..
ಸತ್ಯವರ ಯತಿಗಳ ಸ್ತೋತ್ರ
ಏನ ಪೇಳಲಿ ಇವರ ಕೀರ್ತಿಶ್ರೀನಾಥ ರಾಮ ಬಂದನು ಭವ್ಯ ಮೂರ್ತಿ ಪ
ಅಂದು ನರಹರಿ ಯತಿಯು ತಂದದ್ದು ನಾ ಕರ್ಣ-ದಿಂದ ಕೇಳಿ ಬಲ್ಲೆ ನಾ ಕಂಡದ್ದು ಇಲ್ಲ ||ಇಂದೆಮ್ಮ ಗುರು ಸತ್ಯಸಂಧ ಸುತರಿಗೊಲಿದುಬಂದ ರಾಮನ ಕಣ್ಣಿಂದ ಕಂಡೇ 1
ಅವರೊಯ್ದರಿವರೊಯ್ದರೆಂಬ ಮಾತುಗಳ್ ಪುಸಿಅವನ ಸತಿಯು ತನ್ನ ತವರು ಮನೆಗೆ ||ತವಕದಿಂದಲಿ ಕರದೊಯ್ಯೆ ಗುರುಗಳ ತಪಕೇಭುವನ ತಲ್ಲಣಿಸಲು ಭುವನೇಶ ಬಂದ 2
ಆಗ ಶ್ರೀ ರಘುನಾಥ ಯೋಗಿಗೊಲಿದುಸಾಗಿ ಬಂದುದು ನಾ ಕೇಳಿ ಬಲ್ಲೆ ಈ ನ- ||ಮ್ಮ ಗುರು ಸತ್ಯವರ ಯೋಗಿಗೊಲಿದು ರಾಮಬೇಗ ಬಂದುದು ಚೆನ್ನಾಗಿ ಕಣ್ಣಿಲಿ ಕಂಡೆ 3
ನಾಮಗೊಂಡಲು ಈ ಭೂಮಿದೇವಿ ಇಲ್ಲಿತಾ ಮಗಳ ಅಳಿಯನ್ನ ಕರೆದು ಒಯ್ದು ||ಪಾಮರರಿಗೆ ಪೋದರೆಂದೆಂಬ ಭ್ರಮೆಯ ತೋರಿಈ ಮುನಿಯ ಮಾನಸ ಹಂಸನಾಗಿದ್ದ 4
ಒಂದು ಮಾಸವುಪವಾಸ ಮಾಡಿದವರ್ಗೆಬಂದೊದಗುವ ಜಗದೊಳಗೆ ಖ್ಯಾತ ||ಸಂದೇಹವಿಲ್ಲದೆ ಅನಶನ ವ್ರತವನ್ನುಒಂದು ತಿಂಗಳು ಮಾಡಿ ಇಂದಿರೇಶನ ತಂದ 5
ನಳನಾಮ ಸಂವತ್ಸರ ಫಾಲ್ಗುಣ ಬಹುಳ ದ್ವಾದಶಿನಳಿನಾಕ್ಷ ರಾಮಸ್ವಾಮಿಯು ಹೊರಟು ||ಖಳರ ಖಂಡಿಸಿ ತಾನು ಇವರ ಭಾವಕೆ ಮೆಚ್ಚಿಲಲನೆ ಸಹಿತವಾಗಿ ಭುವನೇಶ ಬಂದ6
ಗಂಗಾದಿ ಸಕಲ ತೀರ್ಥಗಳಲ್ಲಿ ಮಿಂದು ಶ್ರೀರಂಗಾದಿಯಲ್ಲಿ ಮೋಹನ ವಿಠಲನ್ನ ||ಸಂಗೀತೆಗೆ ಸರ್ವದಾಧಿಕ ಫಲಸಂಘಟಿಸುವದು ಸಜ್ಜನರು ಕೇಳಿ 7
***