Ankita pradhana by Jagannatha dasa to sridavittala dasa
ರಾಗ : ಕಾಂಬೋಧಿ ತಾಳ : ಝ೦ಪೆ
ಶ್ರೀದವಿಠಲ ಸರ್ವಾಂತರಾತ್ಮ ।
ನೀ ದಯಡಿ ಒಲಿದು । ನಿ ।
ತ್ಯದಲಿ ಕಾಪಾಡುವುದು ।। ಪಲ್ಲವಿ ।।
ಚಿಕ್ಕ ತನದಲಿ ತಂದೆ
ತಾಯಿಗಳು ಒಲಿದು । ಪೆಸ ।
ರಿಕ್ಕಿ ಕರೆದರು ನಿನ್ನ
ದಾಸನೆಂದೂ ।
ಅಕ್ಕರದಿ ಒಲಿದು ಭವ
ದುಃಖಗಳ ಪರಿಹರಿಸಿ ।
ಮಕ್ಕಳನು ತಾಯಿ ಸಲಹುವ
ತೆರದಿ ಸಂತೈಸು ।। ಚರಣ ।।
ಶುಕನಯ್ಯ ನಿನ್ನ ಪಾದ
ಭಕುತಿ ತತ್ಕಥಾ ಶಾಸ್ತ್ರ ।
ಯುಕುತಿವಂತರ ಸಂಗ
ಸುಖವನಿತ್ತು ।
ಸಕಲ ಕರ್ಮಗಳ ವೈ-
ದಿಕವೆನಿಸು ಒಲಿದು । ದೇ ।
ವಕಿ ತನಯ ನಿನ್ನವರ
ಮುಖದಿಂದ ಪ್ರತಿದಿನದಿ ।। ಚರಣ ।।
ಮಾತರಿಶ್ವಪ್ರಿಯ ಸುರೇತ-
ರಾಂತಕನೇ । ಪುರು ।
ಹೂತ ನಂದನ ಸುಖ
ನಿರಾತಂಕದಿ ।
ನೀ ತೋರು ಮನದಿ
ಸಂಪ್ರೀತಿಯಿಂದಲಿ ಒಲಿದು ।
ಹೋತಾಹ್ವಗುರು ಜಗನ್ನಾಥವಿಠಲ
ಬಂಧು ।। ಚರಣ ।।
****
ಶ್ರೀ ಜಗನ್ನಾಥದಾಸರು ದಾಸಪ್ಪನಿಗೆ ವೈಷ್ಣವ ದೀಕ್ಷೆಯನ್ನು ನೀಡಿ " ಸುರಸ್ಕೃತ " ಎಂಬ ಭಂಗೀ ವೀಣೆಯನ್ನು ಕೈಗಿತ್ತು ಮಂತ್ರೋಪದೇಶವನ್ನು ನೀಡಿ " ಶ್ರೀದವಿಠಲ " ಎಂಬ ಅಂಕಿತವನ್ನು ನೀಡಿ ಹರಿದಾಸ ಪಂಥದಲ್ಲಿ ಸೇರಿಸಿಕೊಂಡರು.