Saturday, 1 May 2021

ಶ್ರೀದವಿಠಲ ಸರ್ವಾಂತರಾತ್ಮ ankita jagannatha vittala shreeda vittala dasa stutih

 Ankita pradhana by Jagannatha dasa to sridavittala dasa

ರಾಗ : ಕಾಂಬೋಧಿ ತಾಳ : ಝ೦ಪೆ

ಶ್ರೀದವಿಠಲ ಸರ್ವಾಂತರಾತ್ಮ ।
ನೀ ದಯಡಿ ಒಲಿದು । ನಿ ।
ತ್ಯದಲಿ ಕಾಪಾಡುವುದು ।। ಪಲ್ಲವಿ ।। 

ಚಿಕ್ಕ ತನದಲಿ ತಂದೆ 
ತಾಯಿಗಳು ಒಲಿದು । ಪೆಸ ।
ರಿಕ್ಕಿ ಕರೆದರು ನಿನ್ನ 
ದಾಸನೆಂದೂ ।
ಅಕ್ಕರದಿ ಒಲಿದು ಭವ 
ದುಃಖಗಳ ಪರಿಹರಿಸಿ ।
ಮಕ್ಕಳನು ತಾಯಿ ಸಲಹುವ 
ತೆರದಿ ಸಂತೈಸು ।। ಚರಣ ।। 

ಶುಕನಯ್ಯ ನಿನ್ನ ಪಾದ 
ಭಕುತಿ ತತ್ಕಥಾ ಶಾಸ್ತ್ರ ।
ಯುಕುತಿವಂತರ ಸಂಗ 
ಸುಖವನಿತ್ತು ।
ಸಕಲ ಕರ್ಮಗಳ ವೈ-
ದಿಕವೆನಿಸು ಒಲಿದು । ದೇ ।
ವಕಿ ತನಯ ನಿನ್ನವರ 
ಮುಖದಿಂದ ಪ್ರತಿದಿನದಿ ।। ಚರಣ ।। 

ಮಾತರಿಶ್ವಪ್ರಿಯ ಸುರೇತ-
ರಾಂತಕನೇ । ಪುರು ।
ಹೂತ ನಂದನ ಸುಖ 
ನಿರಾತಂಕದಿ ।
ನೀ ತೋರು ಮನದಿ 
ಸಂಪ್ರೀತಿಯಿಂದಲಿ ಒಲಿದು ।
ಹೋತಾಹ್ವಗುರು ಜಗನ್ನಾಥವಿಠಲ 
ಬಂಧು ।। ಚರಣ ।। 
****

ಶ್ರೀ ಜಗನ್ನಾಥದಾಸರು ದಾಸಪ್ಪನಿಗೆ ವೈಷ್ಣವ ದೀಕ್ಷೆಯನ್ನು ನೀಡಿ " ಸುರಸ್ಕೃತ " ಎಂಬ ಭಂಗೀ ವೀಣೆಯನ್ನು ಕೈಗಿತ್ತು ಮಂತ್ರೋಪದೇಶವನ್ನು ನೀಡಿ " ಶ್ರೀದವಿಠಲ " ಎಂಬ ಅಂಕಿತವನ್ನು ನೀಡಿ ಹರಿದಾಸ ಪಂಥದಲ್ಲಿ ಸೇರಿಸಿಕೊಂಡರು.

No comments:

Post a Comment