Showing posts with label ನೀ ಕರುಣಿಸೊ ವಿಠಲ ನಮ್ಮಸಾಕೊ prasannavenkata NEE KARUNISO VITALA NAMMA SAAKO. Show all posts
Showing posts with label ನೀ ಕರುಣಿಸೊ ವಿಠಲ ನಮ್ಮಸಾಕೊ prasannavenkata NEE KARUNISO VITALA NAMMA SAAKO. Show all posts

Thursday, 16 December 2021

ನೀ ಕರುಣಿಸೊ ವಿಠಲ ನಮ್ಮಸಾಕೊ ankita prasannavenkata NEE KARUNISO VITALA NAMMA SAAKO





ನೀ ಕರುಣಿಸೊ ವಿಠಲ ನಮ್ಮಸಾಕೊ ಪಂಡರಿ ವಿಠಲ ||pa||

ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೆ ವಿಠಲ
ಸಾಸಿವೆಯಷ್ಟು ಭಕುತಿಯನರಿಯೆನುಶೇಷಶಯನ ಶ್ರೀ ವಿಠಲ |\1||

ಭವಸಾಗರದೊಳು ಮುಳುಗುವೆ ಸುಮ್ಮನೆಅವಲೋಕಿಸುವರೆ ವಿಠಲ
ನವ ನವ ವಿಷಯಕೆ ಮುಗ್ಗುತಲಿಹ ಮನದವಸರ ಕಾಯೊ ವಿಠಲ ||2||

ತನುಸಂಬಂಧಿಗಳತಿ ಕಾರ್ಯಾರ್ಥಿಗಳ್ಎನಗಾರಿಲ್ಲೊ ವಿಠಲಾ
ಬಿನಗುಮಾನವರನುಸರಣೆಯಲಿದಣಿಸದಿರಯ್ಯ ವಿಠಲ||3||

ನಿಶಿದಿನಅಶನವಸನಕೆ ಹೆಣಗುವೆಹುಸಿಸಂಗ್ರಹಿಸಿದೆ ವಿಠಲ
ನಿಶಿದ್ಧಗಳಂಜಿಕೆ ಇಲ್ಲವು ನರಕದಗಸಣೆಗೆ ಅಂಜುವೆ ವಿಠಲ||4||

ಜಾವಕೆ ಮಾಡುವೆ ಸಾವಿರ ತಪ್ಪನುಕಾವದಯಾಂಬುಧಿ ವಿಠಲ
ನಾ ವಡಲ್ಹೊಕ್ಕೆನೊ ಪ್ರಸನ್ವೆಂಕಟಪತಿಜೀವಕೆ ಹೊಣೆ ನೀ ವಿಠಲ ||5||
***


ನೀ ಕರುಣಿಸೋ ವಿಠಲ ನಮ್ಮ ಸಾಕೊ ಪಂಡರಿ ವಿಠಲ || pa||

ವಿಠಲ ವಿಠಲ ಪಾಂಡುರಂಗ ಜೈ ಜೈ ವಿಠಲ ಪಾಂಡುರಂಗ

ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಠಲ

ಸಾಸಿವೆಯಷ್ಟು ಭಕುತಿಯನರಿಯೇನೋ ಶೇಷ ಶಯನ ಹರಿ ವಿಠಲ ||1||

ಭವಸಾಗರದೊಳು ಮುಳುಗುವೆ ಸುಮ್ಮನೆ ಅವಲೋಕಿಸುವರೇ ವಿಠಲ

ನವ ನವ ವಿಷಯಕೆ ಹಿಗ್ಗುತಲಿಹ ಮನದವಸರ ಕಾಯೋ ವಿಠಲ ||2||

ನಿಶಿದಿನ ಅಶನ ವಸನಕೆ ಹೆಣಗುವೆ ಹುಸಿ ಸಂಗ್ರಹಿಸಿದೆ ವಿಠಲ

ನಿಷೇಧ ಮಾಯಾ ಇಲ್ಲವೋ ನರಕದ ಗಸಣೆಗೆ ಅಂಜುವೆ ವಿಠಲ ||3||

ಜಾವಕೇ ಮಾಡುವೆ ಸಾವಿರ ತಪ್ಪನು ಕಾಯೋ ದಯಾಂಬುಧಿ ವಿಠಲ

ಶ್ರೀವರ ಪ್ರಸನ್ನ ವೆಂಕಟ ವಿಠಲ ಜೀವಕೆ ಹೊಣೆ ನೀ ವಿಠಲ ||4||
***

nee karuNisO viThala namma saakO pandari viThala ||pa||

viThala viThala panduranga jai jai viThala panduranga


dOShigaLoLage hiriyanu naa nirdOShigalarasanE viThala
saasiveyaShTu bhakutiyanariyenO shESha shayana hari viThala ||1||

BhavasaagaradoLu muLuguve summane avalOkisuvare viThala

nava nava viShayake higgutaliha manadavasara kaayO viThala ||2||

nishidina ashana vasanake heNaguve husi saMgrahiside viThala

niShEdha maayaa illavO narakada gasaNege aMjuve viThala ||3||

Jaa ke maaDuve saavira tappanu kaayO dayaMbudhi viThala

shreevara prasanna vEMkaTa viThala jeevake hone nee viThala ||4||
***

Nee karuniso viththala namma|saako pandari viththala||pa||

Doshigalolage hiriyanu naa nirdoshigalarase viththala|
Saasiveyashtu bhakutiyanariyeno shesha shayana hari viththala ||1||

Bhava saagaradolu muluguve summaneavalokisuvare viththala|
Nava nava vishayake higgutaliha manadavasara kaayo viththala ||2||

Nishidina ashanaa vasanake henaguve husi sangrahiside viththala|
Nishedha maayaa illavo narakada gasanege anjuve viththala ||3||

Tanu sambandhigalati kaamyaarthigalu yenagyaarillo viththala|
Binuguva maanavara anusaraneyali danisadirayyaa viththala ||4||

Jaavake maaduve saavira tappanu kayo dayaambudhe viththala|
Shreevara prasanna venkata viththala jeevake hone nee viththala ||5||
***
by ಪ್ರಸನ್ನವೆಂಕಟದಾಸರು
ನೀ ಕರುಣಿಸೊ ವಿಠಲ ನಮ್ಮಸಾಕೊ ಪಂಡರಿ ವಿಠಲ ಪ.

ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೆ ವಿಠಲಸಾಸಿವೆಯಷ್ಟು ಭಕುತಿಯನರಿಯೆನುಶೇಷಶಯನ ಶ್ರೀ ವಿಠಲ 1

ಭವಸಾಗರದೊಳು ಮುಳುಗುವೆ ಸುಮ್ಮನೆಅವಲೋಕಿಸುವರೆ ವಿಠಲನವ ನವ ವಿಷಯಕೆ ಮುಗ್ಗುತಲಿಹ ಮನದವಸರ ಕಾಯೊ ವಿಠಲ 2

ತನುಸಂಬಂಧಿಗಳತಿ ಕಾರ್ಯಾರ್ಥಿಗಳ್ಎನಗಾರಿಲ್ಲೊ ವಿಠಲಾಬಿನಗುಮಾನವರನುಸರಣೆಯಲಿದಣಿಸದಿರಯ್ಯ ವಿಠಲ 3

ನಿಶಿದಿನಅಶನವಸನಕೆ ಹೆಣಗುವೆಹುಸಿಸಂಗ್ರಹಿಸಿದೆ ವಿಠಲನಿಶಿದ್ಧಗಳಂಜಿಕೆ ಇಲ್ಲವು ನರಕದಗಸಣೆಗೆ ಅಂಜುವೆ ವಿಠಲ 4

ಜಾವಕೆ ಮಾಡುವೆ ಸಾವಿರ ತಪ್ಪನುಕಾವದಯಾಂಬುಧಿ ವಿಠಲನಾ ವಡಲ್ಹೊಕ್ಕೆನೊ ಪ್ರಸನ್ವೆಂಕಟಪತಿಜೀವಕೆ ಹೊಣೆ ನೀ ವಿಠಲ 5
****

ಪ್ರಸನ್ನ ವೆಂಕಟದಾಸರು

ನೀಕರುಣಿಸೋ ವಿಠ್ಠಲ ನಮ್ಮ ಸಾಕೋ ಪಂಡರಿ ವಿಠ್ಠಲಾ         ||ಪ||

ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಠ್ಠಲಾ
ನಾಸುವೆಯಷ್ಟು ಬಕುತಿಯನರಿಯೆನು ಶೇಷಶಯನ ಹರಿ ವಿಠಲಾ    ||೧||

ಭವಸಾಗರದೊಳು ಮುಳಿಗುವೆ ಸುಮ್ಮನೆ ಅವಲೋಕಿಪರೆ ವಿಠ್ಠಲಾ
ನವನವ ವಿಷಯಕೆ ಹಿಗ್ಗುತಲಿಹ ಮನದವಸರ ಕಾಯೊ ವಿಠ್ಠಲಾ      ||೨||

ನಿಶಿದಿನ ಅಶನಾ ವಸನಕೆ ಹೆಣಗಿ ಹುಸಿಯ ಸಂಗ್ರಹಿಸಿದೆ ವಿಠ್ಠಲಾ
ನಿಷೇಧ ಮಾಯ ಇಲ್ಲವು ನರಕದ ಗಸಣಿಗೆ ಅಂಜುವೆ ವಿಠ್ಠಲಾ       ||೩||

ತನು ಸಂಬಂಧಿಗಳತಿಕಾಯಾರ್ಥರು ಎನಗ್ಯಾರಿಲ್ಲೊ ವಿಠ್ಠಲಾ
ಬಿನುಗುಮಾನವರ ಅನುಸರಣಿಯಲಿ ದಣಿಸದಿರಯ್ಯ ವಿಠ್ಠಲಾ        ||೪||

ಝವಕೆ ಮಾಡುವೆ ಸಾವಿರ ತಪ್ಪನು ಕಾಯೋ ದಯಾಂಬುದಿ ವಿಠ್ಠಲಾ
ಶ್ರೀವರ ಪ್ರಸನ್ನವೆಂಕಟವಿಠಲಾ ಜೀವಕೆ ಹೊಣೆ ನೀ ವಿಠಲಾ        ||೫||
********