ ದೇವಿ ಮುನಿಸು ಮಾತಾಡೇ| ನಿನ್ನ ಹಿಡಿದ ಛಲ ಗೆಲಿಸಿದ ಬಳಿಕ ಪ
ಘನ ಮಳೆಗರವ ಜೀಮ್ಯೂತಮ್ಯಾಲೇ|ತಾ| ಮುನಿಪ ಕೋಪದಿ ಪೋಗುತಲಿಹ| ಮನ ದೊಳಗಿದ್ದ ಚಾತಕನಂತೆ ನಿನ್ನ ಮ್ಯಾಲೆ| ವನರುಹ ನೇತ್ರ ನಾ ಮುನಿದುದು ಕಾಣೆ 1
ಸಂಗತಿಲ್ಲದೆ ನಿನ್ನಾಂಗ ನಟ್ಟುಳಿಯಿಂದ| ಭಂಗ ಗೊಂಡಿಹುದು| ತುಂಗ ಪಯೋಧರೆನ್ನಂಗ ತೋಷಿಸುವ ತಾ| ಲಿಂಗನ ಗೈಯೆ ನೀ ಮಂಗಳವದನೇ 2
ನಿನ್ನಿಂದಾಗಲಿ ಮತ್ತ ನನ್ನಿಂದಾಗಲಿ ಇನ್ನು ಮುನ್ನಾದ ಮನದ ಗಂಟು ಬಿಟ್ಟು| ಪನ್ನಗವೇಣಿ ಮಾತಾಡೇ ಸದ್ಗುಣದ ಸಂ| ಪನ್ನೇ ಮಹಿಪತಿ ಸುತಗೊಲಿದ ಶ್ರೀದೇವಿ 3
***
No comments:
Post a Comment