Showing posts with label ವೃಂದಾವನ ದರುಶನವಾಯಿತು ಇಂದು ಪೋದವುಭವ ವೃಂದಗಳೆಲ್ಲ muddumohana vittala. Show all posts
Showing posts with label ವೃಂದಾವನ ದರುಶನವಾಯಿತು ಇಂದು ಪೋದವುಭವ ವೃಂದಗಳೆಲ್ಲ muddumohana vittala. Show all posts

Sunday, 1 August 2021

ವೃಂದಾವನ ದರುಶನವಾಯಿತು ಇಂದು ಪೋದವುಭವ ವೃಂದಗಳೆಲ್ಲ ankita muddumohana vittala

 ..

kruti by muddumohana dasaru 


ವೃಂದಾವನ ದರುಶನವಾಯಿತು

ಇಂದು ಪೋದವುಭವ ವೃಂದಗಳೆಲ್ಲ ಪ


ಕುಂದು ಕೊರತೆಯಿಲ್ಲದ ಜ್ಞಾನಗಳೂ

ಬಂದು ಘಟಿಸಿತು ಭಕುತಿ ವೈರಾಗ್ಯ

ಇಂದಿನದಿನ ಆನಂದಪುಟ್ಟಿ ಹರಿ

ದ್ವಂದ್ವ ಪದಗಳನು ತೋರಿಸುವಂಥ1


ಹಾಟಕರತ್ನ ಖಚಿತವಾದಂಥಾ

ಮಾಟಮಾದವು ಆಭರಣಗಳೂ

ಸಾಟಿಯಿಲ್ಲದ ಪಷÀ್ಪಮಾಲವ ಧರಿಸಿದ

ಕೋಟಿ ಸೂರ್ಯಪ್ರಭೆ ಸೋಲಿಸುವಂಥ2


ನೋಡಿದನಯನ ಅನ್ಯತ್ರನೋಡವೂ

ಪಾಡಿದ ಜಿಹ್ವಾ ಅನ್ಯತ್ರಪಾಡವೂ

ನಾಡಿನೊಳಿಂಥಾ ಶ್ರೀಪಾದ ರಾಜರಿಗೆ

ಈಡುಗಾಣೆ ಮುದ್ದುಮೋಹನವಿಠಲ 3

***