Showing posts with label ನೋಡಿರೇ ನಂದ ಕಂದನಾ ನೋಡಲು ಕಣ್ಣಿನ ಪಾರಣಿ ಮಾಡುವಾ gurumahipati. Show all posts
Showing posts with label ನೋಡಿರೇ ನಂದ ಕಂದನಾ ನೋಡಲು ಕಣ್ಣಿನ ಪಾರಣಿ ಮಾಡುವಾ gurumahipati. Show all posts

Wednesday, 1 September 2021

ನೋಡಿರೇ ನಂದ ಕಂದನಾ ನೋಡಲು ಕಣ್ಣಿನ ಪಾರಣಿ ಮಾಡುವಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನೋಡಿರೇ ನಂದ ಕಂದನಾ ನೋಡಲು ಕಣ್ಣಿನ ಪಾರಣಿ ಮಾಡುವಾ ಪ 


ಸೂರಿಯಾ ನಿಳಿಯಲು ಅಪರದ ಜಾವಕ ಸಾರಿಸಿ ಗೋಧನ ತಿರುಗಿಸುತಾ ವಾರಿಗ ರೆಲ್ಲರು ವಂದಾಗಿ ಹರುಷದಿ ಧೀರನು ದಾರನು ಆಡೂತ ಬರುವಾ 1 

ಚಂಡು ಬಗರಿ ಚಿಣಿ ಕೋಲು ಚಪ್ಪಳಿಕೈಯ್ಯಾ ಹಿಂಡ ನೆರೆದು ಹಂಬಲಿ ಹಾಕುತಾ ಮಂಡಳದೊಳಗುಳ್ಳ ಆಟವ ನಾಡುತ ಪಂಡರಿ ಕಾಕ್ಷನು ಲೀಲೆಯ ನಲುವಾ 2 

ಗೋಧೂಳಿ ತುಂಬಿದ ಗುಂಗುರ ಗೂದಲು ಉದಿಸಿದ ಹಣೆಯಲಿ ಕಿರಿ ಬೆವರು ಬೆರಿಸಿ ಪರಿಪರಿ ಸ್ವರದಲ್ಲಿ ಕೊಳಲವ ನೂದುತ ಕುಣಿಯುತ ನಗೆವುತ ಬರುವಾ3 

ಕುಂಡಲ ಹೊಳೆಯುತ ಕಣ್ಣಿನ ಚಲುವಿನ ಕಸ್ತೂರಿ ರೇಖೆಯಲಿ ನೌಲಗರಿಯ ವಾರಿ ದುರುಬವ ಕಟ್ಟಿಸಿ ಪುತ್ಥಳಿ ಬರುವಾ4 

ಪೇಂದ್ಯ ಉದ್ದದ ಬಲರಾಯ ಸುಧಾಮರ ವೃಂದದಿ ಮಹಿಪತಿ ಸುತ ಪ್ರೀಯನು ಇಂದು ವದನೆಯರು ಆರುತಿ ಕೊಳುತಲಿ ವಂದದಿ ಮಧ್ಯ ನಾಯಕನಾಗಿ ಬರುವಾ5

****