Showing posts with label ನೆಲೆಯಗೊಳ್ಳಿರೊ ಮನವ ಬಲಿದು ನೆಲೆಯಗೊಳ್ಳಿರೊ mahipati. Show all posts
Showing posts with label ನೆಲೆಯಗೊಳ್ಳಿರೊ ಮನವ ಬಲಿದು ನೆಲೆಯಗೊಳ್ಳಿರೊ mahipati. Show all posts

Wednesday, 1 September 2021

ನೆಲೆಯಗೊಳ್ಳಿರೊ ಮನವ ಬಲಿದು ನೆಲೆಯಗೊಳ್ಳಿರೊ ankita mahipati

 ನೆಲೆಯಗೊಳ್ಳಿರೊ ಮನವ ಬಲಿದು ನೆಲೆಯಗೊಳ್ಳಿರೊ ನೆಲೆಯಗೊಳ್ಳಿರಯ್ಯ ನೀವು ಬಲಿದು ಭಾವಭಕ್ತಿಯಿಂದ ಪ  


ಹಲವು ಮಾತಾಡಿ ನಿಮ್ಮ ಕುಲವ ಚಲವವೆಂದು ಎನಿಸಬ್ಯಾಡಿ ಹೊಲಬು ತಿಳಿದು ನಿಮ್ಮ ನೆಲೆಯನಿಭವನರಿತು ನೋಡಿರೊ 1 

ಗುಟ್ಟು ತಿಳಿಯಲರಿಯದೆ ಬೊಟ್ಟೆಣಿಸಿ ದಣಿಯಬ್ಯಾಡಿ ಮಟ್ಟಮಾಡಿ ಮನವ ನಿಜಗಟ್ಟಿಗೊಳ್ಳಿರೊ 2 

ನಿಲವು ತಿಳಿದು ನೆಲಯಗೊಂಡು ಇಳಿಯೊಳಗೆ ಮಹಿಪತಿಯು ಒಲಿದು ದಯಮಾಡಿ ಸಲಹುತಿಹ ಗುರು ಕಾಣಿರೊ 3

***