Thursday, 2 September 2021

ಇವನಾ ನೆಲೆಗಾಣೆ ನಮ್ಮಯ್ಯಾ ಸಣ್ಣವನೇ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಇವನಾ ನೆಲೆಗಾಣೆ ನಮ್ಮಯ್ಯಾ ಸಣ್ಣವನೇ ಪ 

ಒರಳವನೆಳೆದೊಯ್ದು ಮರಗಳ ಕೆಡೆಹಿಡಿದ| ಭರದಿ ಪೂತನಿಯಸುವ ಹೀರಿದಾ ನಮ್ಮಯ್ಯಾ 1 
ಬೇರಳಲಿ ಗಿರಿಯೆತ್ತಿ ತುರುಗಳ ಕಾಯ್ದಾ| ತೆರೆದು ಬಾಯೊಳು ಜಗವ ತೋರಿದ ನಮ್ಮಾಯ್ಯಾ 2 
ವೇಣುನಾದ ಮಾಡಿ ತೃಣಪಶು ಮೊದಲಾದ| ಏಣಾಕ್ಷಿಯರ ಮನವಾ ಭ್ರಮಿಸಿದಾ ನಮ್ಮಯ್ಯಾ 3 
ಕಾಳಿ ಮಡುವ ಹೊಕ್ಕು ಕಾಳಿಂಗನೆಳೆತಂದಾ| ಲೀಲೆ ತೋರಲು ಹರಿ ಉದಿಸಿದ ನಮ್ಮಯ್ಯಾ 4 
ಗುರುಮಹಿಪತಿ ಸ್ವಾಮಿ ಸುರುತರು ಎನಗಾದಾ| ನರನೆಂಬವರ ಬಾಮಾ ಬಿಗಿಸಿದ ನಮ್ಮಯ್ಯಾ 5

***

 

No comments:

Post a Comment