Saturday, 1 May 2021

ಸುಜಯೀಂದ್ರತೀರ್ಥ ದಿಕ್ಪಾಲರಂತೆ ankita abhinava pranesha vittala sujayeendra teertha stutih

sujayeendra teertha rayara mutt 1986 yati stutih

by Hanumantharayaru Archaka


ರಾಗ : ಮೋಹನ  ತಾಳ : ಆದಿ 


ಸುಜಯೀಂದ್ರತೀರ್ಥ ದಿಕ್ಪಾಲರಂತೆ ।

ಸುಜನ ಮನ ಕುಮುದ 

ಶರಧಿಜರಂತೆ ರಾಜಿಸುವ ।। ಪಲ್ಲವಿ ।।


ದೇವೇಂದ್ರನಂತೆ 

ಭೂದೇವ ಗಢಣದಿ । ಮೆ ।

ರೆವ ಕಾಮಾದಿ ವಿಷಯ ತೃಣ ।

ದೇವಾಸ್ಯನು ಆವ ಸದ್ಧರ್ಮ 

ಶಿಕ್ಷಿಸುವಲ್ಲಿ ದಂಡಧರ ।

ಭೂವಲಯ ನರಯಾನನೇರಿ

 ದಿಗ್ವಿಜಿಯಿಸುವ ।। ಚರಣ ।।


ವರ ಭಕ್ತಿ ತಪ ಜ್ಞಾನ 

ಗುಣದಿ ರತ್ನಾಕರನು ।

ದುರುಳ ಮತ ಪಾನೀಯದರ 

ಮರುತನು ।

ಶರಣು ಜನ ದೀನರಿಗೆ 

ಪೆರೆಶಿರನ ಸುಹೃದಯ ।

ನಿರುತ ವೈರಾಗ್ಯದಲಿ 

ಸ್ಮರದೂರನೆಂತೆಸವ ।। ಚರಣ ।।


ಮೌನಿ ಗುರು ಸುಯಮೀ೦ದ್ರ 

ಕರಕಂಜ ಸಂಜಾತ ।

ಪ್ರಾಣಪತಿ ಶ್ರೀಮೂಲರಾಮಾರ್ಚಕ ।

ಜಾನಕೀಶಭಿನವ ಪ್ರಾಣೇಶ ವಿಠ್ಠಲನ ।

ಸಾನುರಾಗದಿ ವಲಿಸಿ

ರಾರಾಜಿಸುತಲಿಪ್ಪ ।। ಚರಣ ।।

****

No comments:

Post a Comment